ಚಾರ್ಲಿಗಾಗಿ ಬೆಂಗಳೂರಿಗೆ ಬಂದ ಸಾಯಿ ಪಲ್ಲವಿ; ನಾಯಿಯನ್ನು ಮುದ್ದಾಡಿದ ನಟಿ
ಚಾರ್ಲಿಯನ್ನು ನೋಡಿ ಫಿದಾ ಆಗಿರುವ ನಟಿ ಸಾಯಿ ಪಲ್ಲವಿ ಚಾರ್ಲಿ ನೋಡಲು ಬೆಂಗಳೂರಿಗೆ ಬಂದಿದ್ದಾರೆ. ಚಾರ್ಲಿಯನ್ನು ಮುದ್ದಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಯಿ ಪಲ್ಲವಿ ತನ್ನ ಕಾಲುಮೇಲೆ ಚಾರ್ಲಿಯನ್ನು ಮಲಗಿಸಿಕೊಂಡು ಮುದ್ದು ಮಾಡುತ್ತಿರುವ ಫೋಟೋವನ್ನು ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋ ಶೇರ್ ಮಾಡಿದೆ.
ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಇಂದು (ಜೂನ್ 10) ಅದ್ದೂರಿಯಾಗಿ ತೆರೆಗೆ ಬಂದಿದೆ. ಈಗಾಗಲೇ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ಚಾರ್ಲಿಯನ್ನು ಚಿತ್ರಮಂದಿರಗಳಲ್ಲಿ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ದೇಶ-ವಿದೇಶಗಳಲ್ಲಿ ತೆರೆಗೆ ಬಂದಿರುವ 777 ಚಾರ್ಲಿಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಜರ್ನಿಗೆ ಪ್ರೇಕ್ಷಕರು ಭಾವುಕರಾಗಿದ್ದಾರೆ.
ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ಜಿನುಗುತ್ತಿದೆ. ಚಾರ್ಲಿಯ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಕ್ಷಿತ್ ಅಂಡ್ ಟೀಂ ಜೊತೆಗೆ ಚಾರ್ಲಿ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾರ್ಲಿ ಮಿಂಚುತ್ತಿದೆ. ಚಾರ್ಲಿಯನ್ನು ಮುದ್ದಾಡಲು ಕಾಯುತ್ತಿದ್ದಾರೆ.
ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಸಹ ಚಾರ್ಲಿಗೆ ಫಿದಾ ಆಗಿದ್ದಾರೆ. ಚಾರ್ಲಿಯನ್ನು ನೋಡಿ ಫಿದಾ ಆಗಿರುವ ನಟಿ ಸಾಯಿ ಪಲ್ಲವಿ ಚಾರ್ಲಿ ನೋಡಲು ಬೆಂಗಳೂರಿಗೆ ಬಂದಿದ್ದಾರೆ. ಚಾರ್ಲಿಯನ್ನು ಮುದ್ದಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Rakshit shetty 777 charlie
ಸಾಯಿ ಪಲ್ಲವಿ ತನ್ನ ಕಾಲುಮೇಲೆ ಚಾರ್ಲಿಯನ್ನು ಮಲಗಿಸಿಕೊಂಡು ಮುದ್ದು ಮಾಡುತ್ತಿರುವ ಫೋಟೋವನ್ನು ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋ ಶೇರ್ ಮಾಡಿದೆ. ಫೋಟೋ ಶೇರ್ ಮಾಡಿ, ಚಾರ್ಲಿ ನೋಡಲು ಯಾರು ಬಂದಿದ್ದಾರೆ ನೋಡಿ ಎಂದು ಕ್ಯಾಪ್ಷನ್ ನೀಡಿದ್ದಾರೆ.
'777 ಚಾರ್ಲಿ' ಸಿನಿಮಾ ನೋಡಿ ಮೆಚ್ಚಿಕೊಂಡವರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದು, ಸಿನಿಮಾವನ್ನು ಅದೆಷ್ಟು ಮೆಚ್ಚಿಕೊಂಡಿದ್ದಾರೆಂದರೆ, '777 ಚಾರ್ಲಿ' ಸಿನಿಮಾದಲ್ಲಿರುವ ನಾಯಿಯನ್ನು ಮುದ್ದಿಸಲು ಬೆಂಗಳೂರಿಗೆ ಬಂದಿದ್ದಾರೆ.
Rakshit shetty 777 charlie
ಸಾಯಿ ಪಲ್ಲವಿ 777 ಚಾರ್ಲಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸಿದ್ದರು. ರಕ್ಷಿತ್ ಸಿನಿಮಾಗೆ ಸಾಯಿ ಪಲ್ಲವಿ ಸಾತ್ ನೀಡಿರುವುದು ಕನ್ನಡ ಅಭಿಮಾನಿಗಳ ಸಂತಸ ಹೆಚ್ಚಿಸಿತ್ತು. ಇದೀಗ ಚಾರ್ಲಿಯನ್ನು ಮುದ್ದು ಮಾಡಲು ಬೆಂಗಳೂರಿಗೆ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.