ಕನ್ನಡ ಮಾತನಾಡಿದ ಬೆನ್ನಲ್ಲೇ ರಕ್ಷಿತ್ ಶೆಟ್ಟಿಗೆ ಸಾಥ್ ನೀಡಿದ ನಟಿ ಸಾಯಿ ಪಲ್ಲವಿ
777 ಚಾರ್ಲಿ ಸಿನಿಮಾದ ಬೇರೆ ಬೇರೆ ಭಾಷೆಯ ಟ್ರೈಲರ್ ಅನ್ನು ಆಯಾಯ ಭಾಷೆಯ ಸ್ಟಾರ್ ಕಲಾವಿದರು ಬಿಡುಗಡೆ ಮಾಡುತ್ತಿದ್ದಾರೆ. ವಿಶೇಷ ಎಂದರೆ ತೆಲುಗು ಭಾಷೆಯ ಟ್ರೈಲರ್ ಅನ್ನು ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ ರಿಲೀಸ್ ಮಾಡುತ್ತಿದ್ದಾರೆ.
ಸ್ಯಾಂಡಲ್್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ (777 Charlie) ಸಿನಿಮಾದ ಟ್ರೇಲರ್ (Trailer) ಮೇ 16ಕ್ಕೆ ಬಿಡುಗಡೆಯಾಗಲಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಈ ಮೂಲಕ ಧರ್ಮ ಮತ್ತು ಚಾರ್ಲಿಯ ಜಗತ್ತಿನ ಒಂದು ಕಿಟಕಿ ನಿಮಗೋಸ್ಕರ ತೆರೆಯಲಿದೆ’ ಎಂದು ಚಿತ್ರತಂಡ ಬಹಿರಂಗ ಪಡಿಸಿದೆ.
ತೆಲುಗು ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ಸಾಯಿ ಪಲ್ಲವಿ
ಇದೀಗ ಸಿನಿಮಾತಂಡ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಬಹಿರಂಗಪಡಿಸಿದೆ. ಹೌದು, ಬಹುನಿರೀಕ್ಷೆಯ ಸಿನಿಮಾಗೆ ಬೇರೆ ಬೇರೆ ಭಾಷೆಯ ಖ್ಯಾತ ಕಲಾವಿದರು ಸಾಥ್ ನೀಡಿದ್ದಾರೆ. ಅಂದರೆ 777 ಚಾರ್ಲಿ ಸಿನಿಮಾದ ಬೇರೆ ಬೇರೆ ಭಾಷೆಯ ಟ್ರೈಲರ್ ಅನ್ನು ಆಯಾಯ ಭಾಷೆಯ ಸ್ಟಾರ್ ಕಲಾವಿದರು ಬಿಡುಗಡೆ ಮಾಡುತ್ತಿದ್ದಾರೆ. ವಿಶೇಷ ಎಂದರೆ ತೆಲುಗು ಭಾಷೆಯ ಟ್ರೈಲರ್ ಅನ್ನು ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ ರಿಲೀಸ್ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ ಮಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದರು. ಗಾರ್ಗಿ ಸಿನಿಮಾಗಾಗಿ ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ ಮಾಡಿ ಗಮನ ಸೆಳೆದಿದ್ದರು. ಸಾಯಿ ಪಲ್ಲವಿ ಕನ್ನಡ ಮಾತನಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದೀಗ ರಕ್ಷಿತ್ ಶೆಟ್ಟಿ ಸಿನಿಮಾಗೆ ಸಾಥ್ ನೀಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ವೀಕ್ಷಿಸಿದ ರಾಣಾದಗ್ಗುಬಾಟಿ; ತೆಲುಗು ಸ್ಟಾರ್ ನೀಡಿದ ಮೊದಲ ವಿಮರ್ಶೆ ಹೀಗಿದೆ
ನಿವಿನ್ ಪೌಲಿ, ಟೊವಿನೋ ಥಾಮಸ್, ಧನುಷ್ ಸಾಥ್
ಇನ್ನು ಸಾಯಿ ಪಲ್ಲವಿ ಜೊತೆಗೆ ವೆಂಕಟೇಶ್ ದಗ್ಗುಬಾಟಿ, ಲಕ್ಷ್ಮಿ ಮಂಚು ಇಬ್ಬರೂ ಕೂಡ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಇನ್ನು ಮಲಯಾಳಂ ಟ್ರೈಲರ್ ಅನ್ನು ಖ್ಯಾತ ನಟ ನಿವಿನ್ ಪೌಲಿ, ಆಸಿಫ್ ಅಲಿ, ಟೊವಿನೋ ಥಾಮಸ್, ಆಂಟನಿ ವರ್ಗೀನ್ ಮತ್ತು ಅರ್ಜುನ್ ರಿಲೀಸ್ ಮಾಡುತ್ತಿದ್ದಾರೆ. ಇನ್ನು ತಮಿಳು ಟ್ರೈಲರ್ ಅನ್ನು ತಮಿಳಿನ ಖ್ಯಾತ ನಟ ಧನುಷ್ ಬಿಡುಗಡೆ ಮಾಡುತ್ತಿದ್ದಾರೆ.
