ನಾಲ್ಕು ಮಕ್ಕಳಾದ ಮೇಲೆ ಸಲ್ಮಾನ್ ಖಾನ್ ಅಪ್ಪನ ಕಣ್ಣು ನಟಿ ಹೆಲೆನ್ ಮೇಲೆ ಬಿದ್ದಾಗ...
ನೃತ್ಯಗಳ ರಾಣಿ ಎಂದೇ ಹೆಸರಾಗಿರುವ ನಟಿ ಹೆಲೆನ್ ಅವರು ನಟ ಸಲ್ಮಾನ್ ಖಾನ್ ತಂದೆಯ ಎರಡನೆಯ ಪತ್ನಿ. ನಾಲ್ಕು ಮಕ್ಕಳ ತಂದೆಯಾಗಿದ್ದ ಸಲೀಂ ಅವರನ್ನು ಮದುವೆಯಾಗುವಾಗ ಅವರು ಎದುರಿಸಿದ್ದ ಸಮಸ್ಯೆ ಏನು?
ನಟಿ ಹೆಲೆನ್ (Helen) ಯಾರಿಗೆ ತಾನೇ ಗೊತ್ತಿಲ್ಲ? 60ರ ದಶಕದಿಂದ ಕೆಲ ದಶಕಗಳವರೆಗೆ ಬಾಲಿವುಡ್ ಆಳಿದ್ದ, ಹಲವರ ನಿದ್ದೆ ಕದ್ದ ಬೆಡಗಿ ಈಕೆ. ಡಿಜಿಟಲ್ ಯುಗದಿಂದ ಬಹುದೂರವಾಗಿದ್ದ ದಿನಗಳಲ್ಲಿ ತಮ್ಮ ಅಂದವಾದ ಮೈಮಾಟವನ್ನು ಪ್ರದರ್ಶನ ಮಾಡುತ್ತಾ ಎಷ್ಟೋ ಮಂದಿಯ ನಿದ್ದೆಯನ್ನೇ ಹಾರಿಸಿದ್ದ ಹೆಲೆನ್ ಅವರ ಸೌಂದರ್ಯಕ್ಕೆ ಸರಿಯಾಟಿಯಿಲ್ಲ. ಅವರ ನೃತ್ಯದ ಶೈಲಿಗೆ ಮನಸೋಲದವರೇ ಇಲ್ಲ. ಇಂದಿನ ನಟಿಯರು ಸ್ವಲ್ವವೂ ಮಾನ ಮರ್ಯಾದೆಗೆ ಅಂಜದೆ ಅಂಗಗಳನ್ನೆಲ್ಲಾ ಪ್ರದರ್ಶನ ಮಾಡುವಂತೆ ಅಂದಿನ ದಶಕಗಳಲ್ಲಿ ಇಲ್ಲದ ಕಾರಣ, ನಟಿ ಹೆಲೆನ್ ಅವರನ್ನು ನೋಡುವುದಕ್ಕಾಗಿಯೂ ಒಂದಿಷ್ಟು ಮಂದಿ ಚಿತ್ರ ಮಂದಿರಗಳಿಗೆ ನುಗ್ಗಿದ್ದುಂಟು. ಆದರೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದೇ ಹೆಲೆನ್ ಬಾಲಿವುಡ್ನ ಸೂಪರ್ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ಚಿಕ್ಕಮ್ಮನೆಂದು!
