Asianet Suvarna News Asianet Suvarna News

ನ್ಯಾಚುರಲ್‌ ಬ್ಯೂಟಿ ಸಾಯಿಪಲ್ಲವಿ, ಸಿನಿಮಾದಲ್ಲಿ ನಟಿಸೋ ಮುಂಚೆ ಇಷ್ಟೆಲ್ಲಾ ಕಂಡೀಷನ್ಸ್ ಹಾಕ್ತಾರಂತೆ!

ಸಾಯಿ ಪಲ್ಲವಿ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ತಮ್ಮ ಸಹಜ ಪ್ರತಿಭೆ, ನಟನಾ ಕೌಶಲ್ಯ ಮತ್ತು ನೃತ್ಯದಿಂದ ಪ್ರೇಕ್ಷಕರ ಮನಗೆದ್ದಿರುವ ನಟಿ.  ಸಿನಿಮಾದಲ್ಲಿ ನಟಿಸುವುದಕ್ಕೆ ಸಾಯಿ ಪಲ್ಲವಿ ನಿರ್ಧಿಷ್ಟವಾಗಿ ಕೆಲವು ನಿಬಂಧನೆಯನ್ನೂ ಹಾಕುತ್ತಾರೆ. ಅದೇನು ತಿಳಿಯೋಣ.

Sai Pallavi strict no policies followed by the actress on screen since her debut film Vin
Author
First Published Dec 10, 2023, 12:52 PM IST

ಸಾಯಿ ಪಲ್ಲವಿ, ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ತಮ್ಮ ಸಹಜ ಪ್ರತಿಭೆ, ನಟನಾ ಕೌಶಲ್ಯ ಮತ್ತು ನೃತ್ಯದಿಂದ ಪ್ರೇಕ್ಷಕರ ಮನಗೆದ್ದಿರುವ ನಟಿ.  ಮಲಯಾಳಂ ಚಲನಚಿತ್ರ 'ಪ್ರೇಮಂ'ನಲ್ಲಿ 'ಮಲರ್‌' ಪಾತ್ರದಲ್ಲಿ ಸಾಯಿಪಲ್ಲವಿ ನಟಿಸಿದ್ದರು. ಈ ಸಿನಿಮಾ ಥಿಯೇಟರ್‌ನಲ್ಲಿ ಹಿಟ್ ಆಗಿತ್ತು. ಸಾಯಿಪಲ್ಲವಿ ಸರಳತೆ, ನೋ ಮೇಕಪ್‌ ಲುಕ್ ಎಲ್ಲರ ಗಮನ ಸೆಳೆಯಿತು. ಆ ನಂತರ ಮಿಡಲ್‌ ಕ್ಲಾಸ್‌ಅಬ್ಬಾಯಿ, ಮಾರಿ 2, ಅತಿರನ್, ಪಾವ ಕಾದೈಗಲ್, ಲವ್ ಸ್ಟೋರಿ, ಶ್ಯಾಮ್ ಸಿಂಘ ರಾಯ್ ಮತ್ತು ಗಾರ್ಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳ ಪ್ರೇಕ್ಷಕರ ಮನಗೆದ್ದಿದ್ದಾರೆ.

ನಟಿಯಾಗಿರುವುದರ ಜೊತೆಗೆ ವೈದ್ಯಕೀಯ ಶಿಕ್ಷಣವನ್ನೂ ಮುಂದುವರೆಸಿರುವ ಸಾಯಿ ಪಲ್ಲವಿ, ಯಾವುದೇ ಪಾರ್ಟಿ ಅಥವಾ ರೆಡ್ ಕಾರ್ಪೆಟ್‌ ವಾಕ್‌ನಲ್ಲೂ ದುಬಾರಿ ಬಟ್ಟೆಗಳನ್ನು ಧರಿಸದೆ ಸಾಮಾನ್ಯ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.  ಬರೀ ಕಂಟೆಂಟ್‌ ಆಧಾರಿತ ಸಿನಿಮಾಗಳನ್ನು ಮಾತ್ರ ಸಾಯಿ ಪಲ್ಲವಿ ಮಾಡುತ್ತಾರೆ. ಸಿನಿಮಾದಲ್ಲಿ ನಟಿಸುವುದಕ್ಕೆ ಸಾಯಿ ಪಲ್ಲವಿ ನಿರ್ಧಿಷ್ಟವಾಗಿ ಕೆಲವು ನಿಬಂಧನೆಯನ್ನೂ ಹಾಕುತ್ತಾರೆ. ಆ ಬಗ್ಗೆ ತಿಳಿಯೋಣ.

ಕನ್ನಡಕ್ಕೆ ಸಾಯಿ ಪಲ್ಲವಿ , ರಾಕಿಂಗ್‌ ಸ್ಟಾರ್‌ಗೆ ನಾಯಕಿಯಾಗಲಿದ್ದರಾ ನ್ಯಾಚುರಲ್‌ ಬ್ಯೂಟಿ?

