ದಕ್ಷಿಣ ಭಾರತದ (South Indian) ಹೆಸರಾಂತ ನಟಿ, ಹಲವು ಹುಡುಗರ ಮನಸ್ಸು ಕದ್ದಿರುವ ಕ್ರಶ್‌ ಸಾಯಿಪಲ್ಲವಿ (Sai Pallavi).  ವಿಭಿನ್ನವಾಗಿರುವ ಸಿನಿಮಾಗಳನ್ನು ಆಯ್ದುಕೊಂಡು, ಅದ್ಭುತ ಅಭಿನಯದ ಮೂಲಕ ಜನಮನ ರಂಜಿಸುತ್ತಾರೆ. ಸದ್ಯ ಈ ನ್ಯೂಚುರಲ್ ಬ್ಯೂಟಿ (Natural Beauty)ಮತ್ತೊಮ್ಮೆ ಸುದ್ದಿಯಲಿದ್ದಾರೆ. ಅದ್ಯಾಕೆ. ಏನು. ಇಲ್ಲಿದೆ ಡೀಟೈಲ್ಸ್‌.

ದಕ್ಷಿಣಭಾರತದ ನಟಿ (South Indian Actress)ಯರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿಯರಲ್ಲೊಬ್ಬರು ಸಾಯಿಪಲ್ಲವಿ (Sai Pallavi). ಇವರು ಮಲಯಾಳಂ 'ಪ್ರೇಮಂ' ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದರು. ಚಿತ್ರದಲ್ಲಿ ಸಾಯಿಪಲ್ಲವಿಯ ಮಲರ್ ಟೀಚರ್ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಾಯಿ ಪಲ್ಲವಿ ಅದ್ಭುತ ಡ್ಯಾನ್ಸರ್ (Dancer) ಕೂಡಾ ಹೌದು. ಕೇವಲ ಮಲಯಾಳಂ ಮಾತ್ರವಲ್ಲ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಪ್ರೇಮಂ ಮತ್ತು ಫಿದಾ ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಅವರು ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪಲ್ಲವಿ ಶಿಕ್ಷಣದಿಂದ ವೈದ್ಯೆಯಾಗಿದ್ದು, 2016ರಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ.

ಸಾಯಿಪಲ್ಲವಿ ತಮ್ಮ ಸರಳತೆ, ನೋ ಮೇಕಪ್‌ ಲುಕ್‌ (No makeup look)ಗೆ ಹೆಚ್ಚು ಹೆಸರುವಾಸಿ. ಅಭಿಮಾನಿಗಳನ್ನು ದೇವರಂತೆ ನೋಡುವ ಇವರು ಸಿನಿಮಾಗಳನ್ನು ಸಹ ತುಂಬಾ ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಾರೆ. ಸಮಾಜಕ್ಕೆ ಸಂದೇಶ ನೀಡುವಂತಹಾ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಸಹಜ ಸುಂದರಿ ಎಂದು ಕರೆಸಿಕೊಳ್ಳುವ ಸಾಯಿ ಈ ಹಿಂದೆ ಕೋಟಿ ಮೊತ್ತದ ಫೇರ್‌ನೆಸ್‌ ಕ್ರೀಂ ಜಾಹೀರಾತನ್ನು (Fareness cream Advertisement) ತಿರಸ್ಕರಿಸಿ ಸುದ್ದಿಯಾಗಿದ್ದರು. ಈಗ ಮತ್ತೆ ಅದೇ ರೀತಿ 2 ಕೋಟಿ ಸಂಭಾವನೆ ನೀಡುವುದಾಗಿ ಹೇಳಿದರೂ ಟೆಲಿಧಾರಾವಾಹಿಗಳನ್ನು ಪ್ರಚಾರ ಮಾಡಲು ನಿರಾಕರಿಸಿದ್ದಾರೆ.

