ವಿಚ್ಛೇದನದ ಬಳಿಕ ಬಿಂದಾಸ್ ಆಗಿ ತಿರುಗಾಡುತ್ತಿರುವ ನಾಗಚೈತನ್ಯ ಕೂಡ ಸಿನಿಮಾವೊಂದರ ವೀಕ್ಷಣೆಗೆ ಥಿಯೇಟರ್‌ಗೆ ತೆರಳಿದ್ದು, ಈ ವೇಳೆ ಮಾಜಿ ಪತ್ನಿ ಸಮಂತಾ ನಟನೆಯ ಖುಷಿ ಸಿನಿಮಾದ ಟ್ರೈಲರ್ ಪ್ಲೇ ಆಗಿದೆ.  ಖುಷಿ ಟ್ರೈಲರ್ ಪ್ಲೇ (Khushi Movie Trailer) ಆಗುತ್ತಿದ್ದಂತೆ ನಾಗಚೈತನ್ಯ ಥಿಯೇಟರ್‌ನಿಂದ ಹೊರ ನಡೆದಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.  

ಹೈದರಾಬಾದ್: ತೆಲುಗಿನ ಖ್ಯಾತ ಜೋಡಿ ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ವಿಚ್ಛೇದನವಾಗಿ ಎರಡು ವರ್ಷಗಳೇ ಕಳೆದಿವೆ. ಪ್ರೀತಿಸಿ ಮದ್ವೆಯಾದ ಇಬ್ಬರು ಕೆಲವೇ ಸಮಯದಲ್ಲಿ ವಿಚ್ಚೇದನ ಪಡೆದು ಬೇರೆ ಬೇರೆ ಹಾದಿ ಹಿಡಿದಿದ್ದರು. ಆದರೆ ಅವರ ಅಭಿಮಾನಿಗಳು ಮಾತ್ರ ಅದೇ ಗುಂಗಿನಲ್ಲಿದ್ದಾರೆ. ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿರುವ ನಟಿ ಸಮಂತಾ ಅವರು ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಅತ್ತ ನಾಗಚೈತನ್ಯ ಅವರು ತಮ್ಮ ರೂಮರ್‌ ಗರ್ಲ್‌ಫ್ರಂಡ್ ಶೋಭಿತಾ ಜೊತೆ ಓಡಾಡುವ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಮಧ್ಯೆ ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಖುಷಿ ಸೆಪ್ಟೆಂಬರ್ ಒಂದರಂದು ಥಿಯೇಟರ್‌ಗಳಿಗೆ ಅಪ್ಪಳಿಸಲಿದ್ದು ಚಿತ್ರತಂಡ ಹಲವು ಸ್ಥಳಗಳಿಗೆ ಭೇಟಿ ನೀಡಿ ಭರ್ಜರಿ ಪ್ರಮೋಷನ್‌ನಲ್ಲಿ ತೊಡಗಿದೆ. ಖುಷಿ ಸಿನಿಮಾದ ಟ್ರೈಲರ್‌ಗಳು ಥಿಯೇಟರ್‌ಗಳಲ್ಲಿ ವಿರಾಮದ ಮಧ್ಯೆ ಪ್ಲೇ ಆಗುತ್ತಿದೆ. ಇದೆಲ್ಲಾ ಮಾಮೂಲಿ ವಿಷ್ಯ ಹೊಸದೇನು ಹೇಳಿ ಅಂತಿರಾ ಹೇಳ್ತಿವಿ ನೋಡಿ ವಿಷಯ ಇಲ್ಲೇ ಇದೆ. 

Add Asianetnews Kannada as a Preferred SourcegooglePreferred

ವಿಚ್ಛೇದನದ ಬಳಿಕ ಬಿಂದಾಸ್ ಆಗಿ ತಿರುಗಾಡುತ್ತಿರುವ ನಾಗಚೈತನ್ಯ ಕೂಡ ಸಿನಿಮಾವೊಂದರ ವೀಕ್ಷಣೆಗೆ ಥಿಯೇಟರ್‌ಗೆ ತೆರಳಿದ್ದು, ಈ ವೇಳೆ ಮಾಜಿ ಪತ್ನಿ ಸಮಂತಾ ನಟನೆಯ ಖುಷಿ ಸಿನಿಮಾದ ಟ್ರೈಲರ್ ಪ್ಲೇ ಆಗಿದೆ. ಖುಷಿ ಟ್ರೈಲರ್ ಪ್ಲೇ (Khushi Movie Trailer) ಆಗುತ್ತಿದ್ದಂತೆ ನಾಗಚೈತನ್ಯ ಥಿಯೇಟರ್‌ನಿಂದ ಹೊರ ನಡೆದಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಮಾಜಿ ಪತ್ನಿ ಪತಿ ಅಥವಾ ಎಕ್ಸ್‌ಗಳು ಎದುರು ಬದುರಾಗುವುದು, ಅವರ ವಿಚಾರಗಳನ್ನು ತಿಳಿಯುವುದು ಯಾರಿಗೂ ಇಷ್ಟವಿರುವುದಿಲ್ಲ, ಹಾಗೆಯೇ ನಟ ನಾಗಚೈತನ್ಯಗೆ ತನ್ನ ಮಾಜಿ ಪತ್ನಿಯ ಸಿನಿಮಾದ ಟ್ರೈಲರ್ ನೋಡಲು ಇರಿಸು ಮುರಿಸಾಗಿದ್ದು ಅವರು ಥಿಯೇಟರ್‌ನಲ್ಲಿ ಸಿನಿಮಾ ಇಂಟರ್‌ವಲ್‌ ವೇಳೆ ಪ್ಲೇ ಆದ ಖುಷಿ ಟ್ರೈಲರ್ ನೋಡಿ ಥಿಯೇಟರ್‌ನಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. 

