ಸಂಭಾವನೆ ಹೆಚ್ಚಿಸಿಕೊಂಡ ನಟ ರವಿತೇಜ. ಸಿನಿಮಾ ಬಿಗ್ ಬಜೆಟ್ ಆಗೋಕೆ ನಟನ ಡಿಮ್ಯಾಂಡ್ ಒಂದೇ ಸಾಕು ಎಂದ ನೆಟ್ಟಿಗರು
ತೆಲುಗು (Tollywood) ಚಿತ್ರರಂಗದ ಮಾಸ್ ನಾಯಕ, ಕ್ರೇಜಿ ಡ್ಯಾನ್ಸರ್ ಹಾಗೂ ಸೆನ್ಸೇಷನ್ ಸ್ಟಾರ್ ರವಿತೇಜ (Raviteja) ವೃತ್ತಿ ಜೀವನದಲ್ಲಿ ದೊಡ್ಡ ಕಮ್ ಬ್ಯಾಕ್ ಕೊಟ್ಟಿದ್ದು ಕ್ರ್ಯಾಕ್ (Crack) ಸಿನಿಮಾ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳನ್ನು, ಯಾಕ ಪ್ರಚಾರವಿಲ್ಲದೇ, ಪ್ರಮೋಶನಿಲ್ಲದೇ ಕುಳಿತಿದ್ದ ನಟನಿಗೆ ಕೈ ಹಿಡಿದದ್ದು ಕ್ರ್ಯಾಕ್ ಸಿನಿಮಾ. ಕ್ರ್ಯಾಕ್ ಹಿಟ್ ಆಗಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವುದಲ್ಲದೆ ರವಿತೇಜ್‌ಗೆ ಕೈ ತುಂಬಾ ಸಿನಿಮಾ ಆಫರ್‌ಗಳನ್ನು ತಂದು ಕೊಟ್ಟಿತ್ತು. ಹೀಗಾಗಿ ತಮ್ಮ ಮುಂದಿನ ಸಿನಿಮಾಗಳಿಗೆ ರವಿತೇಜ ದೊಡ್ಡ ಡಿಮ್ಯಾಂಡ್ ಇಡುತ್ತಿದ್ದಾರೆ ಎನ್ನಲಾಗಿದೆ.
'ಕ್ರ್ಯಾಕ್' ಸಿನಿಮಾ ಗಳಿಸಿದ್ದೆಷ್ಟು?; ರವಿತೇಜ ಸಂಭಾವನೆ ಗಗನ ಮುಟ್ಟುತ್ತಿದೆ?
ನಿರ್ಮಾಪಕರಿಗೆ ಕಾಲ್ ಶೀಟ್ ಕೊಡುವುದಕ್ಕೂ ಆಗುತ್ತಿಲ್ಲ. ಅಷ್ಟರ ಮಟ್ಟಕ್ಕೆ ರವಿತೇಜ ಬ್ಯುಸಿಯಾಗಿದ್ದಾರೆ. ಶೆಡ್ಯೂಲ್ ಮ್ಯಾನೇಜ್ ಮಾಡಿಕೊಂಡು ನಾಲ್ಕು ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ತುಂಬಾ ಸಿನಿಮಾ ಇರುವ ಕಾರಣ ಕಡಿಮೆ ಸಮಯದಲ್ಲಿ ಚಿತ್ರೀಕರಣ ಮುಗಿಸುತ್ತಿದ್ದಾರೆ, ಎಂದು ಅವರ ತಂಡದವೇ ಹೇಳಿದ್ದರು. ಈಗ ರಾಮರಾವ್ (RamRao) ಸಿನಿಮಾ ಶೂಟಿಂಗ್ ಶುರು ಮಾಡಿದ್ದಾರೆ. ಈ ಚಿತ್ರಕ್ಕೆ ಫುಲ್ ಪೇಮೆಂಟ್ ಕೇಳಿಲ್ಲ. ಬದಲಿಗೆ ದಿನದ ಪೇಮೆಂಟ್ ಮಾತನಾಡಿದ್ದಾರಂತ. ದಿನಕ್ಕೆ 50 ಲಕ್ಷ ರೂ.