ಬೆಂಗಳೂರು : ನಟಿ ಸೌಂದರ್ಯ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿ 15 ವರ್ಷಗಳು ಕಳೆದಿವೆ. 2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ  ಬಿಜೆಪಿ ಪರ ಪ್ರಚಾರಕ್ಕೆ  ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದರು. 

ಈ ವೇಳೆ ವಿಮಾನ ದುರಂತವಾಗಿ ಸಂಪೂರ್ಣ ಬೂದಿಯಾಗಿತ್ತು. ಈ ವೇಳೆ ಅವರ ಜೊತೆಗಿದ್ದ ಸಹೋದರ ಅಮರನಾಥರ್ ಅವರು ಅಸುನೀಗಿದ್ದರು. 

ಸೌಂದರ್ಯ ವಿಮಾನ ದುರಂತದಲ್ಲಿ ಮೃತಪಟ್ಟ ವೇಳೆ 7 ತಿಂಗಳ ಗರ್ಭಿಣಿಯಾಗಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.  ವಿಮಾನ ದುರಂತದಲ್ಲಿ ಮೃತಪಟ್ಟ ವೇಳೆ ಸೌಂದರ್ಯ ಅವರಿಗಿನ್ನು 31 ವರ್ಷ ವಯಸ್ಸಾಗಿತ್ತು. 

1992ರದಲ್ಲಿ ಗಾಂಧರ್ವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ವರು  12 ವರ್ಷಗಳಲ್ಲಿ 120ಕ್ಕೂ ಹೆಚ್ಚು ಚಿತ್ರಗಳಲ್ಲಿ  ನಟಿಸಿದ್ದರು. 

2003ರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಜಿ.ಎಸ್ ರಘು ಅವರನ್ನು ವಿವಾಹವಾಗಿದ್ದರು. ಅದರ ಮರುವರ್ಷವೇ ಬಿಜೆಪಿ ಸೇರ್ಪಡೆಯಾಗಿ ರಾಜಕೀಯ ಆರಂಭಿಸಿದ್ದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.