ಒಂದೇ ಹುಡುಗಿ ಬೋರ್, ಕಂಟ್ರೋಲ್‌ಗೆ ಬರುವವರೆಗೂ ಮದ್ವೆ ಆಗಲ್ಲ: ಸಲ್ಲು ಹೇಳಿದ್ದ ಮಾತನ್ನ ರಿವೀಲ್ ಮಾಡಿದ ಭಾಗ್ಯಶ್ರೀ
ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಸಂದರ್ಶನ ವೈರಲ್ ಅಗುತ್ತಿದೆ..ನಾನು ಒಳ್ಳೆ ಹುಡುಗ ಅಲ್ಲ ಒಂದೇ ಹುಡುಗಿ ಜೊತೆಗಿರಲು ಬೋರ್....
1997ರಲ್ಲಿ ಅಮ್ಮಾವ್ರ ಗಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಭಾಗ್ಯಶ್ರೀ ಸಲ್ಮಾನ್ ಖಾನ್ ಜೊತೆ Maine Pyar Kiya ಸಿನಿಮಾದಲ್ಲಿ ಅಭಿನಯಿಸಿದ್ದರು. ಮೊದಲ ಚಿತ್ರದಲ್ಲೇ ಡೆಬ್ಯೂ ಅವಾರ್ಡ್ ಮತ್ತು 38ನೇ ಫಿಲ್ಮಫೇರ್ ನಟಿ ಅವಾರ್ಡ್ ಪಡೆದ ಭಾಗ್ಯ ಸಲ್ಮಾನ್ ಖಾನ್ ಜೊತೆ ನಡೆದ ಸಂದರ್ಶನದ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಒಳ್ಳೆ ಹುಡುಗ ಅಲ್ಲ ಒಳ್ಳೆ ಹುಡುಗಿ ಬೇಡ ಎಂದು ಹೇಳಲು ಕಾರಣವೇನು ಎಂದು ಭಾಗ್ಯ ತಿಳಿಸಿದ್ದಾರೆ.
ಸಿನಿಮಾ ಜರ್ನಿ ಆರಂಭಿಸಿ ನೇಮ್ ಆಂಡ್ ಫೇಮ್ ಬಂದ ಮೇಲೆ ಸಲ್ಮಾನ್ ಖಾನ್ ಸಾಕಷ್ಟು ಜನರ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದರು. ಎರಡು ಮೂರು ವರ್ಷಗಳು ಆಗುತ್ತಿದ್ದಂತೆ ಬ್ರೇಕಪ್ ಮಾಡಿಕೊಳ್ಳುತ್ತಾರೆ ಯಾಕೆ ಈ ರೀತಿ ಮಾಡುತ್ತಾರೆ ಎಂಬುದರ ಬಗ್ಗೆ ಯಾರ ಬಳಿಯೂ ಉತ್ತರ ಇರಲಿಲ್ಲ ಆದರೆ ಇದಕ್ಕೆ ಹಲವು ವರ್ಷಗಳ ಹಿಂದೆಯೇ ಭಾಗ್ಯ ಉತ್ತರ ಕೊಟ್ಟಿದ್ದಾರೆ. ಈಗ ಭಾಗ್ಯ ಹೇಳಿಕೆ ವೈರಲ್ ಆಗುತ್ತಿದೆ. ಸೂರಜ್ ನಿರ್ದೇಶನ ಮಾಡಿ, ರಾಜಶ್ರೀ ನಿರ್ಮಾಣ ಮಾಡಿರುವ ಮೈನೆ ಪ್ಯಾರ್ ಕಿಯಾ ಒಂದು ರೊಮ್ಯಾಂಟಿಕ್ ಮ್ಯೂಸಿಕಲ್ ಫಿಲ್ಮ.
ನಾಲ್ಕು ಮಕ್ಕಳಾದ ಮೇಲೆ ಸಲ್ಮಾನ್ ಖಾನ್ ಅಪ್ಪನ ಕಣ್ಣು ನಟಿ ಹೆಲೆನ್ ಮೇಲೆ ಬಿದ್ದಾಗ...
