Asianet Suvarna News Asianet Suvarna News

ಮಗಳ ಮದ್ವೆಯ ಅರಿವೇ ಇರದಿದ್ದ ನಟ ಶತ್ರುಘ್ನ ಸಿನ್ಹಾ ಈಗ ಭಾವುಕ ಮಾತು- ಟೀಕೆಗಳಿಗೆ ಸೋನಾಕ್ಷಿ ತಿರುಗೇಟು

ಮಗಳ ಮದ್ವೆಯ ಅರಿವೇ ಇರದಿದ್ದ ನಟ ಶತ್ರುಘ್ನ ಸಿನ್ಹಾ ಇದೀಗ ಹೇಳುತ್ತಿರುವುದೇನು? ಇದೇ  ವೇಳೆ  ಟೀಕೆಗಳಿಗೆ ನಟಿ ಸೋನಾಕ್ಷಿ ತಿರುಗೇಟು ಕೊಟ್ಟಿದ್ದೇನು? 
 

Sonakshi Sinha did nothing illegal says Shatrughan Sinha responds to trolling suc
Author
First Published Jun 26, 2024, 5:33 PM IST

ಈಗ ಸದ್ಯ ಬಾಲಿವುಡ್​ನಲ್ಲಿ ಹಿರಿಯ ನಟ ಶತ್ರಘ್ನ ಸಿನ್ಹಾ ಅವರ ಪುತ್ರಿ ನಟಿ ಸೋನಾಕ್ಷಿ ಮತ್ತು  ಜಹೀರ್ ಇಕ್ಬಾಲ್ ಅವರ ಮದುವೆ ಕುರಿತೇ ಚರ್ಚೆ. ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿರುವಾಗಲೇ ಶತ್ರುಘ್ನಾ ಸಿನ್ಹಾ ಅವರಿಗೆ ಈ ವಿಷಯವನ್ನು ಕೇಳಲಾಗಿತ್ತು. ನಿಮ್ಮ ಮಗಳು ಅನ್ಯ ಧರ್ಮೀಯನೊಂದಿಗೆ ವಿವಾಹ ಆಗುತ್ತಿರುವುದು ನಿಜವೇ ಎಂದು ಪ್ರಶ್ನಿಸಲಾಗಿತ್ತು. ಆಗ ಚುನಾವಣಾ ಪ್ರಚಾರದಲ್ಲಿ ಬಿಜಿ ಇದ್ದ ನಟ ಅಚ್ಚರಿಯಿಂದ, ಹೌದಾ ಎಂದು ಪ್ರಶ್ನಿಸಿದ್ದರು.  'ನಾನು ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶ ಬಂದಾಗಿನಿಂದ ನಾನು ಇಲ್ಲಿದ್ದೇನೆ. ನನ್ನ ಮಗಳ ಯೋಜನೆಗಳ ಬಗ್ಗೆ ನಾನು ಇನ್ನೂ ಮಾತನಾಡಿಲ್ಲ. ಅವಳು ಮದುವೆಯಾಗುತ್ತಿದ್ದಾಳಾ? ಅವಳು ನನಗೆ ಇನ್ನೂ ಏನನ್ನೂ ಹೇಳಿಲ್ಲ. ನಾನು ಮಾಧ್ಯಮಗಳಲ್ಲಿ ಓದಿದಷ್ಟು ಮಾತ್ರ ನನಗೆ ತಿಳಿದಿದೆ' ಎಂದಿದ್ದರು. ಮಗಳು ವಿಷಯವನ್ನು ತಿಳಿಸದೇ ಮದುವೆಯಾಗುತ್ತಿದ್ದಾಳೆ ಎಂದಾಗ ಅಪ್ಪನೊಬ್ಬನಿಗೆ ಆಗುವ ಆಘಾತ ಶತ್ರುಘ್ನ ಅವರಿಗೂ ಆಗಿತ್ತು. ಆದರೂ ಸಾವರಿಸಿಕೊಂಡು,  'ಅವಳು ಈ ಬಗ್ಗೆ ನನ್ನೊಂದಿಗೆ ಮಾತನಾಡುವಾಗ ವಿಷಯ ಹೇಳಲಿಲ್ಲ. ಆದರೆ ನನ್ನ ಆಶೀರ್ವಾದ ಖಂಡಿತಾ ಅವಳೊಂದಿಗೆ ಇರುತ್ತದೆ. ಏಕೆಂದರೆ, ಅವಳು ಪ್ರಪಂಚದ ಎಲ್ಲಾ ಸಂತೋಷವನ್ನು ಪಡೆಯಬೇಕೆಂದು ಹೆತ್ತವನಾ ನಾನು ಬಯಸುತ್ತೇನೆ' ಎಂದಿದ್ದರು  ಶತ್ರುಘ್ನಾ.