ಸಂಭಾವನೆ (Remuneration) ಪಡೆಯುತ್ತಿದ್ದಾರೆ, ಎಂದು ಖಾಸಗಿ ವೆಬ್ ಸುದ್ದಿ ಮಾಡಿತ್ತು. ಪೇಮೆಂಟ್ ವಿಚಾರ ವೈರಲ್ ಆಗುತ್ತಿದ್ದಂತೆ, 'ರವಿತೇಜಗೆ ಇದೂ ಕಡಿಮೆಯೇ, ಬಜಾರ್‌ನಲ್ಲಿದ್ದಾಗ ನಟ ಕೋಟಿಯಲ್ಲಿ ಸಂಭಾವನೆ ಮಾತನಾಡುತ್ತಿದ್ದರು,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ರಾಮರಾವ್ ಆನ್ ಡ್ಯೂಟಿ ಸಿನಿಮಾವನ್ನು ಶರತ್ (Director Sharath) ನಿರ್ದೇಶನ ಮಾಡುತ್ತಿದ್ದಾರೆ. ಶರತ್‌ಗೆ ಇದು ಮೊದಲ ಸಿನಿಮಾ ಆಗಿರುವ ಕಾರಣ ರವಿತೇಜ ತುಂಬಾನೇ ಕೋಆಪರೇಟ್ ಮಾಡುತ್ತಿದ್ದಾರಂತೆ. ಸುಧಾಕರ್ ಚೆರುಕುರಿ ಮತ್ತು ಆರ್‌ಟಿ ಟೀಮ್‌ವರ್ಕ್ಸ್ ಸಂಸ್ಥೆ ಸೇರಿಕೊಂಡು ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಸಾಮಾನ್ಯವಾಗಿ ಒಂದು ಸಿನಿಮಾಗೆ ಅಂತ ಸ್ಟಾರ್ ನಟರು ಸಂಭಾವನೆ ಮಾತನಾಡುತ್ತಾರೆ. ಆದರೆ ಇದೇ ಮೊದಲು ದಿನ ಪೇಮೆಂಟ್ ಆಗಿರುವ ಕಾರಣ ನಿರ್ಮಾಣ ಸಂಸ್ಥೆಗೂ ಇವೆಲ್ಲಾ ಹೊಸತು, ಬಟ್ ಆದಷ್ಟು ಬೇಗ ಸಿನಿಮಾ ಮುಗಿಸಿಕೊಡುವುದಾಗಿಯೂ ರವಿ ಹೇಳಿದ್ದಾರಂತೆ.
ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟ ಆ ಒಂದು ಸಿನಿಮಾದಿಂದ ಮುಂದಿಟ್ಟ ದಿಮ್ಯಾಂಡ್ ಇಷ್ಟು?
ರಾಮರಾವ್ ಸಿನಿಮಾವನ್ನು 20 ರಿಂದ 25 ದಿನಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸುವುದಾಗಿ ನಟ ರವಿತೇಜ್ ಮಾತು ಕೊಟ್ಟಿದ್ದಾರಂತೆ. ದಿನಕ್ಕೆ 50 ಲಕ್ಷ ಅಂದ್ರೆ ಸುಮಾರು 10 ರಿಂದ 12 ಕೋಟಿ ಸಂಭಾವನೆ ಪಡೆಯುತ್ತಾರೆ. ದಿನದ ಪೇಮೆಂಟ್ ಮಾಡಿದ್ದರೆ, ಸ್ಟಾರ್ ನಟ ಪ್ರಭಾಸ್ (Prabhas) ಸಂಭಾವನೆ ಕೂಡ ಮೀರಿಸಬಹುದು ಎಂದು ಹಲವರು ಟೀಕೆ ಮಾಡುತ್ತಿದ್ದಾರೆ. ಕ್ರ್ಯಾಕ್ ಸಿನಿಮಾ ಹಿಟ್ ಕಮ್ ಬ್ಯಾಕ್ ನೀಡುತ್ತದೆ ಎನ್ನುವ ನಂಬಿಕೆ ಮೇಲೆ ಕಡಿಮೆ ಸಂಭಾವನೆ ಪಡೆದುಕೊಂಡಿದ್ದರಂತೆ. ಸಿನಿಮಾ ಬಾಕ್ಸ್ ಆಫೀಸ್ ಮೊದಲ ವಾರ ಕಲೆಕ್ಷ್ ಹೆಚ್ಚಾಗುತ್ತಿದ್ದಂತೆ, ಸಂಭಾವನೆ 15 ರಿಂದ18 ಕೋಟಿ ಎಂದು ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿತ್ತು.