ಅರ್ಥಾತ್, ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ (Saleem Khan) ಅವರಿಗೆ ಇಬ್ಬರು ಪತ್ನಿಯರು. ಮೊದಲನೆಯವರ ಹೆಸರು ಸುಶೀಲಾ ಚರಕ್. ನಂತರ ಇವರ ಹೆಸರನ್ನು ಸಲ್ಮಾ ಎಂದು ಬದಲಾಯಿಸಲಾಯಿತು. ಈ ಜೋಡಿಗೆ ಸಲ್ಮಾನ್ ಖಾನ್ ಸೇರಿ ನಾಲ್ವರು ಮಕ್ಕಳು. ನಂತರ ಸಲೀಂ ಅವರನ್ನು ನಟಿ ಹೆಲೆನ್ ಅವರನ್ನು ಮದುವೆಯಾದರು. ಇದೇ ಕಾರಣಕ್ಕೆ ಹೆಲೆನ್ ಸಲ್ಮಾನ್ ಅವರ ಚಿಕ್ಕಮ್ಮ. ಇದೀಗ ಹೆಲೆನ್ ಅವರು ಅಂದಿನ ದಿನಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ನಾಲ್ಕು ಮಕ್ಕಳ ತಂದೆಯನ್ನು ಮದುವೆಯಾಗುವಾಗ ತಮಗೆ ಯಾವ ರೀತಿಯ ಅನುಭವವಾಗಿತ್ತು ಎಂಬ ಬಗ್ಗೆ ತಿಳಿಸಿದ್ದಾರೆ. ಸಲೀಂ ಖಾನ್ ಅವರ ಜೊತೆಗೆ ಡೇಟಿಂಗ್ ಪ್ರಾರಂಭಿಸಿದಾಗ ಅವರ ಮೊದಲ ಪತ್ನಿ ಸಲ್ಮಾ ಖಾನ್ ಅವರಿಗೆ ಎಷ್ಟು ಕಷ್ಟವಾಯಿತು ಎಂಬುದನ್ನು ತಿಳಿಸಿದ್ದಾರೆ. ಅರ್ಬಾಜ್ ಖಾನ್ ಅವರ ಚಾಟ್ ಶೋ ದಿ ಇನ್ವಿನ್ಸಿಬಲ್ಸ್ ವಿತ್ ಅರ್ಬಾಜ್ ಖಾನ್ (The Invincibles with Arbaaz Khan) ನಲ್ಲಿ ಅವರು ಈ ಎಲ್ಲಾ ವಿಷಯಗಳನ್ನು ಹೇಳಿದ್ದಾರೆ.
ಮದ್ವೆಯಾಗಿ ಏಕಾಏಕಿ ಶಾಕ್ ಕೊಟ್ಟ ನಟಿ Swara Bhasker- ಯಾರೀ 'ನಿಗೂಢ' ಗಂಡ?
ಅಷ್ಟಕ್ಕೂ 1950-60ರ ದಶಕದ ನೃತ್ಯ ರಾಣಿ (Dance queen) ಎಂದೇ ಗುರುತಿಸಲಾಗಿದ್ದ ಹೆಲೆನ್ ಅವರ ಜೀವನವು ಏರಿಳಿತಗಳಿಂದ ಕೂಡಿದೆ. ಅವರು ತಮ್ಮ ಜೀವನ ಮತ್ತು ವೃತ್ತಿಜೀವನದ ಆರಂಭಿಕ ಹಂತದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಿದರು. ಅವರು ಉದ್ಯಮಕ್ಕೆ ಪ್ರವೇಶಿಸಿದಾಗ ಅವರ ಜೀವನವು ವಿಭಿನ್ನವಾಗಿತ್ತು, ಆದರೆ ಸಲೀಂ ಖಾನ್ ಅವರನ್ನು ಮದುವೆಯಾದ ನಂತರ ಅವರ ಜೀವನವು ಬದಲಾಯಿತು. ಈ ಕುರಿತು ಅವರು ಮಾತನಾಡಿದ್ದಾರೆ. 'ನಾನು ಸಲೀಂ ಖಾನ್ ಅವರನ್ನು ಪ್ರೀತಿಸುತ್ತಿದ್ದೆ. ಇಬ್ಬರೂ 1980 ರಲ್ಲಿ ವಿವಾಹವಾದರು. ಆಗ ಅವರಿಗೆ 45 ವರ್ಷ ವಯಸ್ಸಾಗಿದ್ದು, ನಾಲ್ಕು ಮಕ್ಕಳ ತಂದೆಯಾಗಿದ್ದರು. ನನಗೆ 42 ವರ್ಷ ವಯಸ್ಸಾಗಿತ್ತು. ನಮ್ಮಿಬ್ಬರ ಈ ಮದುವೆಗೆ ಮನೆಯವರೆಲ್ಲ ವಿರೋಧ ವ್ಯಕ್ತಪಡಿಸಿದ್ದರು' ಎಂದಿದ್ದಾರೆ ಹೆಲೆನ್.
