ಟಾಲಿವುಡ್‌ ಸಿನಿ ಪ್ರೇಮಿಗಳ ಸದ್ಯಕ್ಕೆ ಕಾತುರದಿಂದ ಕಾಯುತ್ತಿರುವುದು ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಕಾಂಬಿನೇಶನ್‌ನ 'ಲವ್‌ ಸ್ಟೋರಿ' ಸಿನಿಮಾ ನೋಡುವುದಕ್ಕೆ. ಈಗಾಗಲೇ ರಿಲೀಸ್‌ ಆಗಬೇಕಿದ್ದ ಸಿನಿಮಾ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿತ್ತು. ಈ ಸಮಯದಲ್ಲಿ ಚಿತ್ರತಂಡ ಡಿಜಿಟಲ್ ರೈಟ್ಸ್‌ ಮಾರಾಟ ಹಾಗೂ ಥಿಯೇಟರ್‌ ರೈಟ್ಸ್‌ ಮಾರಾಟದ ಬಗ್ಗೆ ಚರ್ಚೆ ನಡೆಸುತ್ತಿದೆ.  

ಸಾಮಾನ್ಯವಾಗಿ ಸಾಯಿ ಪಲ್ಲವಿ ಸಿನಿಮಾಗಳು ಹಾಗೂ ನಾಗಚೈತನ್ಯ ಸಿನಿಮಾಗಳು ಕೋಟಿಗೆ ಮಾರಾಟವಾಗುತ್ತದೆ ಆಂದ್ಮೇಲೆ ಇವರಿಬ್ಬರೂ ಜೋಡಿಯಾಗಿರುವ ಈ ಸಿನಿಮಾ ಹಿಟ್ ಆಗಲೇಬೇಕು ಅಲ್ವಾ?

'ಲವ್‌ಸ್ಟೋರಿ' ಕೇಳಿ ಸಾಯಿ ಪಲ್ಲವಿ ಜಾತಿ ಹಿಂದೆ ಬಿದ್ದ ಸೋಷಿಯಲ್ ಮೀಡಿಯಾ .

ಹೌದು! ಕೆಲ ಮೂಲಕಗಳ ಪ್ರಕಾರ ಡಿಜಿಟಲ್ ಹಾಗೂ ಸ್ಯಾಟಿಲೈಟ್  ಹಕ್ಕು 16 ಕೋಟಿಗೆ ಮಾರಾಟವಾಗಿದೆ. ಕೇವಲ ಟೀಸರ್‌ ಹಾಗೂ ಪೋಸ್ಟರ್‌ ಲುಕ್‌ನಲ್ಲೇ ಸಿಕ್ಕಾಪಟ್ಟೆ ಕ್ರೇಜ್‌ ಹೊಂದಿರುವ ಈ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಸಿನಿ ಪಂಡಿತರು. 

ಲವ್‌ಸ್ಟೋರಿಗೆ ಅಲ್ಲು ಸಾಥ್:

ಕ್ರೇಜಿ ಮ್ಯಾನ್‌ ಅಲ್ಲು ಅರ್ಜುನ್‌ ಲವ್‌ ಸ್ಟೋರಿ ಚಿತ್ರದ ಡಿಜಿಟಲ್  ರೈಟ್ಸ್‌ ಖರೀದಿಸಿದ್ದಾರೆ ಎನ್ನಲಾಗಿದೆ. ಅವರ ಮಾಲೀಕತ್ವದ 'ಆಹಾ' ಎಂದ ಒಟಿಟಿ ಫ್ಲಾಟ್‌ಫಾರ್ಮ್‌ ಇದು.  ಉಪ್ರಗ್ರಹ ಹಕ್ಕನ್ನು ಮಾ ವಾಹಿನಿ ಪಡೆದುಕೊಂಡಿದೆ.