ಮೇ 16, 12.12ಕ್ಕೆ ಟ್ರೈಲರ್ ಬಿಡುಗಡೆ
ಅಂದಹಾಗೆ ಬಹುನಿರೀಕ್ಷೆಯ ಟ್ರೈಲರ್ ಮೇ 16ರಂದು ಮಧ್ಯಾಹ್ನ 12.12ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಟ್ರೈಲರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ದೊಡ್ಡ ದೊಡ್ಡ ಕಲಾವಿದರು ಸಾಥ್ ನೀಡಿರುವುದು ಸಿನಿಮಾತಂಡಕ್ಕೆ ಮತ್ತಷ್ಟು ಬಲಬಂದಂತೆ ಆಗಿದೆ.
777 ಚಾರ್ಲಿ’ ಸಿನಿಮಾದ ಹಿಂದಿ ವಿತರಣೆ ಹಕ್ಕು ಖ್ಯಾತ ವಿತರಣಾ ಸಂಸ್ಥೆ ಯುಎಫ್‌ಓ ಪಾಲಾಗಿದೆ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ ವಿತರಣೆಯ ಹೊಣೆ ಹೊತ್ತರೆ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ಮಲಯಾಳಂನಲ್ಲಿ ನಟ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ.
ಸಿನಿಮಾ ವೀಕ್ಷಿಸಿ ವಿಮರ್ಶೆ ಮಾಡಿದ ರಾಣಾ ದಗ್ಗುಬಾಟಿ
ಇನ್ನು ಈಗಾಗಲೇ ರಾಣಾ ದಗ್ಗುಬಾಟಿ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡು ರಾಣಾ ದಗ್ಗುಬಾಟಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. '777 ಚಾರ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಅದ್ಭತವಾದ ಟ್ರೀಟ್ ಆಗಿದೆ. ಸಂಪೂರ್ಣ ರಿಫ್ರೆಶಿಂಗ್ ಸಿನಿಮಾ' ಎಂದಿದ್ದರು.
ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದ ಸಾಯಿ ಪಲ್ಲವಿ; ವಿಡಿಯೋ ವೈರಲ್
ಒಟಿಟಿ ರೈಟ್ಸ್ ಸೇಲ್
ಇತ್ತೀಚಿಗಷ್ಟೆ 777 ಚಾರ್ಲಿ ಒಟಿಟಿಗೆ ಸೇಲ್ ಆಗಿದ್ದ ಬಗ್ಗೆ ಸಿನಿಮಾತಂಡ ಬಹಿರಂಗ ಪಡಿಸಿತ್ತು. ವೂಟ್ ಸೆಲೆಕ್ಟ್ ನಲ್ಲಿ 777 ಚಾರ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಿದ್ದರು. ಸ್ಯಾಟಲೈಟ್ ರೈಟ್ಸ್ ಕೂಡ ಸೇಲ್ ಆಗಿದೆ ಎಂದು ಹೇಳಿದ್ದರು. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಜೂನ್ 10ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ 777 ಚಾರ್ಲಿ ಕಿರಣ್ ರಾಜ್ ಸಾರಥ್ಯದಲ್ಲಿ ಮೂಡಿಬಂದಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಉಳಿದಂತೆ ದಾನೀಶ್ ಸೇಠ್, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.