ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಗೆ ಸಾವಿರಾರು ಮಂದಿಯ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿ ಸ್ಟ್ಯಾಂಡ್ ವಿತ್ ಸಾಯಿ ಪಲ್ಲವಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಸ್ಪಷ್ಟನೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ‌್‌ನಲ್ಲಿದೆ. ಅಲ್ಲದೇ ಈ ವಿಡಿಯೋ ಸಿಕ್ಕಾಪಟ್ಟೆ ವೀಕ್ಷಣೆ ಪಡೆದುಕೊಂಡಿದೆ. 12 ಸಾವಿರಕ್ಕೂ ಅಧಿಕ ಕಾಮೆಂಟ್ಸ್ ಮತ್ತು 16 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಪಡೆದುಕೊಂಡಿದೆ. 

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಗೆ ಸಾವಿರಾರು ಮಂದಿಯ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿ ಸ್ಟ್ಯಾಂಡ್ ವಿತ್ ಸಾಯಿ ಪಲ್ಲವಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಸ್ಪಷ್ಟನೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ‌್‌ನಲ್ಲಿದೆ. ಅಲ್ಲದೇ ಈ ವಿಡಿಯೋ ಸಿಕ್ಕಾಪಟ್ಟೆ ವೀಕ್ಷಣೆ ಪಡೆದುಕೊಂಡಿದೆ. 12 ಸಾವಿರಕ್ಕೂ ಅಧಿಕ ಕಾಮೆಂಟ್ಸ್ ಮತ್ತು 16 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಪಡೆದುಕೊಂಡಿದೆ. 

ಸಾಯಿ ಪಲ್ಲವಿ (Sai Pallavi)‘ವಿರಾಟ ಪರ್ವಂ’(Virata Parvam) ಸಿನಿಮಾ ಪ್ರಚಾರದ ವೇಳೆ ನೀಡಿದ ಹೇಳಿಕೆ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು. ಸಾಯಿ ಪಲ್ಲವಿ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಪ್ರಾರಂಭವಾಗಿತ್ತು. ಕಾಶ್ಮೀರ ಪಂಡಿತರ ಹತ್ಯೆ ಮತ್ತು ಹಸು ಕಳ್ಳ ಸಾಗಣೆ ಮಾಡುತ್ತಿದ್ದ ಎಂದು ಅನುಮಾನಿಸಿ ಆತನನ್ನು ಹತ್ಯೆ ಮಾಡಿದ್ದು ಎರಡು ಒಂದೆ. ಎರಡರಲ್ಲಿ ಏನು ವ್ಯತ್ಯಾಸ ಇದೆ ಎಂದು ಸಾಯಿ ಪಲ್ಲವಿ ಹೇಳಿದ್ದರು. ಈ ಹೇಳಿಕೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಸಾಯಿ ಪಲ್ಲವಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ವಿವಾದ ದೊಡ್ಡದಾದ ಬಳಿಕ ನಟಿ ಸಾಯಿ ಪಲ್ಲವಿ ಸ್ಪಷ್ಟನೆ ನೀಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋಗೆ ಅನೇಕರು ಪ್ರತಿಕ್ರಿಯೆ ನೀಡಿ ಸಾಯಿ ಪಲ್ಲವಿಗೆ ಬೆಂಬಲ ನೀಡಿದ್ದಾರೆ. ಅಹಿಂಸೆ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದಗಳು ಎಂದು ಹೇಳುತ್ತಿದ್ದಾರೆ. 

ಕಾಶ್ಮೀರಿ ಪಂಡಿತರು, ಗೋ ಸಾಗಣೆಕಾರರ ಹತ್ಯೆ ಎರಡೂ ಒಂದೇ: ಚರ್ಚೆಗೆ ಕಾರಣವಾಯ್ತು ಸಾಯಿ ಪಲ್ಲವಿ ಹೇಳಿಕೆ

ನಾವು ನಿಮ್ಮ ಪರ ಇದ್ದೀವಿ, ನಿಮ್ಮ ಮಾತಿಗೆ ಸಂಪೂರ್ಣ ಬೆಂಬಲವಿದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಅದ್ಭುತ ಅಭಿನಯದ ಮೂಲಕ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದಾರೆ ಸಾಯಿ ಪಲ್ಲವಿ. ಆದರೆ ಕೆಲವರು ಸಾಯಿ ಪಲ್ಲವಿ ಹೇಳಿಕೆಯನ್ನು ಈಗಲೂ ವಿರೋಧಿಸುತ್ತಿದ್ದಾರೆ. ಆದರೆ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಸಾಯಿ ಪಲ್ಲವಿ ಮತ್ತೊಮ್ಮೆ ಎಡ, ಬಲ, ಜಾತಿ, ಧರ್ಮ ಎಲ್ಲಕ್ಕಿಂತ ಮುಖ್ಯ ಮನುಷ್ಯತ್ವ ಎಂದಿದ್ದಾರೆ. ಯಾವುದೇ ರೂಪದಲ್ಲಿ ನಡೆಯುವ ಹಿಂಸೆ ಹಿಂಸೆಯೇ ಅದು ತಪ್ಪು ಎಂದು ಸ್ಪಷ್ಟವಾಗಿ ವಿವರಿಸಿದ್ದಾರೆ.

Scroll to load tweet…

ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ನಡೆದರೂ ಅದು ದೊಡ್ಡ ಪಾಪ; ಸಾಯಿ ಪಲ್ಲವಿ ಸ್ಪಷ್ಟನೆ

ಸಂದರ್ಶನದಲ್ಲಿ ಸಾಯಿ ಪಲ್ಲವಿ ಹೇಳಿದ್ದೇನು?

'ನಾನು ರಾಜಕೀಯ ವಿಚಾರದಲ್ಲಿ ತಟಸ್ಥೆ. ನಾನು ಬೆಳೆದ ವಾತಾವರಣ ಕೂಡ ಹಾಗೆ ಇತ್ತು. ನಾನು ಎಡ ಮತ್ತು ಬಲದ ಬಗ್ಗೆ ಕೇಳಿದ್ದೇನೆ. ಆದರೆ ನಾನು ಯಾವುದು ಸರಿ ಯಾವುದು ತಪ್ಪು ಎಂದು ಹೇಳಲ್ಲ. ಇತ್ತೀಚಿಗೆ ಬಂದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಸಾಯಿಸಲಾಯಿತು ಎಂದು ತೋರಿಸಲಾಗಿದೆ. ಹಾಗೆ ಇತ್ತೀಚಿಗಷ್ಟೆ ಹಸು ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಎಂದು ಆತನನ್ನು ಹತ್ಯೆಮಾಡಲಾಗಿದೆ. ಆ ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ್ದಾರೆ. ಕಾಶ್ಮೀರ ಘಟನೆಗೂ ಈ ಘಟನೆಗೂ ವ್ಯತ್ಯಾಸ ಏನಿದೆ? ತುಳಿತಕ್ಕೆ ಒಳಗಾದವರನ್ನು ರಕ್ಷಿಸಬೇಕು. ನಿಲುವು ಮುಖ್ಯವಲ್ಲ, ನೀವು ಮೊದಲು ಉತ್ತಮ ವ್ಯಕ್ತಿಯಾಗಬೇಕು' ಎಂದು ಸಾಯಿ ಸಂದರ್ಶನವೊಂದರಲ್ಲಿ ಹೇಳಿದ್ದರು.