ಪ್ರೇಮಂ ನಟಿ ಸಾಯಿ ಪಲ್ಲವಿ ಮುಂದೆ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ..? ಬಹುಭಾಷಾ ನಟಿ ಸೌಂದರ್ಯ ಅವರ ಪಾತ್ರಕ್ಕೆ ಸಾಯಿ ಪಲ್ಲವಿ ಜೀವ ತುಂಬಲಿದ್ದಾರೆ ಎಂಬ ಮಾತುಗಳಿವೆ.

ಬಹುಭಾಷಾ ನಟಿ ಸೌಂದರ್ಯ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಮೃತಪಟ್ಟಿದ್ದರು. ನಟಿಯ ಜೀವನಾಧಾರಿತ ಸಿನಿಮಾ ಬರುತ್ತೆ ಎಂಬ ಮಾತು ಹಿಂದಿನಿಂದಲೇ ಇದೆ. ಈದೀಗ ಈ ಸಿನಿಮಾದಲ್ಲಿ ಪ್ರೇಮಂ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಸೌಂದರ್ಯ ನಿಧನರಾದಾಗ 7 ತಿಂಗಳ ಗರ್ಭಿಣಿ?

ಮಲಯಾಳಂ, ಕನ್ನಡ ಸೇರಿ ಇತರ ಭಾಷೆಗಳಲ್ಲಿ ನಟಿಸಿದ ಸೌಂದರ್ಯ ಜೀವನಾಧಾರಿತ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್ ಮಾತ್ರವಲ್ಲ ಬೇರೆ ಚಿತ್ರರರಂಗದಲ್ಲಿಯೂ ಅಷ್ಟೇ ಕುತೂಹಲವಿದೆ. ಸಹಜ ಸುಂದರಿ ಸೌಂದರ್ಯ ಅವರಿಗೆ ಅಂದಿನಷ್ಟೇ ಇಂದೂ ಅಭಿಮಾನಿಗಳಿದ್ದಾರೆ. ಹಾಗಾಗಿಯೇ ಸೌಂದರ್ಯ ಪಾತ್ರ ಮಾಡುವ ನಟಿಯ ಆಯ್ಕೆ ಸ್ವಲ್ಪ ಕಷ್ಟ.

ಬಹಳಷ್ಟು ಸಿನಿಮಾಗಳಲ್ಲಿ ಭಿನ್ನ ಪಾತ್ರಗಳನ್ನು ಮಾಡಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದ ಸೌಂದರ್ಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಮ್ಸ್ ಓಡಾಡುತ್ತಿವೆ.

ಅಕಾಲಿಕ ಮರಣಕ್ಕೆ ತುತ್ತಾದ ಬಾಲಿವುಡ್ ನಟಿಯರಿವರು..!

ಸಹಜ ಸುಂದರಿ ಸೌತ್ ನಟಿ ಸಾಯಿ ಪಲ್ಲವಿ ಪ್ರೇಮಂ ಮೂಲಕ ಹಿಟ್ ಆದ ತಾರೆ. ತಮ್ಮ ಆಡಂಬರವಿಲ್ಲದ ವ್ಯಕ್ತಿತ್ವ ಮತ್ತು ನಟನೆಯಿಂದ ಕಡಿಮೆ ಅವಧಿಯಲ್ಲಿ ಹಿಟ್ ಆದ ನಟಿ ಈಕೆ. ಸೌಂದರ್ಯ ಪಾತ್ರಕ್ಕೆ ಇವರು ಸೂಟ್ ಆಗಬಹುದೇನೋ..

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೌಂದರ್ಯ ಅವರ ಬಯೋಪಿಕ್‌ನಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಇನ್ನೂ ಸಿನಿಮಾ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲದಿರೋದ್ರಿಂದ ನಟಿಯ ಆಯ್ಕೆಯೂ ಅಂತಿಮವಾಗಿಲ್ಲ

ಇದನ್ನೂ ನೋಡಿ: ಸಾಯಿ ಪಲ್ಲವಿ ಬಗ್ಗೆ ಗಾಸಿಪ್!

"