ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ ಲೈಫ್‌ನಲ್ಲಿ ಹೊಸ ಲವ್‌ಸ್ಟೋರಿ ಆರಂಭವಾಗಿದೆ. ಚಿತ್ರಕಥೆಯಿಂದ ನಿರ್ದೇಶಕರವರೆಗೂ ಮಾಹಿತಿ ಪಡೆದುಕೊಂಡು ಕಥೆ ಒಪ್ಪಿಕೊಳ್ಳುವ ಸಾಯಿ ಪಲ್ಲವಿ ಸಮಂತಾಳ ಸ್ನೇಹಕ್ಕೆ ಒಪ್ಪಿ ನಾಗಚೈತನ್ಯ ಜೊತೆ ಅಭಿನಯಿಸುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ ಆದರೆ ಅದೇ ಇಂತಹ ಮಾತುಗಳನ್ನು ಕೇಳುವುದಕ್ಕೆ ಕಾರಣವಾಯ್ತಾ? 

'ಮಲರ್' ಖ್ಯಾತಿಯ ಸಾಯಿ ಪಲ್ಲವಿ ತನ್ನ ನಟನಾ ಸಾಮರ್ಥ್ಯವನ್ನು ಸಾಬೀತು ಮಾಡಿರುವುದಕ್ಕೆ ಸಾಕ್ಷಿ ಆಕೆಯ ಹಿಟ್ ಸಿನಿಮಾಗಳು.  ಚಿತ್ರದ ಬಜೆಟ್‌ಗೆ ಪ್ರಾಮುಖ್ಯತೆ  ನೀಡದೆ  ಕಥೆ ಆರಿಸಿಕೊಳ್ಳುವ ಸಾಯಿ ಪಲ್ಲವಿ ನಟಿ ಸಮಂತಾಳ ಸ್ನೇಹಕ್ಕೆ ಹಾಗೂ ನಿರ್ದೇಶಕರ ಸೂಪರ್‌ ಕಥಗೆ ಮನಸೋತು   'ಲವ್‌ ಸ್ಟೋರಿ' ಚಿತ್ರದಲ್ಲಿ ಅಭಿಯಿಸಿದ್ದಾರೆ.

'ಲವ್‌ಸ್ಟೋರಿ' ಕೇಳಿ ಸಾಯಿ ಪಲ್ಲವಿ ಜಾತಿ ಹಿಂದೆ ಬಿದ್ದ ಸೋಷಿಯಲ್ ಮೀಡಿಯಾ

ನಾಗಚೈತನ್ಯ ವೃತ್ತಿಯಲ್ಲಿ ಬಿಗ್ ಬ್ರೇಕ್:
ಸಮಂತಾಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಾಗಚೈತನ್ಯಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದವು ಎನ್ನಲಾಗಿತ್ತು ಇದನ್ನು ರಾಂಗ್‌ ಎಂದು ಸಾಬೀತು ಮಾಡಲು ಸಮಂತಾನೇ ಜೋಡಿಯಾಗಿ 'ಮಜಿಲಿ' ಚಿತ್ರದಲ್ಲಿ ಅಭಿನಯಿಸಿದರು. ಚಿತ್ರ ಸೂಪರ್ ಹಿಟ್‌ ಆಗಿ ಬಾಕ್ಸ್‌ ಆಫೀಸ್‌ ಸಕತ್ ಕಲೆಕ್ಷನ್‌ ಮಾಡಿತ್ತು .ಅದೇ ಯಶಸ್ಸಿನಲ್ಲಿದ ನಾಗಚೈತನ್ಯ ಸಾಯಿ ಪಲ್ಲವಿ ಜೊತೆ ಲವ್‌ ಸ್ಟೋರಿ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಸೈ ಎಂದಿದ್ದಾರೆ.

ಸಾಯಿ  ಪಲ್ಲವಿ - ಚೈತನ್ಯ ರೋಮ್ಯಾನ್ಸ್:

ಚಿತ್ರದ ಹೆಸರೇ 'ಲವ್‌ ಸ್ಟೋರಿ' ಅಂದ್ಮೇಲೆ ಚಿತ್ರದಲ್ಲಿ ರೋಮ್ಯಾನ್ಸ್ ಇಲ್ಲದೆ ಇರುತ್ತಾ? ಪೋಸ್ಟರ್‌ ಹಾಗೂ ಟೀಸರ್‌ ಮೂಲಕ ದಿನೇ ದಿನೇ ಸುದ್ದಿಯಲ್ಲಿರುವ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಶೇ.80 ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದಿದೆ. ಚಿತ್ರ ಕೆಲವೊಂದು ಸನ್ನಿವೇಶಗಳ ರೀ- ರೆಕಾರ್ಡಿಂಗ್ ಆಗದಿದ್ದರೂ ಸಮಂತಾ ನಿರ್ದೇಶಕರಿಗೆ ಒತ್ತಾಯಿಸಿ ಸಿನಿಮಾ ನೋಡಿದ್ದಾರೆ.

ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವಾಗ ಸಮಂತಾ 'ಈ ಸಿನಿಮಾದಲ್ಲಿ ನಿಜಕ್ಕೂ ಸಾಯಿ ಪಲ್ಲವಿ ಪ್ರಾಬಲ್ಯ ಮೆರೆದಿದ್ದಾರೆ' ಎಂದು  ಹೇಳಿದ್ದಾರೆ. ಈ ವಾಕ್ಯ ಅನೇಕರಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ . ಅಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಹೀಗೆ ಮಾತನಾಡಿರುವುದು ಸರಿಯಲ್ಲ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

'RX100'ನಲ್ಲಿ ಸಾಯಿ ಪಲ್ಲವಿ ಸವಾರಿ; ಜೊತೆಗಿರುವ ನಟ ಯಾರು?

ಸಮಂತಾ ಹೇಳಿದಾದ್ದರೂ ಏನು:

ಸಮಂತಾ ತುಂಬಾ ಇಂಡಿಪೆಂಡೆಂಟ್‌ ಹುಡುಗಿ. ಸದಾ ಇನ್ನೊಬ್ಬ ನಟಿಗೆ ಜೊತೆಯಾಗಿ ನಿಲ್ಲುತ್ತಾರೆ ಅಂದ ಮೇಲೆ ಈ ಮಾತನಾಡಲು ಸಾಧ್ಯವಿಲ್ಲ. ಇತ್ತೀಚಿಗೆ ದಿನಗಳಲ್ಲಿ ಸಮಂತಾ ಒಪ್ಪಿಕೊಂಡ ಸಿನಿಮಾವೆಲ್ಲಾ ಸ್ತ್ರೀ ಪ್ರಧಾನವಾಗಿದ್ದು  ಬಹುಶಃ ಸಾಯಿ ಪಲ್ಲವಿ ನಟನೆಯನ್ನು ಹೊಗಳುವ ಉದ್ದೇಶದಿಂದಲೇ ಹಾಗೆ ಹೇಳಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಸಾಯಿ ಪಲ್ಲವಿ ನಟಿಸುವ ಸಿನಿಮಾಗಳು ಸೂಪರ್ ಹಿಟ್‌ ಆಗುವುದರಲ್ಲಿ ಅನುಮಾವಿಲ್ಲ.