Asianet Suvarna News Asianet Suvarna News

ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಳ; ಅಕ್ಷಯ್ ಕುಮಾರ್, ಅನುಪಮ್ ಖೇರ್‌ಗೆ X ಶ್ರೇಣಿ ಸೆಕ್ಯೂರಿಟಿ

ಸಲ್ಮಾನ್ ಖಾನ್ ಅವರಿಗೆ ನೀಡಿದ್ದ ಎಕ್ಸ್ ಭದ್ರತೆಯನ್ನು ಈಗ ವೈ ಪ್ಲಸ್ ಭದ್ರತೆಗೆ ಹೆಚ್ಚಿಸಲಾಗಿದೆ. ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಅವರಿಗೂ ಭದ್ರತೆ ನೀಡಲಾಗಿದೆ.

Salman Khan gets Y-Plus security and X-security for Akshay Kumar and anupam kher sgk
Author
First Published Nov 2, 2022, 2:47 PM IST

ಜೀವ ಬೆದರಿಕೆ ಹಿನ್ನಲೆ ಈಗಾಗಲೇ ಸಲ್ಮಾನ್ ಖಾನ್ ಅವರಿಗೆ ಭದ್ರತೆ ನೀಡಲಾಗಿತ್ತು. ಆದರೀಗ ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತೆ ಹೆಚ್ಚಿಸಲಾಗಿದ್ದು ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಅಂದಹಾಗೆ ಸಲ್ಮಾನ್ ಖಾನ್ ಮಾತ್ರವಲ್ಲದೆ ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಅವರಿಗೂ ಭದ್ರತೆ ಹೆಚ್ಚಿಸಲಾಗಿದೆ. ಅಕ್ಷಯ್ ಮತ್ತು ಅನುಮಪ್ ಅವರಿಗೆ ಎಕ್ಸ್ ಮಾದರಿ ಭದ್ರತೆ ನೀಡಲಾಗಿದೆ. ಅಕ್ಷಯ್ ಕುಮಾರ್ ಮತ್ತು ಅನುಪಮ್ ಅವರ ಭದ್ರತೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಇರಲಿದ್ದಾರೆ. 

ವೈ ಪ್ಲಸ್ ಭದ್ರತೆಯನ್ನು ದೇಶದ ಕೆಲವು ವ್ಯಕ್ತಿಗಳಿಗೆ ಮಾತ್ರ ಇದೆ. ಭಾರತದಲ್ಲಿ ಈ ಶ್ರೇಣಿಯ ಭದ್ರತೆ ಪಡೆದ ಏಕೈಕ ನಟ ಸಲ್ಮಾನ್ ಖಾನ್ ಆಗಿದ್ದಾರೆ.  y ಪ್ಲಸ್ ಭದ್ರತೆಯಲ್ಲಿ ಒಬ್ಬ ವೈಯಕ್ತಿಕ ಭದ್ರತಾ ಅಧಿಕಾರಿ ಮತ್ತು ಕಮಾಂಡೋಗಳು ಸೇರಿದಂತೆ 11 ಸಶಸ್ತ್ರ, ಪೊಲೀಸ್ ಸಿಬ್ಬಂದಿ ಸಲ್ಮಾನ್ ಖಾನ್‌ಗೆ ಭದ್ರತೆ ಒದಗಿಸಲಿದೆ. ಸಲ್ಮಾನ್ ಖಾನ್ ಜೊತೆ ಮತ್ತು ಅವರ ನಿವಾಸಕ್ಕೂ ಭದ್ರತೆ ಒದಗಿಸಲಿದೆ. 

