Asianet Suvarna News Asianet Suvarna News

ಸೋನಾಕ್ಷಿ ಗಂಡನ 2,100 ಸಾಲ ಇನ್ನೂ ವಾಪಸ್​ ಕೊಡದ ಸಲ್ಮಾನ್​ ಖಾನ್​! ಇವರಿಬ್ಬರ ಹಿನ್ನೆಲೆಯೇ ಕುತೂಹಲ...

 ಸೋನಾಕ್ಷಿ ಗಂಡ ಜಹೀರ್ ಇಕ್ಬಾಲ್ ಕೊಟ್ಟ 2,100 ರೂಪಾಯಿ ಸಾಲವನ್ನು ಇನ್ನೂ ವಾಪಸ್​  ಕೊಟ್ಟಿಲ್ಲವಂತೆ  ಸಲ್ಮಾನ್​ ಖಾನ್​! ಇವರಿಬ್ಬರ ಹಿನ್ನೆಲೆ ಏನು? 
 

Salman carrying Sonakshis hubby Zaheer Iqbal interesting story behind these two gone viral
Author
First Published Jun 27, 2024, 12:02 PM IST

ಈಗ ಬಾಲಿವುಡ್​ನಲ್ಲಿ ಎಲ್ಲೆಲ್ಲೂ ನಟರಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಮದುವೆಯದ್ದೇ ಚರ್ಚೆ. ಆರೇಳು ವರ್ಷಗಳ ಡೇಟಿಂಗ್​ನಲ್ಲಿ ಇದ್ದ ಜೋಡಿ ಇದೀಗ ಮದುವೆಯಾಗಿದ್ದು, ಮದುವೆಯಾದಾಗಿನಿಂದಲೂ ಸಾಕಷ್ಟು ಟೀಕೆಗಳನ್ನೇ ಎದುರಿಸುತ್ತಿದೆ ಈ ಜೋಡಿ. ಇದಕ್ಕೆ ಕಾರಣ, ಇವರಿಬ್ಬರದ್ದು ಅಂತಧರ್ಮೀಯ ಮದುವೆ ಎಂದು. ಅಷ್ಟಕ್ಕೂ ಹಿಂದೂ ಹುಡುಗಿಯರನ್ನು ಮದುವೆಯಾಗಿರುವ ನಟ ಜಹೀರ್​ ಮಾತ್ರವಲ್ಲ. ಈ ಹಿಂದೆ ಶಾರುಖ್​ ಖಾನ್​ ಓರ್ವ ಹಿಂದೂ ಯುವತಿಯನ್ನು ಮದುವೆಯಾಗಿದ್ದರೆ ಸೈಫ್​ ಅಲಿ ಇಬ್ಬಿಬ್ಬರನ್ನು ಮದುವೆಯಾಗಿದ್ದಾರೆ. ಸಲ್ಮಾನ್​ ಖಾನ್​ ಅಪ್ಪ ಸಲೀಂ ಖಾನ್​ ಕೂಡ ಅಂತಧರ್ಮೀಯ ಮದುವೆಯಾಗಿದ್ದಾರೆ. ಹೀಗೆ ಸ್ಟಾರ್​ ನಟರ ದೊಡ್ಡ ಪಟ್ಟಿಯೇ ಇದೆ. ಆದರೂ ಇದೀಗ ಸೋನಾಕ್ಷಿ ಅವರ ಮದುವೆಗೆ ಭಾರಿ ವಿರೋಧ ವ್ಯಕ್ತವಾಗುತ್ತಲೇ ಇದೆ. ಇತ್ತ ಹಿಂದೂಗಳು ವಿರೋಧಿಸಿದರೆ, ಅತ್ತ ಮುಸ್ಲಿಮರು ಸೋನಾಕ್ಷಿ ಮದುವೆಯ ಸಂದರ್ಭದಲ್ಲಿ ಸಿಂಧೂರ ಇಟ್ಟುಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಮದುವೆ ಹಾಟ್​ ವಿಷಯವಾಗಿದೆ.

ಆದರೆ ಇದೀಗ ಕುತೂಹಲದ ಫೋಟೋ ಒಂದು ವೈರಲ್​ ಆಗಿದೆ. ಅದರಲ್ಲಿ ನಟ ಸಲ್ಮಾನ್​ ಖಾನ್​ ಅವರು ತಮ್ಮ ಸೊಂಟದ ಮೇಲೆ ಜಹೀರ್ ಇಕ್ಬಾಲ್ ಅವರನ್ನು ಎತ್ತುಕೊಂಡಿದ್ದಾರೆ. ಅಷ್ಟಕ್ಕೂ ಇವರಿಬ್ಬರ ನಡುವೆ 23 ವರ್ಷಗಳ ಡಿಫರೆನ್ಸ್​ ಇದೆ. ಸಲ್ಮಾನ್​ ಖಾನ್​ ಅವರಿಗೆ ಈಗ 58 ವರ್ಷ ವಯಸ್ಸಾದರೆ, ಜಹೀರ್​ ಅವರಿಗೆ ಈಗ 35 ವರ್ಷ ವಯಸ್ಸು. ಜಹೀರ್ ಅವರು ಚಿಕ್ಕ ಮಗುವಾಗಿರುವಾಗ ಸಲ್ಮಾನ್​ ಖಾನ್​ ಎತ್ತಿಕೊಂಡಿರುವ ಫೋಟೋ ಇದಾಗಿದೆ. ಅಷ್ಟಕ್ಕೂ ಇವರಿಬ್ಬರ ನಡುವಿನ ಸಂಬಂಧವೇ ಕುತೂಹಲವಾಗಿದೆ. 
ಮಗಳ ಮದ್ವೆಯ ಅರಿವೇ ಇರದಿದ್ದ ನಟ ಶತ್ರುಘ್ನ ಸಿನ್ಹಾ ಈಗ ಭಾವುಕ ಮಾತು- ಟೀಕೆಗಳಿಗೆ ಸೋನಾಕ್ಷಿ ತಿರುಗೇಟು
 
