ಸೌತ್ ನಟಿ ಸಮಂತಾ ಅಕ್ಕಿನೇನಿ ವೀಕೆಂಡ್‌ನಲ್ಲಿ ಏನ್ ಮಾಡಿದ್ದಾರೆ ನೋಡಿ.. ಒಂದೇ ಸಲಕ್ಕೆ 108 ಸೂರ್ಯ ನಮಸ್ಕಾರ..!
ನಟಿ ಸಮಂತಾ ಅಕ್ಕಿನೇನಿ ಫಿಟ್‌ನೆಸ್ ವಿಚಾರದಲ್ಲಿ ಫೇಮಸ್. ಬಹಳಷ್ಟು ಜನ ಇವರ ಫಿಟ್‌ನೆಸ್ ರೂಲ್ಸ್ ಫಾಲೋ ಮಾಡ್ತಾರೆ. ವೀಕೆಂಡ್‌ನಲ್ಲಿ ಇದನ್ನು ಹೌದೆಂದು ಪ್ರೂವ್ ಮಾಡಿದ್ದಾರೆ ನಟಿ.
108 ಬಾರಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಸಮಂತಾ ತಮ್ಮ ವೀಕೆಂಡ್ ಆರಂಭಿಸಿದ್ದಾರೆ. ಮತ್ತೆ ಮತ್ತೆ ಮಾಡೋ ಮೂಲಕ ನಾನು ಫಿಟ್‌ನೆಸ್ ಫ್ಯಾನ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ನಟನೆ ಬಿಟ್ಟು ಬ್ಯುಸಿನೆಸ್ ಆರಂಭಿಸಿದ್ರಾ ಸಮಂತಾ..? ಹೊಸ ಫ್ಯಾಷನ್ ಬ್ರ್ಯಾಂಡ್ 'ಸಾಕಿ' ರೆಡಿ.
ನಟಿ ಇನ್‌ಸ್ಟಾಗ್ರಾಂ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಆಗಾಗ ತಮ್ಮ ಯೋಗ, ಜಿಮ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿ ನಟಿ ಇದನ್ನು ಹಂಚಿಕೊಂಡಿದ್ದಾರೆ. ಯೋಗ ಮ್ಯಾಟ್‌ನಲ್ಲಿ ನಗುತ್ತಾ ಮಲಗಿರುವ ಫೋಟೋ ಹಾಕಿದ್ದಾರೆ. ವೀಕೆಂಡ್‌ಗೆ ಗುಡ್ ಸ್ಟಾರ್ಟ್.. 108 ಬಾರಿ ಸೂರ್ಯ ನಮಸ್ಕಾರ ಎಂದು ಬರೆದುಕೊಂಡಿದ್ದಾರೆ.
2017 ರಿಂದ ನಾನು ಪ್ರೆಗ್ನೆಂಟ್ ಆಗಿದ್ದೇನೆ - ಸಮಂತಾ ಅಕ್ಕಿನೇನಿ ಹೇಳುತ್ತಾರೆ
ಸಮಂತಾ ಅವರ ಟ್ರೈನರ್ ಸಂತೋಷ್ ಮಮಿಡಾಲಾ ನಟಿಯ ಫೋಟೋ ಶೇರ್ ಮಾಡಿ ನಟಿಯ ಡೆಡಿಕೇಷನ್ ಹೊಗಳಿದ್ದಾರೆ. ಕಳೆದ ಕೆಲವು ತಿಂಗಳಿಂದ ನಟಿ ಟೆರೇಸ್ ಗಾರ್ಡ್‌ನಿಂಗ್‌ನಲ್ಲಿಯೂ ಬ್ಯುಸಿ ಇದ್ದಾರೆ.
ತಮ್ಮ ಗಾರ್ಡನ್‌ನಲ್ಲಿ ಸಿಕ್ಕಿದ ತರಕಾರಿಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸಮಂತಾ ಕೊನೆ ಬಾರಿ 96 ರಿಮೇಕ್ ಜಾನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