ಚಾರ್ಲಿಗಾಗಿ ಬೆಂಗಳೂರಿಗೆ ಬಂದ ಸಾಯಿ ಪಲ್ಲವಿ; ನಾಯಿಯನ್ನು ಮುದ್ದಾಡಿದ ನಟಿ

ಟೆಲಿಧಾರಾವಾಹಿಗಳನ್ನು ಪ್ರಚಾರ ಮಾಡುವ ಪ್ರಾಜೆಕ್ಟ್ ನಿರಾಕರಿಸಿದ ಸಾಯಿಪಲ್ಲವಿ
ಸಾಯಿ ಪಲ್ಲವಿ ಅಪರೂಪದ ನಟಿಯರಲ್ಲಿ ಒಬ್ಬರು. ಅವರು ಎಂದಿಗೂ ತನ್ನ ತತ್ವಗಳಿಗೆ ವಿರುದ್ಧವಾಗಿ ಕೆಲಸ ಮಾಡಿದೊಡ್ಡ ಹಣವನ್ನು ಗಳಿಸಲಿಲ್ಲ. ಈ ಹಿಂದೆ ಸಾಯಿ ಪಲ್ಲವಿ ಘನತೆವೆತ್ತ ಸಿನಿಮಾ ಮೂಲಕವೇ ಪ್ರೇಕ್ಷಕರನ್ನು ರಂಜಿಸಲು ಇಂಡಸ್ಟ್ರಿಯಲ್ಲಿದ್ದೇನೆ ಎಂದು ಹೇಳಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಸಾಯಿ ಪಲ್ಲವಿ ಅವರಿಗೆ ಖ್ಯಾತ ಸಂಸ್ಥೆಯೊಂದು 2 ಕೋಟಿ ಸಂಭಾವನೆ ನೀಡುವುದಾಗಿ ಹೇಳಿ ತಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್ ನೀಡಿದೆ. ಆದರೆ ಈ ಆಫರ್ ಅನ್ನು ಸಾಯಿ ಪಲ್ಲವಿ ಅವರು ತಿರಸ್ಕಾರ ಮಾಡಿದ್ದಾರೆ. 

ವರದಿಯ ಪ್ರಕಾರ, ಸಾಯಿ ಪಲ್ಲವಿಗೆ ನಿರ್ದಿಷ್ಟ ಚಾನೆಲ್‌ನಲ್ಲಿ ಪ್ರಸಾರವಾಗುವ ವಿವಿಧ ಕಾರ್ಯಕ್ರಮಗಳು ಮತ್ತು ಟೆಲಿಧಾರಾವಾಹಿಗಳನ್ನು ಪ್ರಚಾರ ಮಾಡಲು 2 ಕೋಟಿ ರೂಪಾಯಿಗಳನ್ನು ನೀಡಲಾಯಿತು, ಆದರೆ ಚಲನಚಿತ್ರಗಳನ್ನು ಹೊರತುಪಡಿಸಿ ಇತರ ಮನರಂಜನಾ ಚಟುವಟಿಕೆಗಳ ಬಗ್ಗೆ ತನಗೆ ಯಾವುದೇ ಕಲ್ಪನೆಯಿಲ್ಲ ಎಂದು ಅವರು ಆಫರ್ ಅನ್ನು ತಿರಸ್ಕರಿಸಿದರು. ಅಂತಹ ಕಾರ್ಯಕ್ರಮಗಳ ಬಗ್ಗೆ ತನಗೆ ಸ್ಪಷ್ಟತೆ ಇಲ್ಲದಿರುವಾಗ, ಅವುಗಳನ್ನು ಹೇಗೆ ಅನುಮೋದಿಸಬಹುದು ಎಂದು ಅವರು ಹೇಳಿದರು.

ಫೇಸ್ ಕ್ರೀಮ್ ಜಾಹೀರಾತು ನಿರಾಕರಿಸಿದ್ದ 'ಪ್ರೇಮಂ' ನಟಿ
ಈ ಹಿಂದೆ ಕಂಪೆನಿಯೊಂದು ಫೇಸ್ ಕ್ರೀಮ್ ಜಾಹೀರಾತಿಗೆ ಸಾಯಿ ಪಲ್ಲವಿ ಸೂಕ್ತ ಎಂದು ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಅದರಂತೆಯೇ ಅವರ ಬಳಿ ಸಂಸ್ಥೆ ಬೇಡಿಕೆ ಇಟ್ಟಾಗ ಜಾಹೀರಾತಿನ ಆಫರನ್ನು ಸಾಯಿ ಪಲ್ಲವಿ ಅವರು ತಾವು ಮಾಡುವುದಿಲ್ಲ ಎಂದು ಹೇಳಿ ತಿರಸ್ಕರಿಸಿದ್ದರು.