ಸೋನಾಕ್ಷಿ ಸಿನ್ಹಾ ಅವರ ಪತಿ ಜಹೀರ್ ಇಕ್ಬಾಲ್ ಸಲ್ಮಾನ್ ಖಾನ್ ಅವರ ಆಪ್ತ ಸ್ನೇಹಿತ ಇಕ್ಬಾಲ್ ರತ್ನಾಸಿ ಅವರ ಮಗ. ಅಂದರೆ ಇಕ್ಬಾಲ್​ ಮತ್ತು ಸಲ್ಮಾನ್​ ಸ್ನೇಹಿತರು. ಜಹೀರ್ ಇಕ್ಬಾಲ್ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ಇಕ್ಬಾಲ್ ರತಾನ್ಸಿ  ಆಭರಣ ವ್ಯಾಪಾರಿ ಮತ್ತು ವ್ಯಾಪಾರಸ್ಥರು.  ತಾಯಿ ಗೃಹಿಣಿ. ಅವರ ಸಹೋದರಿ ಪ್ರಸಿದ್ಧ ಸ್ಟೈಲಿಸ್ಟ್, ಮತ್ತು ತಮ್ಮ  ಕಂಪ್ಯೂಟರ್ ಇಂಜಿನಿಯರ್. ಇವರ ಕುಟುಂಬ  ಸಲ್ಮಾನ್ ಖಾನ್ ಕುಟುಂಬದ ಜೊತೆ  ನಿಕಟ ಸಂಬಂಧವನ್ನು ಹೊಂದಿದೆ. ಜಹೀರ್ 2019 ರ ರೊಮ್ಯಾಂಟಿಕ್ ಸಿನಿಮಾ 'ದಿ ನೋಟ್‌ಬುಕ್' ನೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು, ಅಲ್ಲಿ ಅವರು ಕಾಜೋಲ್ ಅವರ ಸೋದರ ಸೊಸೆ ಪ್ರನುತನ್ ಬಹ್ಲ್ ಅವರೊಂದಿಗೆ ನಟಿಸಿದರು. ಸಲ್ಮಾನ್ ಖಾನ್ ನಿರ್ಮಾಣದ ಈ ಚಿತ್ರವು ಥಾಯ್ ಚಿತ್ರ ‘ದಿ ಟೀಚರ್ಸ್ ಡೈರಿ’ಯ ರೂಪಾಂತರವಾಗಿದೆ.

ಜಹೀರ್ ಅವರ ತಂದೆ ಇಕ್ಬಾಲ್ ರತಾನ್ಸಿ ಅವರು ತಮ್ಮ ಯೌವನದಲ್ಲಿ ಸಲ್ಮಾನ್ ಖಾನ್ ಅವರಿಗೆ "ವೈಯಕ್ತಿಕ ಬ್ಯಾಂಕ್" ಆಗಿದ್ದರು. ಅಂದರೆ ಸಲ್ಮಾನ್​ ಇಕ್ಬಾಲ್​ ತಂದೆಯವರಿಂದ ಸಾಲ ಪಡೆದುಕೊಳ್ಳುತ್ತಿದ್ದರು. 2018 ರಲ್ಲಿ, ಸಲ್ಮಾನ್​ ಖಾನ್​ ಅವರು  ರತನ್ಸಿ ಅವರಿಂದ  2,011 ರೂಪಾಯಿ ಸಾಲ ಪಡೆದಿದ್ದರು. ಅದನ್ನು ಇನ್ನೂ ವಾಪಸ್​ ಕೊಟ್ಟಿಲ್ಲವಂತೆ! ಈ ಬಗ್ಗೆ ಸಲ್ಮಾನ್​ ಇದೀಗ ಹೇಳಿಕೊಂಡಿದ್ದಾರೆ.  “ಇವನು ನನ್ನ ಬಾಲ್ಯದ ಗೆಳೆಯ ಇಕ್ಬಾಲ್, ಹದಿಹರೆಯದವನಾಗಿದ್ದಾಗ ಅವನು ನನ್ನ ಬ್ಯಾಂಕ್ ಆಗಿದ್ದನು, ಅವನ  ನಾನು ಇನ್ನೂ ಅವನಿಗೆ 2,011 ರ ಸಾಲವನ್ನು ಕೊಡಬೇಕಿದೆ.   ಆ ಹಣವನ್ನು ಆತ ವಾಪಸ್​  ಕೇಳದಿದ್ದಕ್ಕೆ  ಥ್ಯಾಂಕ್​  ಗಾಡ್​ ಎಂದಿದ್ದಾರೆ.  ನವವಿವಾಹಿತರಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ದಾಂಪತ್ಯ ಜೀವನವು ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ. 

ಮದ್ವೇಲಿ ಸಿಂಧೂರ ಇಟ್ಟಿದ್ದಕ್ಕೆ ಅನ್ಯ ಕೋಮಿನವರಿಂದ ಸೋನಾಕ್ಷಿ ಸಿನ್ಹಾಗೆ ಕ್ಲಾಸ್! ಮತಾಂತರಕ್ಕೆ ಒತ್ತಾಯ

Latest Videos
Follow Us:
Download App:
  • android
  • ios