Asianet Suvarna News Asianet Suvarna News

ಮಿತಿ ಮೀರಿತು ನಶೆ; ಸಲ್ಮಾನ್ ಬರ್ತಡೇಲಿ ಕುಡಿದು ತೂರಾಡಿದ ಸೊಹೈಲ್ ಖಾನ್ ಕಾಲೆಳೆದ ನೆಟ್ಟಿಗರು, ವಿಡಿಯೋ ವೈರಲ್

ಸಲ್ಮಾನ್ ಖಾನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕುಡಿದು ತೂರಾಡಿದ ಸೊಹೈಲ್ ಖಾನ್ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. 

Sohail Khan gets trolled for drunk in Salman Khan birthday bash sgk
Author
First Published Dec 30, 2022, 12:21 PM IST

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. 57ನೇ ವಸಂತಕ್ಕೆ ಕಾಲಿಟ್ಟ ನಟ ಸಲ್ಮಾನ್ ಖಾನ್ ಅದ್ದೂರಿಯಾಗಿ ಪಾರ್ಟಿ ಆಯೋಜಿಸಿದ್ದರು. ದಬಂಗ್ ಸ್ಟಾರ್ ಬರ್ತಡೇ ಪಾರ್ಟಿಯಲ್ಲಿ ಕುಟುಂಬದವರು ಮತ್ತು ಬಾಲಿವುಡ್‌ನ ಅನೇಕ ಗಣ್ಯರು ಭಾಗಿಯಾಗಿದ್ದರು. ಹುಟ್ಟುಹಬ್ಬ ಪಾರ್ಟಿಯ ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ವೈರಲ್ ವಿಡಿಯೋಗಳಲ್ಲಿ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಸೊಹೈಲ್ ಖಾನ್ ಪಾರ್ಟಿಯಲ್ಲಿ ಕುಡಿದು ಫುಲ್ ಟೈಟಲ್ ಆಗಿದ್ದರು ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಇಬ್ಬರೂ ಮಕ್ಕಳೊಂದಿಗೆ ಕ್ಯಾಮರಾ ಮುಂದೆ ಪೋಸ್ ನೀಡಿದರು. ಸೊಹೈಲ್ ತನ್ನ ಕಿರಿಯ ಪುತ್ರ ಯೋಹಾನ್ ಜೊತೆ ನಗುತ್ತಾ ಫೋಟೋಗೆ ಪೋಸ್ ನೀಡಿದರು. ಬಳಿಕ ನಿಧಾನವಾಗಿ ನಗುತ್ತಾ ಹೋದರು. ಸೊಹೈಲ್ ನಡಿಗೆ ನೋಡಿದ ನೆಟ್ಟಿಗರು ಕುಡಿದಿದ್ದಾರೆ ಎಂದು ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ. 

ಈ ವಿಡಿಯೋ ನೋಡಿದ ಅನೇಕರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅವರ ಮಗ ಮುಜುರಕ್ಕೆ ಒಳಗಾಗಿಲ್ವಾ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ 'ನಶೆದಿ..' ಎಂದು ಹೇಳಿದ್ದಾರೆ. ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿ, 'ನಶೆ ಮಿತಿ ಮೀರಿದೆ' ಎಂದು ಹೇಳಿದ್ದಾರೆ.

salman Khan Birthday; ಹಗ್ ಮಾಡಿ, ಕೈ ಕೈ ಹಿಡಿದು ಪೋಸ್ ನೀಡಿದ ಶಾರುಖ್-ಸಲ್ಮಾನ್ ನೋಡಿ ಫ್ಯಾನ್ಸ್ ಖುಷ್

ಸಲ್ಮಾನ್ ಖಾನ್ ಸಹೋದರ ಸೊಹೊಲ್ ಖಾನ್ ಅವರು ಸೀಮಾ ಕಿರಣ್ ಅವರನ್ನು ಮದುವೆಯಾಗಿದ್ದರು. ಮದುವೆಯಾಗಿ 24 ವರ್ಷಗಳ ಬಳಿಕ ಇಬ್ಬರೂ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದು. ಈ ವರ್ಷ 2022ರಲ್ಲಿ ಸೊಹೈಲ್ ಮತ್ತು ಸೀಮಾ ಇಬ್ಬರೂ ದಾಂಪತ್ಯ  ಕಡಿದುಕೊಂಡರು. ಈ ದಂಪತಿಗೆ ನಿರ್ವಾನ್ ಮತ್ತು ಯೋಹಾನ್ ಇಬ್ಬರು ಮಕ್ಕಳಿದ್ದಾರೆ. ಸಲ್ಮಾನ್ ಖಾನ್ ಮತ್ತೋರ್ವ ಸಹೋದರ ಅರ್ಬಾಜ್ ಖಾನ್ ಕೂಡ ವಿಚ್ಛೇದನ ಪಡೆದು ಸಿಂಗಲ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದ ಅರ್ಬಾಜ್ ಸದ್ಯ ವಿಚ್ಛೇದನ ಪಡೆದು ದೂರ ಆಗಿದ್ದಾರೆ. 

ಮಾಜಿ ಗರ್ಲ್‌ಫ್ರೆಂಡ್‌ ತಬ್ಬಿಕೊಂಡು ಕಿಸ್ ಮಾಡಿದ ಸಲ್ಮಾನ್ ಖಾನ್; ಬರ್ತಡೇ ಪಾರ್ಟಿ ಫೋಟೋ ಸಖತ್ ವೈರಲ್

ಸಲ್ಮಾನ್ ಖಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್‌ನ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ವಿಶೇಷ ಎಂದರೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಭಾಗಿಯಾಗಿದ್ದರು. ಇಬ್ಬರೂ ಹಗ್ ಮಾಡಿ ಕ್ಯಾಮರಾ ಮುಂದೆ ಪೋಸ್ ನೀಡಿದ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಲ್ಮಾನ್ ಮತ್ತು ಶಾರುಖ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. 


 

Follow Us:
Download App:
  • android
  • ios