ಟಾಲಿವುಡ್‌ ಸ್ಟಾರ್ ಪ್ರಭಾಸ್‌ ಹಾಗೂ ಶ್ರದ್ಧಾ ಕಪೂರ್ ಅಭಿನಯದ 'ಸಾಹೋ' ಸಿನಿಮಾದ ನಿರ್ದೇಶಕ ಸುಜೀತ್‌ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇಬ್ಬರು ಕುಟುಂಬದವರು ಮಾತನಾಡಿ ಜೂನ್‌ 10ರಂದು ಹೈದರಾಬಾದ್‌ನಲ್ಲಿ ಸರಳ ನಿಶ್ಚಿತಾರ್ಥ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ರೆಡಿಯಾಗಿದ್ದಾರಾ ನಯಾನತಾರಾ?

ಫ್ರೆಂಡ್‌ಶಿಪ್‌ ಟು ಮದುವೆ:

ಹೌದು! ನಿರ್ದೇಶಕ ಸುಜೀತ್‌ ಹಾಗೂ ಪ್ರವಲ್ಲಿಕಾ ಹಲವು ವರ್ಷಗಳಿಂದ ಪರಿಚಿತರು. ಮೂರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದು ಕುಟುಂಬದವರಿಗೆ ತಿಳಿಸಿದ್ದಾರೆ. ಗುರು ಹಿರಿಯರ  ಒಪ್ಪಿಗೆ ಪಡೆದುಕೊಂಡು ನಿಶ್ವಿತಾರ್ಥ ಮಾಡಿಕೊಳ್ಳಲಿದ್ದಾರೆ. ಮದುವೆ ದಿನಾಂಕ ಇನ್ನು ನಿಗಧಿಯಾಗಿಲ್ಲ.

ದೇವೇಗೌಡ-ಚೆನ್ನಮ್ಮ ದಾಂಪತ್ಯಕ್ಕೆ 66 ವಸಂತಗಳು, ತಾತ ಅಜ್ಜಿಗೆ ಶುಭಕೋರಿದ ಮೊಮ್ಮಗ

ಮುಂದಿನ ಪ್ರಾಜೆಕ್ಟ್:

'ಸಾಹೋ' ಚಿತ್ರದ ಹಿಟ್ ನಂತರ ಸುಜೀತ್ ಈಗ ಮೆಗಾಸ್ಟಾರ್ ಚಿರಂಜೀವಿಗೆ ನಿರ್ದೇಶನ ಮಾಡುತ್ತಿದ್ದಾರೆ.  ಇದು ಮಲಯಾಳಂನ 'ಲೂಸಿಫರ್‌' ಸಿನಿಮಾದ ರಿಮೇಕ್‌ ಆಗಲಿದೆ. 2014ರಲ್ಲಿ 'ರನ್‌ ರಾಜಾ ರನ್‌' ಚಿತ್ರದ ಮೂಲಕ ನಿರ್ದೇಶಕನಕ್ಕೆ ಕಾಲಿಟ್ಟವರು ಸುಜೀತ್.

ಅಮರ್ತ್ಯ- ಐಶ್ವರ್ಯಾ ಮದುವೆ? ಡೇಟ್ ಯಾವಾಗ? ಡಿಕೆಶಿ ಹೇಳಿದ್ದಿಷ್ಟು

ಲಾಕ್‌ಡೌನ್‌ ಮದುವೆ:

ನಿರ್ದೇಶಕ ಸುಜೀತ್ ಮದುವೆಯಾಗುತ್ತಿರುವ ವಿಚಾರ ತಿಳಿದು ಚಿತ್ರರಂಗ ಗೆಳೆಯರು ಸಂತೋಷ ವ್ಯಕ್ತ ಪಡಿಸಿದ್ದಾರೆ  ಹಾಗೂ ಸುಜೀತ್‌ ಸ್ನೇಹಿತರು ತಪ್ಪದೆ ಸರ್ಕಾರ ನಿಯಮ ಪಾಲಿಸುವಂತೆ ಸಲಹೆ ನೀಡಿದ್ದಾರೆ. 2020 ವರ್ಷದ ನಂಬರ್ ಕ್ರೇಜಿಯಾಗಿದ್ದು ಹಲವರು ಈ ವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಆದರೆ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಕೆಲವರು ಕ್ಯಾನ್ಸಲ್‌ ಮಾಡಿಕೊಂಡರು ಇನ್ನೂ ಕೆಲವರು ಸರಳವಾಗಿ ಆಚರಿಸಿಕೊಂಡರು. 

ಸ್ಯಾಂಡಲ್‌ವುಡ್ ಯುವರಾಜ್‌ ನಿಖಿಲ್‌ ಕುಮಾರಸ್ವಾಮಿ, ನಿರ್ದೇಶಕ ಅರ್ಜುನ್‌, ನಿರ್ದೇಶಕಿ ಸುಮನಾ ಕಿತ್ತೂರ್, ಕಾಮಿಡಿ ಕಿಲಾಡಿಗಳು ಸಂತೋಷ್, ಟಾಲಿವುಡ್‌ ನಟ ನಿಖಿಲ್ ಸಿದ್ಧಾರ್ಥ್‌ ಆಪ್ತರ ಸಮ್ಮುಖದಲ್ಲಿ  ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.