ಸೌತ್ ಇಂಡಿಯಾ ಸ್ಟಾರ್ ನಟ ರಿಜೆಕ್ಟ್ ಮಾಡಿದ್ದಕ್ಕೆ ಸಲ್ಮಾನ್‌ ಖಾನ್‌ಗೆ ಸಿಕ್ಕಿತ್ತು ಬ್ಲಾಕ್‌ಬಸ್ಟರ್ ಸಿನಿಮಾ

ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು ರಿಜೆಕ್ಟ್ ಮಾಡಿದ್ದ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿತ್ತು. 75 ಕೋಟಿಯಲ್ಲಿ ನಿರ್ಮಾಣವಾಗಿ 900 ಕೋಟಿ ರೂಪಾಯಿ ಹಣ ಗಳಿಸಿತ್ತು.

Salman Khan got a blockbuster movie after rejecting a South Indian star actor mrq

ಮುಂಬೈ : ಬಾಲಿವುಡ್ ಭಾಯಿಜಾನ್ ಅಂತಾ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಸಿನಿಮಾಗಾಗಿ ಅಭಿಮಾನಿಗಳು ವರ್ಷಗಟ್ಟಲೇ ಕಾಯುತ್ತಿರುತ್ತಾರೆ. ಇಂದು ದಕ್ಷಿಣ ಭಾರತದ ಸ್ಟಾರ್ ಕಲಾವಿದರ ಸಿನಿಮಾಗಳು ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ಬಿಡುಗಡೆಯಾಗುತ್ತಿವೆ. ಹಾಗಾಗಿ ಬಾಲಿವುಡ್ ಖ್ಯಾತ ನಿರ್ದೇಶಕರೆಲ್ಲಾ ಕಾಲ್‌ ಶೀಟ್‌ಗಾಗಿ ದಕ್ಷಿಣ ಭಾರತದ ನಟರಿಗಾಗಿ ಕಾಯುತ್ತಿದ್ದಾರೆ.  ಅಷ್ಟರಮಟ್ಟಿಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳು ಇಡೀ ದೇಶದಾದ್ಯಂತ  ಕಮಾಲ್ ಮಾಡುತ್ತಿದ್ದು, ವಿದೇಶಗಳಲ್ಲಿಯೂ ಬಿಡುಗಡೆಯಾಗಿ  ಬಾಕ್ಸ್‌ ಆಫಿಸ್ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲ ಸ್ಟಾರ್ ನಟರು ತಿರಸ್ಕರಿಸಿದ ಸಿನಿಮಾಗಳಲ್ಲಿ ಬೇರೆ ಕಲಾವಿದರು ನಟಿಸಿ ಸಕ್ಸಸ್ ಆಗಿರೋ ಉದಾಹರಣೆಗಳು ನಮ್ಮ ಮುಂದಿವೆ. ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು  ರಿಜೆಕ್ಟ್ ಮಾಡಿದ್ದ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ದೊಡ್ಡಮಟ್ಟದ  ಸದ್ದು ಮಾಡಿತ್ತು. ಆ ಸಿನಿಮಾ ರಿಜೆಕ್ಟ್ ಮಾಡಿದ್ಯಾರು? ಯಾವುದು ಆ ಸಿನಿಮಾ ಅಂತ ನೋಡೋಣ ಬನ್ನಿ. 

2015ರಲ್ಲಿ ಸಲ್ಮಾನ್ ಖಾನ್ ನಟನೆಯ 'ಬಜರಂಗಿ ಭಾಯಿಜಾನ್' ಸಿನಿಮಾ ಬಿಡುಗಡೆಯಾಗಿತ್ತು. ಪಾಕಿಸ್ತಾನದ ಮಾತು ಬಾರದ ಬಾಲಕಿ  ಭಾರತದಲ್ಲಿ ಪೋಷಕರನ್ನು ಕಳೆದುಕೊಂಡು ನಟನ  ಬಳಿ ಬರುತ್ತಾಳೆ. ಅಲ್ಲಿಂದ ನಟ  ಆಕೆಯನ್ನು ಪೋಷಕರಿಗೆ ಒಪ್ಪಿಸಲು ಕಳ್ಳ ಮಾರ್ಗವಾಗಿ ಪಾಕಿಸ್ತಾನಕ್ಕೆ ಹೋಗುತ್ತಾನೆ. ಅಲ್ಲಿ ಬಾಲಕಿ ಮುನ್ನಿ ಪೋಷಕರನ್ನು ಹುಡುಕುವುದೇ ಸಿನಿಮಾದ ಒನ್ ಲೈನ್ ಕಥೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಲ್ಮಾನ್ ಖಾನ್, ಕರೀನಾ ಕಪೂರ್ ಖಾನ್, ನವಾಜುದ್ದಿನ್ ಸಿದ್ದಿಕಿ, ಮುನ್ನಿಯಾಗಿ ಹರ್ಷಾಲಿ ಮಲ್ಹೋತ್ರಾ ನಟಿಸಿದ್ದರು. 

ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!

75 ಕೋಟಿ ರೂಪಾಯಿ ಬಜೆಟ್‌ನ್ಲಿ ನಿರ್ಮಾಣವಾಗಿದ್ದ 'ಬಜರಂಗಿ ಭಾಯಿಜಾನ್' ಸಿನಿಮಾ 918.18 ಕೋಟಿ ರೂಪಾಯಿ ಹಣವನ್ನು ಗಲ್ಲಾಪೆಟ್ಟಿಗೆಗೆ ತುಂಬಿಸಿಕೊಂಡಿತ್ತು. ಸಲ್ಮಾನ್ ಖಾನ್ ಫಿಲಂಸ್, ರಾಕ್‌ಲೈನ್ ಎಂಟರ್‌ಟೈನ್ಮೆಂಟ್ ಮತ್ತು  ಕಬೀರ್ ಖಾನ್ ಫಿಲಂಸ್ ಚಿತ್ರಕ್ಕೆ  ಬಂಡವಾಳ ಹಾಕಿದ್ದರು. ವಿ.ವಿಜಯೇಂದ್ರ ಪ್ರಸಾದ್ ಕಥೆಗೆ ನಿರ್ದೇಶಕ ಕಬೀರ್ ಖಾನ್ ಆಕ್ಷನ್ ಕಟ್ ಹೇಳಿದ್ದರು.  ನಿರ್ದೇಶಕ ಕಬೀರ್ ಖಾನ್ ಈ ಚಿತ್ರದ ಕಥೆಯನ್ನು ಸಲ್ಮಾನ್‌ ಖಾನ್‌ಗೂ ಮೊದಲು ಸೌತ್ ಇಂಡಿಯಾದ ಸ್ಟಾರ್ ನಟರೊಬ್ರಿಗೆ ಹೇಳಿದ್ದರಂತೆ. ಆದ್ರೆ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಒಪ್ಪದ ಕಾರಣ ' ಬಜರಂಗಿ ಭಾಯಿಜಾನ್' ಚಿತ್ರ ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಅಂತಿಮವಾಗಿ ಸಲ್ಮಾನ್ ಖಾನ್ ಚಿತ್ರದ ಕಥೆ ಮೆಚ್ಚಿಕೊಂಡು  ಒಪ್ಪಿಗೆ ಸೂಚಿಸಿ ನಟಿಸಿದರು. 

ಮೊದಲು ಈ ಕಥೆಯನ್ನು ಕೇಳಿದ್ದು, ಟಾಲಿವುಡ್ ಅಂಗಳದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್. ಇತ್ತೀಚೆಗೆ ಬಾಲಿವುಡ್ ಸಿನಿಮಾದಲ್ಲಿ ಯಾಕೆ ನಟಿಸಿಲ್ಲ ಎಂಬ ಪ್ರಶ್ನೆಗೆ ಅಲ್ಲು ಅರ್ಜುನ್ ಉತ್ತರಿಸಿದ್ದರು. ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋದು ಅಷ್ಟು ಸುಲಭವಲ್ಲ ಎಂದು ಹೇಳಿದ್ದರು. ಈ ಸಂದರ್ಭದಲ್ಲಿಯೇ 'ಬಜರಂಗಿ ಭಾಯಿಜಾನ್' ಸಿನಿಮಾದ ವಿಷಯ ಚರ್ಚೆಗೆ ಬಂದಿತ್ತು. ಸದ್ಯ ಅಲ್ಲು ಅರ್ಜುನ್ ನಟನೆಯ ಪುಷ್ಪಾ -2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಶ್ರೀವಲ್ಲಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಇದನ್ನೂ ಓದಿ: 20 ಕೋಟಿ ಗಳಿಸಲು ಸಹ ವಿಫಲವಾದ 200 ಕೋಟಿಯ ಚಿತ್ರ- ದೊಡ್ಡ ದೊಡ್ಡ ಸ್ಟಾರ್‌ಗಳಿದ್ರೂ ಹೀನಾಯ ಸೋಲು!

Latest Videos
Follow Us:
Download App:
  • android
  • ios