Russia-Ukraine war: ಯುದ್ಧದ ಭೀಕರತೆ ನಡುವೆಯೂ ಉಕ್ರೇನ್ ಸೈನಿಕರ 'ನಾನು ನಾಟು' ಡಾನ್ಸ್, ವಿಡಿಯೋ ವೈರಲ್
ಯುದ್ಧದ ಭೀಕರತೆ ನಡುವೆಯೂ ಉಕ್ರೇನ್ ಸೈನಿಕರು 'ನಾನು ನಾಟು' ಹಾಡಿಗೆ ಹೆಜ್ಜೆ ಹಾಕಿದ್ದಾರೆ.ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಎಸ್ ಎಸ್ ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಆರ್ ಆರ್ ಆರ್ ಸಿನಿಮಾದ ನಾಟು ನಾಟು...ವಿಶ್ವದ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ನಾಟು ನಾಟು ಹಾಡು ಹಾಗೂ ಡಾನ್ಸ್‌ಗೆ ಜಗತ್ತಿನ ಅನೇಕರು ಫಿದಾ ಆಗಿದ್ದಾರೆ. ಅನೇಕರು ಈ ಹಾಡಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದ್ದಾರೆ. ಇದೀಗ ನಾಟು ನಾಟು ಕ್ರೇಜ್ ಯುದ್ಧಪೀಡಿತ ಉಕ್ರೇನ್‌ಗೂ ಕಾಲಿಟ್ಟಿದೆ. ಯುದ್ಧದ ಭೀಕರತೆಯ ನಡುವೆಯೂ ಉಕ್ರೇನ್ ಸೈನಿಕರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಉಕ್ರೇನ್ ಸೈನಿಕರ ಡಾನ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಕ್ರೇನ್ ಮಿಲಿಟರಿ ವ್ಯಕ್ತಿಗಳು ಈ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಸೈನಿಕರು ಉತ್ಸಾಹದಿಂದ ನೃತ್ಯ ಮಾಡಿದ್ದಾರೆ. ಅಂದಹಾಗೆ ಈ ಹಾಡನ್ನು ಉಕ್ರೇನ್‌ನಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಟಾಲಿವುಡ್ ಸ್ಟಾರ್‌ಗಳಾದ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಹೆಜ್ಜೆ ಹಾಕಿದ್ದಾರೆ. ಈ ಹಾಡು ಉಕ್ರೇನ್ ಅಧ್ಯಕ್ಷರ ಅಧಿಕೃತ ನಿವಾಸವಾದ ಮಾರಿನ್ಸ್ಕಿ ಅರಮನೆಯಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡನ್ನು ಆಗಸ್ಟ್ 2021 ರಲ್ಲಿ ಚಿತ್ರೀಕರಿಸಲಾಗಿದೆ. ಅಂದರೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸುವ ಕೆಲವು ತಿಂಗಳ ಮೊದಲು ಈ ಹಾಡನ್ನು ಚಿತ್ರೀಕರಿಸಲಾಗಿತ್ತು.
ಇದೀಗ ಸೈನಿಕರು ಮಾಡಿರುವ ಡಾನ್ಸ್ ವಿಡಿಯೋ ವೈರಲ್ ಆಗಿದ್ದು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಹಾಡು ಸೈನಿಕರ ಮುಖದಲ್ಲಿ ನಗು ಮೂಡಿಸಿದೆ ಎಂದು ಹೇಳುತ್ತಿದ್ದಾರೆ. ಯುದ್ಧದ ನಡುವೆಯೂ ಸೈನಿಕರು ಸಂತೋಷವಾಗಿರುವುದನ್ನು ನೋಡಿ ಸಂತೋಷವಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಉಕ್ರೇನ್ ಯಾಕೆ ಇನ್ನೂ ಯುದ್ದ ಗೆದ್ದಿಲ್ಲ ಎನ್ನುವುದು ಈಗ ಗೊತ್ತಾಗುತ್ತಿದೆ ಎಂದು ಹೇಳಿದರು.
RRRನ ನಾಟು ನಾಟು ಹಾಡಿಗೆ G20 ಪ್ರತಿನಿಧಿಗಳ ಸಖತ್ ಡಾನ್ಸ್: ವಿಡಿಯೋ ವೈರಲ್
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ನಿರ್ದೇಶಕ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದರು. 'ನಾವು ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಅಲ್ಲಿಗೆ ಹೋಗಿದ್ದೆವು, ನಾವು ಚಿತ್ರೀಕರಣ ಮಾಡುವಾಗ ಯುದ್ಧಕ್ಕೆ ಕಾರಣವಾದ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಹಿಂತಿರುಗಿ ಈಗ ವಿಷಯಗಳನ್ನು ನೋಡಿದಾಗ ನನಗೆ ಅರ್ಥವಾಯಿತು. ಸಮಸ್ಯೆಯ ಗಂಭೀರತೆ ಗೊತ್ತಾಗುತ್ತಿದೆ' ಎಂದು ಹೇಳಿದ್ದರು.
'Naatu Naatu' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ರೈನಾ-ಪಠಾಣ್ ಜೋಡಿ..! ವಿಡಿಯೋ ವೈರಲ್
ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಕೂಡ ಈ ಹಾಡಿನ ಚಿತ್ರೀಕರಣದ ಬಗ್ಗೆ ಮಾತನಾಡಿ, ಉಕ್ರೇನ್ ನಲ್ಲಿ ಚಿತ್ರೀಕರಣ ಮಾಡಲು ಬೆಂಬಲ ನೀಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರಿಗೆ ಧನ್ಯವಾದ ಸಲ್ಲಿಸಿದ್ದರು. 'ನಾವು ನಾಟು ನಾಟುವನ್ನು ಉಕ್ರೇನ್‌ನ ಅಧ್ಯಕ್ಷೀಯ ಭವನದಲ್ಲಿ ಚಿತ್ರೀಕರಿಸಿದ್ದೇವೆ. ಸ್ವತಃ ಕಲಾವಿದರಾಗಿದ್ದ ಅವರು ತುಂಬಾ ಕೃಪೆ ತೋರಿ ಅಲ್ಲಿಯೇ ಶೂಟ್ ಮಾಡೋಣ ಎಂದರು. ನಾವು 17 ದಿನಗಳ ಕಾಲ ಶೂಟಿಂಗ್ ಮಾಡುತ್ತಿದ್ದೆವು' ಎಂದು ಅವರು ಹೇಳಿದ್ದರು.