'ಸಿನಿಮಾ ಸೆಟ್‌ನಲ್ಲಿ ನಾನು ಮೊದಲು ಸಲ್ಮಾನ್ ಖಾನ್‌ರನ್ನು ಭೇಟಿ ಮಾಡಿದ್ದು, ಆಗ ಸಲ್ಲು ನೀಡಿದ ಒಂದು ಹೇಳಿಕೆ ಈಗ ಸತ್ಯ ಅನಿಸುತ್ತಿದೆ. ಏನು ಗೊತ್ತಾ? ಒಳ್ಳೆ ಹುಡುಗಿಯರು ನನ್ನನ್ನು ಪ್ರೀತಿಸಬಾರದು ಎಂದು ಸಲ್ಮಾನ್ ಹೇಳಿದ್ದರು. ಯಾಕೆ ಈ ರೀತಿ ಹೇಳುತ್ತಿದ್ದಾರೆಂದು ನನಗೆ ಅರ್ಥ ಆಗಲಿಲ್ಲ ಸುಮ್ಮನಿರದೆ ಮರು ಪ್ರಶ್ನೆ ಮಾಡಿದೆ ಆಗ ನಾನು ಒಳ್ಳೆ ಹುಡುಗ ಅಲ್ಲ ಹೀಗಾಗಿ ಒಳ್ಳೆ ಹುಡುಗಿಯರು ನನ್ನನ್ನು ಪ್ರೀತಿಸಬಾರದು. ನನ್ನ ಬಗ್ಗೆ ನಾನು ಅರ್ಥ ಮಾಡಿಕೊಂಡಿರುವ ಪ್ರಕಾರ ಹೆಚ್ಚು ದಿನಗಳ ಕಾಲ ಒಬ್ಬರ ಜೊತೆಗಿರಲು ಆಗುವುದಿಲ್ಲ. ನನಗೆ ತುಂಬಾ ಬೇಗ ಬೋರ್ ಆಗುತ್ತದೆ ಈ ಕೆಟ್ಟ ಅಭ್ಯಾಸವನ್ನು ನಿಲ್ಲಿಸಬೇಕು ಅನಂತರ ನಾನು ಒಳ್ಳೆ ಸಂಗಾತಿಯನ್ನು ಹುಡುಕಿ ಮದುವೆ ಮಾಡಿಕೊಳ್ಳುವೆ. ಒಂದು ಸಲ ಒಬ್ಬರನ್ನು ದೂರ ಇಟ್ಟರೆ ಅವರು ಮತ್ತೆ ನನ್ನ ಬಳಿ ಬರಬಾರದು ಎಂದು ಸಲ್ಮಾನ್ ಹೇಳಿದಾಗ ನನಗೆ ಶಾಕ್ ಆಯ್ತು ಆದರೆ ಈಗ ಅವರ ಮಾತುಗಳು ಸತ್ಯ ಅನಿಸುತ್ತಿದೆ' ಎಂದು ಭಾಗ್ಯಶ್ರೀ ವೈಲ್ಡ್‌ಫಿಲ್ಮ ಸಂದರ್ಶನದಲ್ಲಿ ಹೇಳಿದ್ದಾರೆ.
ಮೊದಲ ಸಿನಿಮಾದ ಯಶಸ್ಸಿನ ಅಹಂಕಾರದಿಂದ ಹಿರಿಯ ನಟನ ಕೆಂಗಣ್ಣಿಗೆ ಗುರಿಯಾಗಿದ್ದ ಸಲ್ಮಾನ್ ಖಾನ್!
'ನನ್ನ ಪ್ರಕಾರ ಸಲ್ಮಾನ್ ಖಾನ್ ಹುಡುಗಿಯರನ್ನು ಹುಡುಕಿಕೊಂಡು ಪ್ರೀತಿಸಬೇಕು ಸಂಗಾತಿ ಬೇಕು ಎಂದು ಹೋಗಿಲ್ಲ ಹುಡುಗಿಯರೇ ಅವರ ಹಿಂದೆ ಹೋಗಿರುವುದು ಅನಿಸುತ್ತದೆ. ಫ್ಯಾಮಿಲಿಯನ್ನು ಕಾಪಾಡಿಕೊಳ್ಳುವ ರೀತಿ ನೋಡಿದರೆ ಯಾರಿಗಾದರೂ ಸಲ್ಲು ಗುಣ ಇಷ್ಟವಾಗುತ್ತದೆ. ಒಮ್ಮೆ ಸಲ್ಮಾನ್ ಖಾನ್ ಒಬ್ಬರನ್ನು ಇಷ್ಟ ಪಡಲು ಶುರು ಮಾಡಿದರೆ ತುಂಬಾ ಕ್ರೇಜಿಯಾಗುತ್ತಾರೆ ಹಾಗೂ ಕಾಪಾಡಿಕೊಳ್ಳುತ್ತಾರೆ. ಈ ಸ್ಪಾರ್ಕ್ ನೋಡಿ ಹುಡುಗಿಯರು ಪ್ರೀತಿಯಲ್ಲಿ ಬೀಳುತ್ತಾರೆ ಈಗನ ಕಾಲದಲ್ಲಿ ಕೆಲವರಿಗೆ ಇಷ್ಟವಾಗುವುದಿಲ್ಲ' ಎಂದಿದ್ದಾರೆ ಭಾಗ್ಯಶ್ರೀ.