ಕನ್ನಡ ಮಾತನಾಡಿದ ಬೆನ್ನಲ್ಲೇ ರಕ್ಷಿತ್ ಶೆಟ್ಟಿಗೆ ಸಾಥ್ ನೀಡಿದ ನಟಿ ಸಾಯಿ ಪಲ್ಲವಿ

ಇದು ಫೇಸ್ ಕ್ರೀಮ್ ಜಾಹೀರಾತು ಆಗಿರುವುದರಿಂದ ಸಾಮಾನ್ಯವಾಗಿ ಮೊಡವೆ ಇರಲ್ಲ, ಮಾರ್ಕ್ ಇರಲ್ಲ, ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ಇದರಿಂದ ಜನರನ್ನು ಮೋಸ ಮಾಡಿದಂತೆ ಆಗುತ್ತದೆ. ಪ್ರೇಕ್ಷಕರಿಗೆ ಸುಳ್ಳು ಹೇಳುವುದು ಕಷ್ಟವಾಗುತ್ತದೆ ಎಂದು ಸಾಯಿ ಪಲ್ಲವಿ ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಸಾಯಿ ಪಲ್ಲವಿಯ ಸರಳತೆಗೆ, ಉತ್ತಮ ಗುಣಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ನಟಿ ಸಾಯಿ ಪಲ್ಲವಿ ಅವರು ತಾವು ಅಭಿನಯಿಸುವ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಬಳಸುವುದಿಲ್ಲ. ತಮ್ಮ ಮುಖದಲ್ಲಿ ಮೊಡವೆಗಳಿದ್ದರೂ ಅದನ್ನ ಕಾಣಿಸಿದಂತೆ ಮೇಕಪ್ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ನೈಜ ಸೌಂದರ್ಯವನ್ನೇ ಉಳಿಸಿಕೊಂಡು, ಸಿನಿಮಾ ಮಾಡುತ್ತಾರೆ. ಈ ಮೂಲಕವೇ ಅವರು ಅಪಾರ ಪ್ರೇಕ್ಷಕರ ಮನಗೆದ್ದಿದ್ದಾರೆ.

ಬೆಂಗ್ಳೂರಿನ ವೀಣಾ ಸ್ಟೋರ್‌ನಲ್ಲಿ ಇಡ್ಲಿ ತಿಂದ್ರಂತೆ ಸಾಯಿ ಪಲ್ಲವಿ!

ರಿಮೇಕ್‌ ಚಿತ್ರಗಳಲ್ಲಿ ನಟಿಸಲ್ಲ
ಸಾಯಿ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಭೋಲಾ ಶಂಕರ್ ಅನ್ನು ತಿರಸ್ಕರಿಸಿದ್ದಾರೆ ಎಂದು ವರದಿ ಹೇಳಿದೆ, ಅವರು ರಿಮೇಕ್ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭೋಲಾ ಶಂಕರ್ ತಮಿಳಿನ ಬ್ಲಾಕ್ ಬಸ್ಟರ್ "ವೇದಾಲಂ" ನ ರಿಮೇಕ್ ಆಗಿದೆ. ಯಾವುದೇ ರಿಮೇಕ್‌ನಲ್ಲಿ ನಟಿಸುವುದು ತನ್ನ ತತ್ವಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಾವಂತ ನಟಿ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಸಾಯಿ ಪಲ್ಲವಿ ರಾಣಾ ದಗ್ಗುಬಾಟಿ ಜೊತೆ ಅಭಿನಯಿಸಿರುವ 'ವಿರಾಟ ಪರ್ವಂ' ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ಪ್ರಿಯಾಮಣಿ, ನಂದಿತಾ ದಾಸ್, ನವೀನ್ ಚಂದ್ರ, ಜರೀನಾ ವಹಾಬ್, ಈಶ್ವರಿ ರಾವ್ ಮತ್ತು ಸಾಯಿ ಚಂದ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಜೂನ್ 17 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.