ಉತ್ತಮ ಪಾತ್ರಗಳ ಆಯ್ಕೆ
ಸಾಯಿ ಪಲ್ಲವಿ, ಯಾವಾಗಲೂ ತಮ್ಮ ಪಾತ್ರ ಹೆಚ್ಚು ಪ್ರಭಾವಶಾಲಿಯಾಗಿರಬೇಕು ಎಂದು ಹೇಳುತ್ತಾರೆ. ಪಾತ್ರಕ್ಕೆ ಹೆಚ್ಚು ತೂಕವಿದ್ದಾಗ ಮಾತ್ರ ಅದನ್ನು ಒಪ್ಪಿಕೊಳ್ಳುತ್ತಾರೆ. ತನ್ನ ಪಾತ್ರಕ್ಕೆ (Character) ಮಾತ್ರವಲ್ಲ ಚಿತ್ರದ ಕಥೆಗೂ ನಟಿ ಆದ್ಯತೆ ನೀಡುತ್ತಾಳೆ. ಈ ನಿಯಮ (Rules)ವನ್ನು ಮೊದಲಿನಿಂದಲೂ ಈ ಸಾಯಿ ಪಲ್ಲವಿ ಪಾಲಿಸುತ್ತಾರೆ.

ನೋ ಕಿಸ್ ಪಾಲಿಸಿ
ಚಿತ್ರರಂಗಕ್ಕೆ ಕಾಲಿಟ್ಟಾಗಲೇ ಸಾಯಿ ಪಲ್ಲವಿ, ಸಿನಿಮಾಗಳಲ್ಲಿ ಕಟ್ಟುನಿಟ್ಟಾದ ನೋ ಕಿಸ್ ಪಾಲಿಸಿ ಎಂಬ ನಿಯಮವನ್ನು ತಂದಿದ್ದಾರೆ. ಅಂತಹ ಸ್ಕ್ರಿಪ್ಟ್‌ಗಳು ಬಂದರೆ ಆಕೆ ಸಿನಿಮಾಗಳನ್ನು ತಿರಸ್ಕರಿಸುತ್ತಾರೆ. ಪರದೆಯ ಮೇಲೆ ಚುಂಬನ (Kiss)ವನ್ನು ಆಕೆ ಆರಿಸುವುದಿಲ್ಲ. ಈ ಬಗ್ಗೆ ಮಾತನಾಡಿರುವ ನಟಿ, 'ನನ್ನ ಇಡೀ ಕುಟುಂಬ ಚಲನಚಿತ್ರವನ್ನು ನೋಡಬೇಕೆಂದು ನಾನು ಬಯಸುತ್ತೇನೆ. ಲಿಪ್‌ಲಾಕ್‌ಗಳ ಮೂಲಕ ಅವರಿಗೆ ಮುಜುಗರವಾಗುವಂತೆ ಮಾಡಲು ನಾನು ಬಯಸುವುದಿಲ್ಲ. ವೈದ್ಯಕೀಯ ವೃತ್ತಿಯನ್ನು ತೊರೆದು ನಟನೆಯನ್ನು ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ಅದನ್ನು ಹೇಗೆ ಸಾರ್ಥಕಗೊಳಿಸಬೇಕೆಂದು ನಾನು ಬಯಸಿದ್ದೆ. ಅದನ್ನು ತಪ್ಪಿಸಲು ನಾನು ಬಯಸುವುದಿಲ್ಲ' ಎಂದು ಸಾಯಿ ಪಲ್ಲವಿ ಹೇಳಿದರು.

ಗಂಡು ಮಕ್ಕಳಿಗೆ ಅಪ್ಪ ಏನು ಕಲಿಸಬೇಕೆಂದು ಹೇಳಿಕೊಟ್ಟ ನಟಿ ಸಾಯಿ ಪಲ್ಲವಿ!

