Asianet Suvarna News Asianet Suvarna News

ಭುಜದ ಮೂಳೆ, ಮೊಣಕಾಲು ಮುರಿತ? ನಟ ಸೈಫ್​ ಅಲಿ ಖಾನ್ ಆ​ಸ್ಪತ್ರೆಗೆ ದಾಖಲು- ಆತಂಕದಲ್ಲಿ ಫ್ಯಾನ್ಸ್​

ಭುಜದ ಮೂಳೆ ಹಾಗೂ ಮೊಣಕಾಲು ಮುರಿತದಿಂದ  ನಟ ಸೈಫ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಭಿಮಾನಿಗಳಲ್ಲಿ ಆತಂಕ ಉಂಟಾಗಿದೆ. ಇದು ಆಗಿದ್ದು ಹೇಗೆ? 
 

Saif Ali Khan Admitted In Mumbai Hospital Suffering Knee, Shoulder Fractures suc
Author
First Published Jan 22, 2024, 5:06 PM IST

ನಟಿ ಕರೀನಾ ಕಪೂರ್​ ಪತಿ, ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ವಿಷಯ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸೈಫ್​ ಅಭಿಮಾನಿಗಳು ಆತಂಕಗೊಂಡಿದ್ದಾರೆ. ನಟನ ಭುಜದಲ್ಲೂ ಮೂಳೆ ಮುರಿತವಾಗಿದೆ ಎಂದು ಹೇಳಲಾಗುತ್ತಿದ್ದು, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೆಲ್ಲ ಹೇಗೆ ನಡೆದಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಕರೀನಾ ಕಪೂರ್​ ಅವರು ಸದ್ಯ ಆಸ್ಪತ್ರೆಯಲ್ಲಿಯೇ ಇರುವುದಾಗಿ ಮಾಹಿತಿ ಸಿಕ್ಕಿದೆ.
 
'ದೈನಿಕ್ ಭಾಸ್ಕರ್' ವರದಿ ಪ್ರಕಾರ, ಸೈಫ್ ಅಲಿ ಖಾನ್ ಮೊಣಕಾಲು ಮತ್ತು ಭುಜಕ್ಕೆ ಗಾಯಗಳಾಗಿವೆ. ಅವರ ಮೊಣಕಾಲು ಮತ್ತು ಭುಜದಲ್ಲಿ ಮೂಳೆ ಮುರಿತವಾಗಿದೆ. ಆದರೆ, ಇದೆಲ್ಲ ಹೇಗೆ ನಡೆದಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ನಟನ ಗಾಯದ ಬಗ್ಗೆ ಖಾನ್ ಕುಟುಂಬದ ಯಾರೂ ಇನ್ನೂ ಯಾವುದೇ ಅಪ್​ಡೇಟ್​ ನೀಡಿಲ್ಲ. ಈ ದಿನಗಳಲ್ಲಿ ಸೈಫ್ ಅಲಿ ಖಾನ್ ಸೌತ್ ಚಿತ್ರ 'ದೇವ್ರಾ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಜೂನಿಯರ್ ಎನ್​ಟಿಆರ್​ ಮತ್ತು ಜಾಹ್ನವಿ ಕಪೂರ್ ಅವರ ಈ ಚಿತ್ರದಲ್ಲಿ ಸೈಫ್​ ಅವರು 'ಬಹಿರಾ' ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಶೂಟಿಂಗ್ ಸಮಯದಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಪತ್ನಿ ಯಾರೆಂದೇ ಸೈಫ್​ಗೆ ಕನ್​ಫ್ಯೂಸ್​! ಕರೀನಾ ಅಂದ್ಕೊಂಡು ಇನ್ನೊಬ್ಬಳ ಹಿಡಿದುಕೊಳ್ಳಲು ಮುಂದಾದ ನಟ
 
 ಇದಲ್ಲದೇ 'ಕ್ಯಾ ಕೆಹನಾ' ಚಿತ್ರದ ದೃಶ್ಯವೊಂದರಲ್ಲಿ ಬೈಕ್ ಸ್ಟಂಟ್ ವೇಳೆ ಸೈಫ್ ಅಲಿ ಖಾನ್ ಗಾಯಗೊಂಡಿದ್ದರು. ಇಡೀ ತಂಡ ಖಂಡಾಲಾದಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿತ್ತು. ಆ ದಿನಗಳಲ್ಲಿ ಅಲ್ಲಿ ಮಳೆಯಿಂದಾಗಿ ಕೆಸರು ಇದ್ದುದರಿಂದ ಸೈಫ್ ಅತಿವೇಗದಲ್ಲಿ ಮೋಟಾರ್ ಸೈಕಲ್ ಓಡಿಸಿದಾಗ ಕೆಸರಿನಲ್ಲಿ ಜಾರಿ ಬಿದ್ದಿತ್ತು. ಬೈಕ್‌ನಿಂದ ನೇರವಾಗಿ ನೆಲಕ್ಕೆ ಬಿದ್ದು ತಲೆ ದೊಡ್ಡ ಕಲ್ಲಿಗೆ ಬಡಿದಿದೆ. ನಂತರ ಸ್ಥಳೀಯ ಆಸ್ಪತ್ರೆಯಲ್ಲಿ 100 ಹೊಲಿಗೆ ಹಾಕಲಾಗಿತ್ತು.  ಇದೀಗ ದೇವ್ರಾ ಚಿತ್ರೀಕರಣದ ಸಂದರ್ಭದಲ್ಲಿ ಏನಾದರೂ ಆಗಿದೆಯೇ ಎನ್ನಲಾಗುತ್ತಿದೆ. 
 
ಆದರೆ ಈ ಬಗ್ಗೆ ನಟಿ  ಕರೀನಾ ಕಪೂರ್ ಕೂಡ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಯಾವುದೇ ಮಾಹಿತಿ ನೀಡಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಕರೀನಾ ಮತ್ತು ಸೈಫ್​ ಫ್ಯಾನ್ಸ್​ ಚಿಂತೆಗೆ ಒಳಗಾಗಿದ್ದಾರೆ. ಅಂದಹಾಗೆ, ಸೈಫ್​ ಅಲಿ ಮತ್ತು ಕರೀನಾ 2012ರಲ್ಲಿ ಮದುವೆಯಾಗಿದ್ದಾರೆ. ಸೈಫ್​ ಅವರಿಗೆ ಇದು ಎರಡನೆಯ ಮದುವೆ. ಮೊದಲ ಮದುವೆ ನಟಿ ಅಮೃತಾ ಸಿಂಗ್​ ಜೊತೆ ನಡೆದಿತ್ತು. ಮೊದಲ ಮದುವೆ ಸಂದರ್ಭದಲ್ಲಿ ಚಿಕ್ಕ ಬಾಲಕಿಯಾಗಿದ್ದ ಕರೀನಾ ಅವರನ್ನು ನಟ ಮಗಳೇ ಎಂದು ಕರೆದಿದ್ದರು. ನಂತರ 2012ರಲ್ಲಿ ಅವರನ್ನೇ ಮದುವೆಯಾಗಿದ್ದು, ಇದೀಗ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 

ಮುಂದಿನ ತಿಂಗಳು ರಶ್ಮಿಕಾ ಜತೆ ನಿಶ್ಚಿತಾರ್ಥ ನಿಜನಾ? ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ!

Follow Us:
Download App:
  • android
  • ios