Asianet Suvarna News Asianet Suvarna News

1,100 ಕಿ.ಮೀ ಸೈಕಲ್‌ನಲ್ಲಿ ಬಂದ ಅಭಿಮಾನಿ ಭೇಟಿಯಾದ ಸಲ್ಮಾನ್ ಖಾನ್; ಫೋಟೋ ವೈರಲ್

1,100 ಕಿ.ಮೀ ಸೈಕಲ್‌ನಲ್ಲಿ ಬಂದ ಅಭಿಮಾನಿಯನ್ನು ಭೇಟಿಯಾಗಿ ಸಲ್ಮಾನ್ ಖಾನ್ ಸಂತಸ ಪಟ್ಟಿದ್ದಾರೆ. 

Salman Khan Poses With Fan Who Cycled 1,100 km To Meet Him sgk
Author
First Published Jan 3, 2023, 1:42 PM IST

ನೆಚ್ಚಿನ ಕಲಾವಿರದನ್ನು ನೋಡಲು, ಮಾತನಾಡಿಸಲು ಅಭಿಮಾನಿಗಳು ಏನ್ ಬೇಕಾದರು ಮಾಡುತ್ತಾರೆ. ಎಷ್ಟು ರಿಸ್ಕ್ ಬೇಕಾದ್ರು ತೆಗೆದುಕೊಳ್ಳುತ್ತಾರೆ. ನೆಚ್ಚಿನ ನಟನ ಮೇಲೆ ವಿವಿಧ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಾರೆ. ಸಲ್ಮಾನ್ ಖಾನ್ ಅಭಿಮಾನಿಯೊಬ್ಬ ಬರೋಬ್ಬರಿ 1100 ಕಿಲೋಮೀಟರ್‌ನಿಂದ ಸೈಕಲ್ ಸವಾರಿ ಮಾಡಿಕೊಂಡು ಮುಂಬೈಗೆ ಬಂದಿದ್ದಾರೆ. ಅಭಿಮಾನಿಯ ಅಭಿಮಾನಕ್ಕೆ ಮನ ಸೋತ ಸಲ್ಮಾನ್ ಖಾನ್ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಜೊತೆ  ಸಮಯ ಕಳೆದಿದ್ದಾರೆ. 

ಮಧ್ಯಪ್ರದೇಶದ ಜಬಲ್‌ಪುರದ ಅಭಿಮಾನಿ ಇತ್ತೀಚೆಗೆ ಸೈಕಲ್‌ನಲ್ಲಿ ಸೂಪರ್‌ಸ್ಟಾರ್ ಅವರನ್ನು ಭೇಟಿ ಮಾಡಲು ಮುಂಬೈ  ನಿವಾಸಕ್ಕೆ ಬಂದಿದ್ದರು. ತನ್ನನ್ನು ಸಲ್ಮಾನ್ ಖಾನ್ ಅವರ 'ದಿವಾನ' ಎಂದು ಹೇಳಿಕೊಳ್ಳುವ  ಅಭಿಮಾನಿ ಕೊನೆಗೂ ಸಲ್ಮಾನ್ ಭೇಟಿಯಾಗಿ ಸಂತಸ ಪಟ್ಟರು.  ಬರೋಬ್ಬರಿ 1,100 ಕಿಲೋಮೀಟರ್ ನಿಂದ ಬಂದ ಅಭಿಮಾನಿಯ ಅದೃಷ್ಟಕ್ಕೆ ಸಲ್ಮಾನ್ ಖಾನ್ ಮನೆಯಲ್ಲೇ ಇದ್ದರು. ಅಭಿಮಾನಿಯನ್ನು ಭೇಟಿಯಾದ ಸಲ್ಮಾನ್ ಖಾನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಂದಹಾಗೆ ಅಭಿಮಾನಿ ತನ್ನ ಸೈಕಲ್ ಮೇಲೆ ಬೀಯಿಂಗ್ ಹ್ಯೂಮನ್ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಸೈಕ್ಲಿಂಗ್ ಮಾಡುತ್ತಿರುವ ಪೋಸ್ಟರ್ ಅನ್ನು ಅಂಟಿಸಿಕೊಂಡಿದ್ದಾರೆ. ಅಭಿಮಾನಿಯ ಪ್ರೀತಿಯ ಸೈಕಲ್ ಹಿಡಿದು ಸಲ್ಮಾನ್ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಸಲ್ಮಾನ್ ಮತ್ತು ಅಭಿಮಾನಿಯ ಪೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಕಾಮೆಂಟ್ ಬಂದಿದೆ. ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಸಲ್ಮಾನ್ ಖಾನ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. 

ಮಹಿಳಾ ಅಭಿಮಾನಿ ಎದೆಯಲ್ಲಿ ಸಲ್ಮಾನ್ ಖಾನ್ ಟ್ಯಾಟೂ; ನೆಟ್ಟಿಗರಿಂದ ಸಖತ್ ಟ್ರೋಲ್

ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಸಲ್ಮಾನ್ ಖಾನ್ 

ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಅದ್ದೂರಿಯಾಗಿ ಬರ್ತಡೇ ಸೆಲೆಬ್ರೇಟಿ ಮಾಡಿದ ಸಲ್ಮಾನ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಲ್ಮಾನ್ ಹುಟ್ಟುಹಬ್ಬದ ಪಾರ್ಟಿಗೆ ಅನೇಕ ಗಣ್ಯರು ಹಾಜರಿದ್ದು ಶುಭಾಶಯ ತಿಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅನೇಕರು ವಿಶ್ ಮಾಡಿ ಪ್ರೀತಿ ವ್ಯಕ್ತ ಪಡಿಸಿದ್ದರು.  ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಗೆಳೆಯ ಶಾರುಖ್ ಖಾನ್ ಎಂಟ್ರಿ ಎಲ್ಲರ ಗಮನ ಸೆಳೆದಿತ್ತು. ಪಾರ್ಟಿಯಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ತಬ್ಬಿಕೊಂಡು, ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದರು. ಅಭಿಮಾನಿಗಳತ್ತ ಕೈ ಬೀಸಿ ಪ್ರೀತಿ ವ್ಯಕ್ತಪಡಿಸಿದ್ದರು. 

ಮಿತಿ ಮೀರಿತು ನಶೆ; ಸಲ್ಮಾನ್ ಬರ್ತಡೇಲಿ ಕುಡಿದು ತೂರಾಡಿದ ಸೊಹೈಲ್ ಖಾನ್ ಕಾಲೆಳೆದ ನೆಟ್ಟಿಗರು, ವಿಡಿಯೋ ವೈರಲ್

ಸಲ್ಮಾನ್ ಖಾನ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಶಾರುಖ್ ಖಾನ್ ಪಠಾಣ್ ಸಿನಿಮಾದಲ್ಲೂ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಟೈಗರ್3 ಮುಗಿಸಿರುವ ಸಲ್ಮಾನ್ ಸದ್ಯ ಕಿಸಿ ಕ ಬಾಯ್ ಕಿಸಿ ಕಿ ಜಾನ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.  

Follow Us:
Download App:
  • android
  • ios