ಕೊನೆಗೆ, ಮಗಳ ಮದುವೆಗೂ ಬಂದಿದ್ದರು. ಆದರೆ ಇದರ ನಡುವೆಯೇ, ಲವ್​ ಜಿಹಾದ್​, ಮತಾಂತರ ಇತ್ಯಾದಿ ವಿಷಯಗಳ ಕುರಿತು ಸೋಷಿಯಲ್​  ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ಎದುರಾಗುತ್ತಿವೆ. ಹಿಂದೂಗಳು ನಟಿ ಸ್ವಲ್ಪ ದಿನದಲ್ಲಿಯೇ ಫ್ರಿಜ್​ನಲ್ಲಿ ಹೋಗುತ್ತಾಳೆ ಎನ್ನುತ್ತಿದ್ದರೆ, ಮುಸ್ಲಿಮರು ಈಕೆ ಮದುವೆಯ ಸಂದರ್ಭದಲ್ಲಿ ಸಿಂಧೂರ ಧರಿಸಿದ್ದು ಸರಿಯಲ್ಲ, ಆಕೆ ಮತಾಂತರವಾಗಬೇಕು ಎಂದೆಲ್ಲಾ ಹೇಳುತ್ತಿದ್ದಾರೆ. ಆದರೆ ಜೋಡಿಗಳು ಮಾತ್ರ ಆರೇಳು ವರ್ಷಗಳ ಡೇಟಿಂಗ್​ಗೆ ಅಂತ್ಯ ಹಾಡಿ ಖುಷಿಯಿಂದಲೇ ದಾಂಪತ್ಯ ಜೀವನಕ್ಕೆ ಕಾಲಿಸಿದ್ದು, ಅದ್ಧೂರಿಯಾಗಿ ಮದುವೆಯೂ ನಡೆದಿದೆ. ಆದರೆ ನಟಿ ಟ್ರೋಲಿಗರಿಗೆ ಬಾಯಿ ಮುಚ್ಚಿಸಿದ್ದು, ಇದು ಅತ್ಯಂತ ಸುಂದರ ಕ್ಷಣ ಎಂದಿದ್ದಾರೆ. 

ಮದ್ವೇಲಿ ಸಿಂಧೂರ ಇಟ್ಟಿದ್ದಕ್ಕೆ ಅನ್ಯ ಕೋಮಿನವರಿಂದ ಸೋನಾಕ್ಷಿ ಸಿನ್ಹಾಗೆ ಕ್ಲಾಸ್! ಮತಾಂತರಕ್ಕೆ ಒತ್ತಾಯ