'ಸಲೀಂ ಖಾನ್ ಅವರು ನನಗೆ ಒಂದು ಪಾತ್ರವನ್ನು ಆಫರ್ (Offer) ಮಾಡಿದ್ದರು. ಅದರ ನಂತರ ನಾವು ಸ್ನೇಹಿತರಾದೆವು. ಪ್ರೀತಿಗೆ ಬಿದ್ದೆವು. ಮದುವೆಯಾಗಲು ನಿರ್ಧರಿಸಿದೆವು. ಆದರೆ ಆ ಸಮಯದಲ್ಲಿ ಸಲ್ಮಾ ತುಂಬಾ ತೊಂದರೆ ಅನುಭವಿಸಬೇಕಾಯಿತು. ಆದರೆ, ಸಲೀಂ ಅವರನ್ನು ಅವರ ಕುಟುಂಬದಿಂದ ಬೇರ್ಪಡಿಸಲು ನಾನು ಎಂದಿಗೂ ಬಯಸಲಿಲ್ಲ. ಅದಕ್ಕಾಗಿ ಮದುವೆಯಾದರೂ ಸದಾ ಆ ಜೋಡಿಯನ್ನು ಖುಷಿಯಾಗಿ ಇಡಲು ಬಯಸಿದ್ದೆ. ಆದರೆ ನಾನು ಮದುವೆಯಾಗಲೇಬೇಕಿತ್ತು. ಬೇರೆ ವಿಧಿ ಇರಲಿಲ್ಲ. ನಾನು ಖಾನ್ ಕುಟುಂಬಕ್ಕೆ ಹತ್ತಿರವಾಗಲು ಅದೃಷ್ಟ ಮಾತ್ರ ನನಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. ನಂತರ ಕಾಲ ಕ್ರಮೇಣ ಎಲ್ಲವೂ ಸರಿಯಾಯಿತು. ಆ ದಂಪತಿಗೆ ನಾನು ಯಾವುದೇ ರೀತಿಯಲ್ಲಿ ತೊಂದರೆ ಮಾಡಲಿಲ್ಲ ಎಂದಿದ್ದಾರೆ.
ಈ ಬಾಲಿವುಡ್ ನಟಿಯರ ಬೋಲ್ಡ್ ದೃಶ್ಯ ನೋಡಲಾಗದೇ ಕಣ್ಮುಚ್ಚಿಕೊಂಡ ನೆಟ್ಟಿಗರು!
1990 ರಲ್ಲಿ ಫಿಲ್ಮ್‌ಫೇರ್‌ಗೆ (Filmfare) ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಅವರು ಈ ವಿಷಯದ ಬಗ್ಗೆ ಹೇಳಿದ್ದಾರೆ. ತಂದೆ ಸಲೀಂ ಖಾನ್ ಅವರನ್ನು ಮದುವೆಯಾಗುವುದಾಗಿ ಹೇಳಿದಾಗ ತಮ್ಮ ತಾಯಿ ಹೇಗೆ ಅತೃಪ್ತರಾಗಿದ್ದರು ಎಂಬುದರ ಕುರಿತು ಮಾತನಾಡಿದರು. ಅನೇಕ ಏರಿಳಿತಗಳ ಹೊರತಾಗಿಯೂ, ಹೆಲನ್ ಆಂಟಿ ತಮ್ಮ ಕುಟುಂಬದ ಭಾಗವಾಗಿದ್ದಾರೆ ಎಂದು ಅವರು ಹೇಳಿದ್ದರು.