ಸಲ್ಮಾನ್, ಆರ್ಯನ್ ಖಾನ್ ಇಬ್ಬರೂ ಡ್ರಗ್ಸ್ ತೆಗೆದುಕೊಳ್ತಾರೆ; ಬಾಬಾ ರಾಮ್‌ದೇವ ಶಾಕಿಂಗ್ ಹೇಳಿಕೆ

ಸಲ್ಮಾನ್ ಖಾನ್ ಅವರಿಗೆ ಸರ್ಕಾರ ಎಕ್ಸ್ ಮಾದರಿಯ ಭದ್ರತೆ ನೀಡಿತ್ತು. ಆದರೀಗ ಮಹಾರಾಷ್ಟ್ರ ಸರ್ಕಾರ ವೈ ಪ್ಲಸ್ ಶ್ರೇಣಿಗೆ ಹೆಚ್ಚಳ ಮಾಡುವಂತೆ ಆದೇಶ ಹೊರಡಿಸಿದೆ. ತಿಂಗಳ ಹಿಂದೆ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಅವರಿಗೆ ಜೀವಬೆದರಿಕೆ ಪತ್ರ ಬಂದಿತ್ತು. ಬಾಂದ್ರಾ ನಿವಾಸಕ್ಕೆ ಅಪರಿಚವ್ಯಕ್ತಿಯಿಂದ   ಜೀವ ಬೆದರಿಕೆ ಪತ್ರ ಬಂದಿತ್ತು. ಆ ಪತ್ರದಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಸಂದೇಶ ರವಾನಿಸಲಾಗಿತ್ತು. ಹಾಗಾಗಿ ಸಲ್ಮಾನ್ ಖಾನ್ ಅವರಿಗೆ ಭದ್ರತೆ ನೀಡಲಾಗಿತ್ತು. ಇದೀಗ ಹೆಚ್ಚಳ ಮಾಡಲಾಗಿದೆ. 

ಜೀವ ಬೆದರಿಕೆ ಬಂದ ಬೆನ್ನಲ್ಲೇ ಸಲೀಮ್ ಖಾನ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಮುಂಬೈ ಪೊಲೀಸರು ಸಲೀಮ್ ಖಾನ್ ಮತ್ತು ಪುತ್ರ ಸಲ್ಮಾನ್ ಖಾನ್ ಅವರ ಹೇಳಿಕೆ ಪಡೆದುಕೊಂಡಿದ್ದರು. ಬಳಿಕ ಸಲ್ಮಾನ್ ಖಾನ್ ಗನ್ ಇಟ್ಟುಕೊಳ್ಳಲು ಪರವಾನಗಿ ನೀಡುವಂತೆ ಕೋಟಿ ಅರ್ಜಿ ಸಲ್ಲಿಸಿದ್ದರು. ಬಳಿಕ ಪೊಲೀಸರು ಸಲ್ಮಾನ್ ಖಾನ್‌ಗೆ ಗನ್ ಪರವಾನಗಿ ನೀಡಿತ್ತು. ಅಂದಹಾಗೆ ಸಿದು ಮೂಸೇವಾಲ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರದರ್ ಗ್ಯಾಂಗ‌್ ನಿಂದ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಬಂದಿರುವುದು ಬಹಿರಂಗವಾಗಿದೆ. 

ಸಲ್ಮಾನ್ ಖಾನ್ ತಿಂಗಳ ಮನೆ ಬಾಡಿಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

ಬೆದರಿಕೆ ಬಂದ ಬೆನ್ನಲ್ಲೇ ಸಲ್ಮಾನ್ ಖಾನ್ ಪರವಾನಗಿ ಗನ್ ಜೊತೆಗೆ ಬುಲೆಟ್ ಪ್ರೂಫ್ ಕಾರನ್ನು ಪಡೆದಿದ್ದಾರೆ. ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ಡೆಂಗ್ಯೂ ರೋಗಕ್ಕೆ ತುತ್ತಾಗಿದ್ದರು. ಸದ್ಯ ಚೇತರಿಸಿಕೊಂಡಿರುವ ಸಲ್ಮಾನ್ ಖಾನ್ ಮತ್ತೆ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಿನಿಮಾ ಜೊತೆಗೆ ಸಲ್ಮಾನ್ ಖಾನ್ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಡೆಸಿಕೊಡುತ್ತಿದ್ದಾರೆ.  

  

Follow Us:
Download App:
  • android
  • ios