ದೂರವಾದ್ರೂ ಹೊಟ್ಟೆ ಬಳಿ ನಾಗಚೈತನ್ಯ ಕುರುಹು: ಯಾಕಪ್ಪಾ ಇದು ಅಂತಿದ್ದಾರೆ ಫ್ಯಾನ್ಸ್!

ಆದರೆ ಕೆಲವು ಮಾಧ್ಯಮಗಳು ಅವರು ಬೇರೆ ಕೆಲಸದ ಹಿನ್ನೆಲೆಯಲ್ಲಿ ಥಿಯೇಟರ್‌ನಿಂದ ಹೊರ ನಡೆದಿದ್ದಾರೆ ಎಂದು ವರದಿ ಮಾಡಿವೆ. ಆದರೆ ಅವರು ನಿಜವಾಗಿಯೂ ಏಕೆ ಥಿಯೇಟರ್‌ನಿಂದ ಅರ್ಧದಲ್ಲೇ ಹೊರಟು ಹೋದರು ಎಂದು ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ, ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ಅಭಿಮಾನಿಗಳು ಈ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಕಚ್ಚಾಡುತ್ತಿದ್ದಾರೆ. 

ಇತ್ತೀಚೆಗೆ ನಾಗಚೈತನ್ಯ (Naga Chaitanya) ತಮ್ಮ ವಿಚ್ಛೇದನದ (Divorce) ಬಗ್ಗೆ ಮಾತನಾಡಿದ್ದರು,. ಅಲ್ಲದೇ ತಾವಿಬ್ಬರೂ ಕೂಡ ಹೇಗೆ ಆ ವಿಚಾರದಿಂದ ಹೊರಬಂದು ಬೇರೆ ಹಾದಿ ಹಿಡಿದಿದ್ದೇವೆ ಎಂಬುದನ್ನು ಹೇಳಿದ್ದರು. ನಾವಿಬ್ಬರೂ ಆ ಘಟನೆಯಿಂದ ಹೊರಬಂದು ನಮ್ಮ ಹೇಳಿಕೆಗಳನ್ನು ನೀಡಿದ್ದೇವೆ ಮತ್ತು ನಾವಿಬ್ಬರೂ ಪರಸ್ಪರ ಅಪಾರ ಗೌರವವನ್ನು ಹೊಂದಿದ್ದೇವೆ. ಆಕೆ ಏನು ಮಾಡುತ್ತಿದ್ದಾಳೆ ಎಂದು ನಾನು ಯಾವಾಗಲೂ ಗಮನಿಸುತ್ತಿರುತ್ತೇನೆ. ಅವಳ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಗೌರವ ಇದ್ದೇ ಇರುತ್ತದೆ ಅಷ್ಟೇ. ಅದರಾಚೆಗೆ ಕೆಲವರು ಅಂಕಣಗಳನ್ನು ತುಂಬಲು ಏನೇನೋ ಬರೆದುಕೊಳ್ಳುತ್ತಿದ್ದಾರೆ ಅದರ ಹೊರತು ಬೇರೇನೂ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈ ನಾಗಚೈತನ್ಯ ಹೆಸರು ನಟಿ ಶೋಭಿತಾ ಧೂಳಿಪಲ (Sobhita Dhulipala) ಅವರೊಂದಿಗೆ ತಳುಕು ಹಾಕಿಕೊಂಡಿದ್ದು ಅವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ರೂಮರ್‌ಗಳಿವೆ. 

ಸಮಂತಾ ಬ್ಯಾಕ್‌ ಪೋಸ್‌ ವೈರಲ್: ಮೊದಲ ಸಲ ಬ್ಯಾಕ್‌ಲೆಸ್‌ ಆದ ನಟಿ!

ಕಳೆದ ವರ್ಷ ರಿಲೀಸ್ ಆದ ಲಾಲ್‌ ಸಿಂಗ್ ಚಡ್ಡಾದಲ್ಲಿ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ನಂತರ ಈ ವರ್ಷ ಮೇನಲ್ಲಿ ರಿಲೀಸ್ ಆದ ಕಸ್ಟಡಿ ಸಿನಿಮಾದಲ್ಲೂ ಅವರು ನಟಿಸಿದ್ದು ಅದು ಥಿಯೇಟರ್‌ನಲ್ಲಿ ದೊಡ್ಡ ಹಿಟ್ ಕಾಣಲಿಲ್ಲ.