Asianet Suvarna News Asianet Suvarna News

ರಾಹುಲ್ ಗಾಂಧಿಯನ್ನು ಹಾಡಿ ಕೊಂಡಾಡಿದ ನಟ ಸೈಫ್​ ಅಲಿ ಖಾನ್​: ಇದಕ್ಕೆ ಕಾರಣ ಹೀಗಿದೆ...

ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅವರು ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿಯವರನ್ನು ಹಾಡಿ ಕೊಂಡಾಡಿದ್ದಾರೆ. ಅವರು ಹೇಳಿದ್ದೇನು? 
 

Saif Ali Khan calls Rahul Gandhi a brave and honest politician turned around peoples perception of him suc
Author
First Published Sep 27, 2024, 5:56 PM IST | Last Updated Sep 27, 2024, 5:56 PM IST

ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅವರು ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿಯವರನ್ನು ಹಾಡಿ ಕೊಂಡಾಡಿದ್ದಾರೆ. ಮಾಧ್ಯಮಗಳು ಅವರನ್ನು ಪ್ರಶ್ನಿಸಿದಾಗ ಅವರು ರಾಹುಲ್​ ಗಾಂಧಿಯನ್ನು ಪ್ರಶಂಸಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ ನಾಯಕ ರಾಹುಲ್‌ ಗಾಂಧಿ ಮತ್ತು ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಅವರ ಬಗ್ಗೆ ನಿಮಗೆ ಏನು ಅನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಅತ್ಯಂತ ಧೈರ್ಯಶಾಲಿ ರಾಜಕಾರಣಿಗಳು. ಆದರೆ  ರಾಹುಲ್‌ ಗಾಂಧಿ ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸು ಶಕ್ತಿ ಇರುವವರು ಎಂದು ಸೈಫ್​ ಅಲಿ ಹೇಳಿದ್ದಾರೆ. ರಾಹುಲ್​ ಅವರು,   ಧೈರ್ಯಶಾಲಿ ರಾಜಕಾರಣಿ, ತಮ್ಮ ವಿರುದ್ಧ ಯಾವುದೇ ಟೀಕೆ ಬಂದರೂ ಅದನ್ನು ನಿಭಾಯಿಸುವ ಶಕ್ತಿ ಅವರಲ್ಲಿ ಇದೆ.  ಟೀಕೆಗಳನ್ನು ಮನಮುಟ್ಟುವ ರೀತಿಯಲ್ಲಿ ಅವರು ನಿಭಾಯಿಸುವುದು ನನಗೆ ಖುಷಿ ಕೊಟ್ಟಿದೆ ಎಂದು ಸೈಫ್​ ಅಲಿ ಖಾನ್​ ಹೇಳಿದ್ದಾರೆ.

 ನರೇಂದ್ರ ಮೋದಿ, ಕೇಜ್ರಿವಾಲ್​ ಎಲ್ಲರೂ ಧೈರ್ಯಶಾಲಿಗಳೆ. ಆದರೆ ಹಿಂದಿನ ಕೆಲವು ಘಟನೆಗಳನ್ನು ನೋಡಿದಾಗ  ರಾಹುಲ್ ಗಾಂಧಿ ಇಷ್ಟವಾಗುತ್ತಾರೆ. ಅವರ ನಡೆಯು ಬಹಳ ಮನಮುಟ್ಟುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ರಾಹುಲ್​ ಗಾಂಧಿಯವರು ಮಾತನಾಡಿದ್ದು ಮತ್ತು ಮಾಡಿದ ಕೆಲಸಗಳೆಲ್ಲದಕ್ಕೂ ಹಲವರು ಅವರನ್ನು ಹಿಂದೊಮ್ಮೆ ಹೀಯಾಳಿಸುತ್ತಿದ್ದರು. ಆದರೆ ಅದಕ್ಕೆ ರಾಹುಲ್​ ಗಾಂಧಿ  ಆಸಕ್ತಿಕರ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಚೆನ್ನಾಗಿ ಕೆಲಸ ಮಾಡುವ ಮೂಲಕ ಸಂಪೂರ್ಣ ಚಿತ್ರಣವನ್ನೇ ಬದಲಾಸಿದ್ದಾರೆ ಎಂದು ನನಗೆ ಅನ್ನಿಸುತ್ತದೆ ಎಂದಿದ್ದಾರೆ ನಟ.  