ಪಲ್ಲವಿ ಬಗ್ಗೆ ಸಮಂತಾ ಕಾಮೆಂಟ್:

ಲವ್‌ ಸ್ಟೋರಿ ಸಿನಿಮಾ ಚಿತ್ರೀಕರಣದ ಹಂತದಲ್ಲಿದ್ದಾಗಲೇ  ಸಮಂತಾ ಸಿನಿಮಾ ನೋಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ. ಚಿತ್ರರಂಗದಿಂದ ಸದ್ಯಕ್ಕೆ ಬ್ರೇಕ್‌ ತೆಗೆದುಕೊಂಡಿರುವ ಸಮಂತಾ ಈ ಸಿನಿಮಾದ ಬಗ್ಗೆ ಮಾಡಿದ ಕಾಮೆಂಟ್ ವೈರಲ್ ಆಗಿದೆ.

'ಈ ಸಿನಿಮಾದಲ್ಲಿ ಪಲ್ಲವಿ ಪ್ರಾಬಲ್ಯ ಮೆರೆದಿದ್ದಾರೆ' ಎಂಬ ಹೇಳಿಕೆ ವೈರಲ್ ಆಗಿದೆ. ತುಂಬಾನೇ ಇಂಡಿಪೆಂಡೆಂಟ್‌ ಆಗಿ ಸಿನಿಮಾ ಆಯ್ಕೆ ಮಾಡುವ ಸಮಂತಾ ಸದಾ ಇನ್ನೊಬ್ಬ ನಟಿ ಪರ ನಿಲ್ಲುತ್ತಾರೆ, ಹೀಗೆ ಕಾಮೆಂಟ್‌ ಮಾಡಿರುವುದು ಆಕೆಯನ್ನು ಪ್ರೋತ್ಸಾಹಿಸುವುದಕ್ಕೆ ಹೊರತು ನೆಗೆಟಿವ್‌ ಆಗಿ ಅಲ್ಲ ಎಂದು ಸಮಂತಾ ಫ್ಯಾನ್‌ ಸಮರ್ಥಿಸಿಕೊಂಡಿದ್ದಾರೆ.

ನಾಗಚೈತನ್ಯ ಜೊತೆ ಕಾಣಿಸಿಕೊಂಡ ಸಾಯಿ ಪಲ್ಲವಿ; ಸಮಂತಾ ಮಾಡಿದ ಕಾಮೆಂಟ್ ವೈರಲ್!

ಸಾಯಿ ಹೇರ್ ಕೇರ್:

ನಟಿ ಸಾಯಿ ಪಲ್ಲವಿ ಗುಂಗರು ಕೂದಲು ಸಿಕ್ಕಾಪಟ್ಟೆ ಅಟ್ರ್ಯಾಕ್ಟೀವ್‌ ಆಗಿದೆ. ನೋಡಿದವರು ಮೊದಲು ಕೇಳುವ ಪ್ರಶ್ನೆಯೇ ಹೇಗೆ ಮೇನ್ಟೇನ್‌ ಮಾಡುತ್ತೀರಾ ಎಂದು. ಈ ಹಿಂದೆ ಸಂದರ್ಶನವೊಂದರಲ್ಲಿ ಈ ಪ್ರಶ್ನೆ ತುಂಬಾ ಕಾಮನ್‌ ಎಂದು ಹೇಳುತ್ತಾ ಉತ್ತರಿಸಿದ್ದರು. 

ಸದಾ ಆರೋಗ್ಯಕರ ಆಹಾರ ಹಾಗೂ ಹೆಚ್ಚಾಗಿ ನೀರು ಸೇವಿಸಬೇಕು ಅಷ್ಟೇ ಅಲ್ಲದೆ ಮೂರುದಿನಗಳಿಗೊಮ್ಮೆ ಕೂದಲನ್ನು ತೊಳೆಯಬೇಕು.  ಕೂದಲ ಶೈನ್ ಕಾಪಾಡಲು ಆಲೋವೆರಾ ಹಾಗೂ ಅನೇಕ ನೈಸರ್ಗಿಕ ಉತ್ಪನ್ನಗಳನ್ನು ಬಳಸುತ್ತಾರಂತೆ.