ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ರೆಡಿಯಾಗಿದ್ದಾರಾ ನಯಾನತಾರಾ?

First Published Jun 4, 2020, 5:03 PM IST

ದಕ್ಷಿಣ ಭಾರತೀಯಾ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್‌‌ ಲೈಫ್‌ ಸಹ ಅಷ್ಟೇ ಜನಪ್ರಿಯ. ನಟ-ನಿರ್ದೇಶಕ ಪ್ರಭುದೇವ್ ಜೊತೆಗಿನ ಅಫೇರ್‌ ಮದುವೆಯವರೆಗೆ ತಲುಪಿ, ಬ್ರೇಕ್‌ ಅಪ್ ಆಗಿದ್ದು ಈಗ ಹಳೇ ವಿಷಯ. ಡೈರೆಕ್ಷರ್‌ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪಿ ಹರಡುತ್ತಿದೆ.