ಇದರ ಹೊರತಾಗಿಯೂ ಅಂತರ್​ಧರ್ಮೀಯ ವಿಷಯದ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಇದಕ್ಕೆ ಒಂದು ಕಾರಣವೂ ಇದೆ. ಶತ್ರುಘ್ನ ಸಿನ್ಹಾ ಅವರು ಮನೆಗೆ ರಾಮಾಯಣ ಎಂದೂ, ಮಕ್ಕಳಿಗೆ ಲವ್​-ಕುಶ ಎಂದೂ ಹೆಸರು ಇಟ್ಟಿದ್ದಾರೆ. ಅವರು ರಾಮನ ಭಕ್ತರು. ಆದರೆ ಇದೀಗ ಮಗಳೇ ಈ ರೀತಿ ಮದುವೆಯಾಗಿರುವುದು ಸರಿಯಲ್ಲ ಎನ್ನುವುದು ಹಲವರ ಅಭಿಮತ. ಆದರೆ ಟ್ರೋಲ್​ ಹೆಚ್ಚಾಗುತ್ತಿದ್ದಂತೆಯೇ ಇದೀಗ ನಟ ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದದಾರೆ.  ‘ಮದುವೆ ಎನ್ನುವುದು ಇಬ್ಬರ ನಡುವಿನ ವೈಯಕ್ತಿಕ ನಿರ್ಧಾರ. ಈ ಬಗ್ಗೆ ಕಮೆಂಟ್ ಮಾಡುವ ಅಥವಾ ಗೊಂದಲ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ. ನಾನು ಎಲ್ಲಾ ವಿರೋಧಿಗಳಿಗೆ ಇಷ್ಟನ್ನು ಹೇಳಲು ಬಯಸುತ್ತೇನೆ , ಅವರ ಜೀವನವನ್ನು ಅವರು ನಡೆಸುತ್ತಾರೆ. ನಿಮ್ಮ ಜೀವನದಲ್ಲಿ ಉಪಯುಕ್ತವಾಗುವ ಕೆಲಸವನ್ನು ನೀವು ಮಾಡಿ ಎಂದು ಹೇಳಿದ್ದಾರೆ.  'ಜನರ ಕೆಲಸವೇ ಏನಾದರೂ ಹೇಳುವುದು, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು. ನನ್ನ  ಮಗಳು ಕಾನೂನುಬಾಹಿರ ಅಥವಾ ಸಂವಿಧಾನ ಬಾಹಿರವಾಗಿ ಏನನ್ನೂ ಮಾಡಿಲ್ಲ. ಅವಳು ಚೆನ್ನಾಗಿಯೇ ಖುಷಿಯಿಂದ ಇದ್ದಾಳೆ, ಖುಷಿಯಾಗಿಯೇ ಇರುತ್ತಾಳೆ, ಅವರಿಬ್ಬರ ನಡುವೆ ಯಾರೂ ಹಸ್ತಕ್ಷೇಪ ಮಾಡುವುದನ್ನು ನಾನು ಬಯಸುವುದಿಲ್ಲ' ಎಂದಿದ್ದಾರೆ.  

ಅಷ್ಟಕ್ಕೂ ಸೋನಾಕ್ಷಿ ವಿವಾಹವಾದ ಮೇಲೆ ಮತಾಂತರ ಆಗುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇದಾಗಲೇ ಜಹೀರ್‌ ತಂದೆ ಇಕ್ಬಾಲ್ ರತನ್ಸಿ, ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಲಿದೆ ಎಂದಿದ್ದರು.  ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳುತ್ತಾಳೆ ಎಂಬ ವರದಿಯಲ್ಲಿ ಸತ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದಿದ್ದರು.  ಅವಳು ಮತಾಂತರಗೊಳ್ಳುತ್ತಿಲ್ಲ. ಇದು ನಿಶ್ಚಿತ. ಅವರಿಬ್ಬರದ್ದೂ  ಹೃದಯಗಳು ಒಂದಾಗಿವೆ. ಇದರ ನಡುವೆ  ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಸೋನಾಕ್ಷಿ ಮತಾಂತರವಾಗುವುದಿಲ್ಲ.  ನಾನು ಮಾನವೀಯತೆಯನ್ನು ನಂಬುತ್ತೇನೆ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಅವರು ಹೇಳಿದ್ದರು. 

ನಟಿ ಸೋನಾಕ್ಷಿ ಸಿನ್ಹಾ ಮತಾಂತರ? ಭಾವಿ ಪತಿ ಜಹೀರ್‌ ಇಕ್ಬಾಲ್‌ ತಂದೆ ಮಾತೀಗ ವೈರಲ್‌!

Latest Videos
Follow Us:
Download App:
  • android
  • ios