ಶೇಖರ್ ಕಮ್ಮುಲ ಅವರ ಬ್ಲಾಕ್‌ಬಸ್ಟರ್ ಚಿತ್ರ ಲವ್ ಸ್ಟೋರಿಗಾಗಿ, ನಾಗ ಚೈತನ್ಯ ಅವರೊಂದಿಗೆ ಸೆಕೆಂಡುಗಳ ಲಿಪ್ ಕಿಸ್ ದೃಶ್ಯವನ್ನು ಸಾಯಿಪಲ್ಲವಿ ಹಂಚಿಕೊಂಡಿದ್ದರು. ಇದು ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿತ್ತು. ಆದರೆ, ಚಿತ್ರದಲ್ಲಿ ನಾನು ನಿಜವಾಗಿಯೂ ಕಿಸ್ ಮಾಡಿಲ್ಲ ಆದರೆ ಇದೆಲ್ಲವೂ ಕ್ಯಾಮೆರಾ ಆಂಗಲ್ ಎಂದು ನಟಿ ಹೇಳಿದ್ದರು. 'ನಾನು ಎಂದಿಗೂ ಚುಂಬನದ ದೃಶ್ಯಗಳನ್ನು ಮಾಡುವುದಿಲ್ಲ. ಅದನ್ನು ವಿರೋಧಿಸುತ್ತೇನೆ. ಅಂತಹ ದೃಶ್ಯಗಳನ್ನು ನಾನು ಮಾಡುವುದಿಲ್ಲ ಎಂದು ನಿರ್ದೇಶಕ ಶೇಖರ್ ಕಮ್ಮುಲ ಅವರ ಬಳಿಯೂ ಸ್ಪಷ್ಟಪಡಿಸಿದ್ದೆ. ಅವರು ನನ್ನನ್ನು ಎಂದಿಗೂ ತೊಂದರೆಗೊಳಿಸಲಿಲ್ಲ. ಈ ಲಿಪ್‌ ಕಿಸ್‌ ಕ್ಯಾಮೆರಾಮನ್‌ ಮ್ಯಾಜಿಕ್ ಆಗಿದೆ' ಎಂದು ಸಾಯಿಪಲ್ಲವಿ ಸ್ಪಷ್ಟಪಡಿಸಿದ್ದರು. 

ಕಡಿಮೆ ಬಟ್ಟೆ ಧರಿಸಲ್ಲ
ಸಾಯಿ ಪಲ್ಲವಿ ಯಾವಾಗಲೂ ಸೀರೆ ಅಥವಾ ಎಥ್ನಿಕ್ ಡ್ರೆಸ್‌ನಲ್ಲೇ ಸಿನಿಮಾದಲ್ಲೇ ಅಭಿನಯಿಸುತ್ತಾರೆ. ಯಾವುದೇ ಸಣ್ಣ ಉಡುಗೆಯನ್ನು ಧರಿಸುವುದು ಕಡಿಮೆ. ಸಿನಿಮಾದಲ್ಲಿ ಕಡಿಮೆ ಬಟ್ಟೆ (Dress)ಗಳನ್ನು ಧರಿಸಲು ಸಾಧ್ಯವಿಲ್ಲ ಎಂದು ಸಾಯಿಪಲ್ಲವಿ ಕಟ್ಟುನಿಟ್ಟಾಗಿ ಹೇಳುತ್ತಾರೆ. 'ಅಂಥಾ ಉಡುಪನ್ನು ನಾನು ವಿರೋಧಿಸುವುದಿಲ್ಲ, ಆದರೆ ನಾನು ಅದನ್ನು ನಾನು ಹಾಕಲು ಇಷ್ಟಪಡುವುದಿಲ್ಲ' ಎಂದು ಸಾಯಿಪಲ್ಲವಿ ತಿಳಿಸಿದ್ದಾರೆ. 'ಸಣ್ಣ ಉಡುಪುಗಳನ್ನು ಧರಿಸುವುದು ಆರಾಮದಾಯಕವಲ್ಲ. ನಾನು ಸಾಕಷ್ಟು ಅನಾನುಕೂಲತೆಯನ್ನು ಅನುಭವಿಸುತ್ತೇನೆ ಮತ್ತು ಅದು ನನ್ನ ಮುಖದ ಮೇಲೆ ವ್ಯಕ್ತವಾಗುತ್ತದೆ. ಫಿದಾದಲ್ಲಿ ಒಂದು ದೃಶ್ಯವಿದೆ, ಅಲ್ಲಿ ನಾನು ಶಾರ್ಟ್ ಡ್ರೆಸ್ ಧರಿಸಬೇಕಾಗಿತ್ತು ಏಕೆಂದರೆ ದೃಶ್ಯಕ್ಕೆ ಅದು ಬೇಕಾಗಿತ್ತು. ಆದರೆ ಅಂಥಾ ಬಟ್ಟೆಯನ್ನು ಧರಿಸಿ ನಾನು ತುಂಬಾ ಡಿಸ್ಟರ್ಬ್ ಆಗಿದ್ದೆ' ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಇಷ್ಟೆಲ್ಲಾ ಷರುತ್ತಗಳನ್ನು ಒಪ್ಪಿಕೊಂಡಾಗ ಮಾತ್ರ ಸಾಯಿ ಪಲ್ಲವಿ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ನೀಡುತ್ತಾರಂತೆ. ಸದ್ಯ ಸಾಯಿ ಪಲ್ಲವಿ, ನಾಗ ಚೈತನ್ಯ ಜೊತೆ `ತಾಂಡೇಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. `ಲವ್ ಸ್ಟೋರಿ' ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದೆ.. ಈ ಸಿನಿಮಾವನ್ನು ಗೀತಾ ಆರ್ಟ್ಸ್ ನಿರ್ಮಾಣ ಮಾಡುತ್ತಿದೆ.

Follow Us:
Download App:
  • android
  • ios