ಸಲ್ಮಾನ್ ಖಾನ್‌ನನ್ನು ಹಾಡಿ ಹೊಗಳಿದ ಸುಧಾ ಮೂರ್ತಿ; 'ವಾವ್' ಎಂದ ಕಪಿಲ್ ಶರ್ಮಾ
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಾಣ ಮೂರ್ತಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹಾಡಿಹೊಗಳಿದ್ದಾರೆ.
ಹಿಂದಿ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಧಾ ನಾರಾಯಾಣ ಮೂರ್ತಿ ಭಾಗಿಯಾಗಿದ್ದರು. ಸುಧಾ ಮೂರ್ತಿ ಜೊತೆ ಬಾಲಿವುಡ್ ಸ್ಟಾರ್ ರವೀನಾ ಟಂಡನ್, ಖ್ಯಾತ ನಿರ್ಮಾಪಕಿ ಆಸ್ಕರ್ ವಿಜೇತೆ ಗುನೀತ್ ಮೊಂಗಾ ಕೂಡ ಭಾಗಿಯಾಗಿದ್ದರು. ಹಿಂದಿ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಹಿಂದಿ ಸಿನಿಮಾ ಹಾಗೂ ಸ್ಟಾರ್ಸ್‌ಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಬಗ್ಗೆ ಮಾತನಾಡಿ, ಹಾಡಿಹೊಗಳಿದ್ದಾರೆ. ಬಜರಂಗಿ ಭಾಯಿಜಾನ್ ಸಿನಿಮಾಗೆ ಸಲ್ಮಾನ್ ಖಾನ್ ಅವರೇ ಯಾಕೆ ಸೂಕ್ತ ಎಂದು ವಿವರಿಸಿದ್ದಾರೆ.
'ಮಗುವಿನ ಮುಗ್ದಯ ಸಲ್ಮಾನ್ ಖಾನ್ ಮಾತ್ರ ತೆರೆಮೇಲೆ ಅಂತ ಪಾತ್ರ ತರಬಲ್ಲರು. ಅವರು ಬಜರಂಗಿ ಭಾಯಿಜಾನ್ ಮಾಡಲು ಫಿಟ್ ಆಗಿದ್ದಾರೆ' ಎಂದು ಸುಧಾ ಮೂರ್ತಿ ಹೇಳಿದ್ದಾರೆ. ಸುಧಾ ಮೂರ್ತಿ ಮಾತಿಗೆ ಕಪಿಲ್ ಶರ್ಮಾ ವಾವ್ ಎಂದು ಸಂತಸ ವ್ಯಕ್ತಪಡಿಸಿದರು. ಸುಧಾ ಮೂರ್ತಿ ಅವರು ಸಲ್ಮಾನ್ ಖಾನ್ ಬಗ್ಗೆ ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಲ್ಮಾನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
2015 ರಲ್ಲಿ ಬಿಡುಗಡೆಯಾದ ಬಜರಂಗಿ ಭಾಯಿಜಾನ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪಾಕ್ ಮೂಲದ ಪುಟ್ಟ ಬಾಲಕಿ ಕುಟುಂಬದಿಂದ ದೂರಾಗಿ ಭಾರತದಲ್ಲಿರುವ ಸಲ್ಮಾನ್ ಖಾನ್ ಅವರಿಗೆ ಸಿಗುತ್ತಾಳೆ. ಮಾತು ಬಾರದ ಬಾಲಕಿಯನ್ನು ಮರಳಿ ಪಾಕಿಸ್ತಾನಕ್ಕೆ ಸೇರಿಸುವ ಕಥೆ ಸಿನಿಮಾದಲ್ಲಿತ್ತು. ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು, ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿತ್ತು. ಖ್ಯಾತ ನಿರ್ದೇಶಕ ರಾಜಮೌಳಿ ತಂದೆ ಕೆ ವಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು.
ನಾರಾಯಣ ಮೂರ್ತಿಯನ್ನು ಮೊದಲು 'ಯಾರಿದು ಅಂತಾರಾಷ್ಟ್ರೀಯ ಬಸ್ ಕಂಡ್ಟರ್' ಅಂದ್ಕೊಂಡಿದ್ರಂತೆ ಸುಧಾ ಮೂರ್ತಿ
ಸದ್ಯ ಈ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಸಿದ್ಧವಾಗುತ್ತಿದೆ. ಸದ್ಯ ಪಾರ್ಟ್-2ಗೆ ಕೆ ವಿ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ಪವನ್ ಪುತ್ರ ಭಾಯಿಜಾನ್ ಎಂದು ಹೆಸರಿಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸದ್ಯದಲ್ಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು ಸಲ್ಮಾನ್ ಖಾನ್ ಜೊತೆ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಕರೀನಾ ಕಪೂರ್ ಜಾಗಕ್ಕೆ ಪೂಜಾ ಎಂಟ್ರಿ ಕೊಡುತ್ತಾರಾ ಎಂದು ಕಾದು ನೋಡಬೇಕು.
ಲಂಡನ್‌ನಲ್ಲಿ ಸುಧಾಮೂರ್ತಿ ವಿಳಾಸ ನೋಡಿ ನಂಬಲು ನಿರಾಕರಿಸಿದ ವಲಸೆ ಅಧಿಕಾರಿ
ಸಲ್ಮಾನ್ ಖಾನ್ ಕೊನೆಯದಾಗಿ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ನಿರೀಕ್ಷೆಯ ಮಟ್ಟದ ಗೆಲುವು ದಾಖಲಿಸಿಲ್ಲ. ಆದರೆ ಬಾಕ್ಸ್ ಆಫೀಸ್‌ನಲ್ಲಿ ತಕ್ಕಮಟ್ಟಿಗೆ ಕಲೆಕ್ಷನ್ ಮಾಡಿತ್ತು. ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಸದ್ಯ ಸಲ್ಮಾನ್ ಖಾನ್ ಟೈಗರ್ 3 ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.