ಕರೀನಾ ಜೊತೆನೂ ಸೈಫ್​ಗೆ ಬೋರ್​ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ

ಇದೇ ವೇಳೆ ರಾಜಕಾರಣಕ್ಕೆ ಹೋಗುವ ಆಸೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಟ, ಸದ್ಯ ಯಾವ ಆಸೆಯೂ ಇಲ್ಲ,  ರಾಜಕಾರಣದ ಬಯಕೆಯೂ ಇಲ್ಲ ಎಂದರು. ಹಾಗಿದ್ದರೆ  ಯಾರನ್ನು ಬೆಂಬಲಿಸುತ್ತೀರಿ ಎಂದು ಪ್ರಶ್ನೆ ಕೇಳಿದಾಗ, ಅಡ್ಡ ಗೋಡೆ ಮೇಲೆ ದೀಪ ಇಟ್ಟವರಂತೆ ಮಾತನಾಡಿದರು.  ನಾನು ಯಾರನ್ನು ಬೆಂಬಲಿಸುತ್ತೇನೆ ಮತ್ತು ನನ್ನ ರಾಜಕೀಯ ನಿಲುವು ಏನು ಎಂಬ ಕುರಿತು ಸದ್ಯ ಏನನ್ನೂ ಮಾತನಾಡುವುದಿಲ್ಲ.  ನಾನು ನನ್ನ ಬಾಹ್ಯನೋಟದಲ್ಲಿ ರಾಜಕಾರಣದಿಂದ ದೂರವೇ ಇರಲು ಬಯಸುವ ವ್ಯಕ್ತಿ.  ದೇಶದ ಬಗ್ಗೆ ಸ್ಪಷ್ಟತೆ ಇರುವ ಹಿನ್ನೆಲೆಯಲ್ಲಿ ಒಂದಿಷ್ಟು ಮಾತನಾಡಿದ್ದೇನೆ ಅಷ್ಟೇ ಎಂದಿದ್ದಾರೆ.  ಸದ್ಯದ ಪರಿಸ್ಥಿತಿ ಹೇಳುವುದಾದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಜೀವಂತ ಇದೆ ಮತ್ತು ವರ್ಧಿಸುತ್ತಿದೆ ಎಂದು ನನಗೆ ಅನ್ನಿಸುತ್ತಿದೆ ಎಂದರು. 
 
 ನಾನು ರಾಜಕಾರಣಿಯಲ್ಲ. ನಾನು ನಿಜವಾಗಿಯೂ ರಾಜಕಾರಣಿಯಾಗಲು ಬಯಸುವುದಿಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್ಸಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್, ಸೈಫ್​ ಅವರು ಸರಿಯಾಗಿ ಮಾತನಾಡಿದ್ದಾರೆ. ರಾಹುಲ್​ ಗಾಂಧಿಯವರು ತಮ್ಮ ಬಗ್ಗೆ ಜನರ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ ಎಂಬುದು ನಿಜ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿ ಜಿ ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಅವರ ಬಗ್ಗೆ ಜನರ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ ಎಂದಿದ್ದಾರೆ.  

ಮಗಳು ಸಾರಾ ಅಲಿಗೆ ಸೆಕ್ಸ್​ ಬಗ್ಗೆ ಹೀಗೆ ಪ್ರಶ್ನೆ ಕೇಳೋದಾ ನಟಿ ಕರೀನಾ ಕಪೂರ್? ನೆಟ್ಟಿಗರು ಗರಂ
 

Latest Videos
Follow Us:
Download App:
  • android
  • ios