Asianet Suvarna News Asianet Suvarna News

Salaar; ವರ್ಧರಾಜ ಮನ್ನಾರ್ ಆಗಿ ಪ್ರಭಾಸ್ ಸಿನಿಮಾಗೆ ಎಂಟ್ರಿ ಕೊಟ್ಟ ಪೃಥ್ವಿರಾಜ್, ಲುಕ್ ವೈರಲ್

 ಮಲಯಾಳಂ ನಟ ಪೃಥ್ವಿರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಲಾರ್ ಸಿನಿಮಾದಿಂದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. 

Salaar team reveals Prithvirajs first look on his birthday sgk
Author
First Published Oct 16, 2022, 2:29 PM IST

ಪ್ರಶಾಂತ್ ನೀಲ್ ಮತ್ತು ತೆಲುಗು ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬರ್ತಿರುವ ಸಲಾರ್ ಸಿನಿಮಾ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ. ಕೆಜಿಎಫ್ -2 ಬಳಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಲಾರ್‌ ಶೂಟಿಂಗ್ ಬರದಿಂದ ಸಾಗುತ್ತಿದೆ. ಚಿತ್ರೀಕರಣದ ಅನೇಕ ಫೋಟೋಗಳು ಸಹ ಲೀಕ್ ಆಗಿವೆ. ಸಲಾರ್ ಸಿನಿಮಾದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಪ್ರಭಾಸ್ ಪೋಸ್ಟರ್ ಬಿಟ್ಟರೆ ಸಲಾರ್ ತಂಡ ಯಾವುದೇ ಅಪ್ ಡೇಟ್ ನೀಡಿರಲಿಲ್ಲ. ಇದೀಗ ಚಿತ್ರದಿಂದ ಹೊಸ ಪಾತ್ರದ ಪರಿಚಯ ಮಾಡಿಸಿದ್ದು ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಹೌದು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ. 

ಪ್ರಭಾಸ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಸಿನಿಮಾತಂಡ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಇಂದು (ಅಕ್ಟೋಬರ್ 16) ಪೃಥ್ವಿರಾಜ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅಂದಹಾಗೆ ಪೃಥ್ವಿರಾಜ್ ಸಲಾರ್ ಸಿನಿಮಾದಲ್ಲಿ ವರ್ಧರಾಜ ಮನ್ನಾರ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವರ್ಧರಾಜ ಮನ್ನಾರ್ ಸಿಕ್ಕಾಪಟ್ಟೆ ರಡಗ್ ಎನ್ನುವುದು ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತಿದೆ. ಪ್ರಶಾಂತ್ ನೀಲ್ ಫ್ಲೇವರ್ ಡಾರ್ಕ್ ಶೇಡ್ ನಲ್ಲಿಯೇ ಪೋಸ್ಟರ್ ಇದೆ. ಪೃಥ್ವಿರಾಜ್ ವಿಭಿನ್ನ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ.

Prabhas; ಸಲಾರ್ ವಿಡಿಯೋ ಲೀಕ್, ಅಪ್‌ಸೆಟ್ ಆದ ಪ್ರಶಾಂತ್ ನೀಲ್ ಕಟ್ಟುನಿಟ್ಟಿನ ಕ್ರಮ ಜಾರಿ

ಪೃಥ್ವಿರಾಜ್ ಅವರು ಇಂದು (ಅಕ್ಟೋಬರ್ 16) 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನಕ್ಕೆ ಸಲಾರ್ ಟೀಂ ಕಡೆಯಿಂದ ಬರ್ಜರಿ ಗಿಫ್ಟ್ ಸಕ್ಕಿದೆ. 
ಇನ್ನು ಹೊಂಬಾಳೆ ಫಿಲ್ಮ್ಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಪೃಥ್ವಿರಾಜ್ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿ ಪೋಸ್ಟರ್ ಶೇರ್ ಮಾಡಿದ್ದಾರೆ. ತೆಲುಗು ಸ್ಟಾರ್ ಪ್ರಭಾಸ್ ಜೊತೆ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಕೂಡ ಇರುವುದು ಸಲಾರ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಪ್ರಭಾಸ್ ಮತ್ತು ಪೃಥ್ವಿರಾಜ್ ಜೊತೆಗೆ ಮತ್ತೋರ್ವ ಖ್ಯಾತ ನಟ ಜಗಪತಿ ಬಾಬು ಕೂಡ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾದಲ್ಲಿ ನಟಿಸಲು ಸಿದ್ಧನಿದ್ದೇನೆ,ಯಾರಾದರೂ ನನಗೆ ಒಳ್ಳೆಯ ಕಥೆಯನ್ನು ಹೇಳಿ: ಪೃಥ್ವಿರಾಜ್‌

ನಟ ಪೃಥ್ವಿರಾಜ್ ಕೂಡ ಪೋಸ್ಟರ್ ಶೇರ್ ಮಾಡಿ, 'ನನ್ನನ್ನು ತಂಡಕ್ಕೆ ಸೇರಿಸಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಅಂದಹಾಗೆ ಬಹುನಿರೀಕ್ಷೆಯ ಸಲಾರ್ ಸಿನಿಮಾ ಮುಂದಿನ ವರ್ಷ 2023 ಸೆಪ್ಟಂಬರ್ 28ರಂದು ರಿಲೀಸ್ ಆಗುತ್ತಿದೆ.  

Follow Us:
Download App:
  • android
  • ios