ಬಹು ದಿನಗಳ ನಂತರ ಮತ್ತೆ ಆನ್‌ ಸ್ಕ್ರೀನ್‌ನಲ್ಲಿ ಕಮಾಲ್ ಮಾಡಲು ರೆಡಿಯಾಗಿರುವ ನಟ ರವಿತೇಜ, ಸಿನಿಮಾ ರಿಲೀಸ್‌ಗೂ ಮುನ್ನವೇ ಮುಂದಿನ ಚಿತ್ರ ಹೇಗಿರಬೇಕು, ಅದಕ್ಕೆ ಎಷ್ಟು ಸಂಭಾವನೆ ಪಡೆಯಬೇಕೆಂದು ಪ್ಲಾನ್ ಮಾಡುತ್ತಿದ್ದಾರಂತೆ!

ನಟ ಅಕ್ಷಯ್‌ ಕುಮಾರ್‌ ಸಂಭಾವನೆ 135 ಕೋಟಿ ರೂ! 

ಜನವರಿ 9ರಂದು ರವಿತೇಜ ಹಾಗೂ ಶ್ರುತಿ ಹಾಸನ್ ಅಭಿನಯದ 'ಕ್ರ್ಯಾಕ್' ಸಿನಿಮಾ ಬಿಡುಗಡೆಯಾಗುತ್ತಿದೆ. ಅದ್ಭುತ ಚಿತ್ರಕಥೆ ಹೊಂದಿರುವ ಈ ಸಿನಿಮಾ ಖಂಡಿತ ಸೂಪರ್ ಹಿಟ್ ಆಗುತ್ತದೆ. ವೀಕ್ಷಕರಿಗೆ ಈ ಕಾಂಬಿನೇಷನ್‌ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದಾಗಿ ಪ್ರತಿ ಸುದ್ದಿ ಘೋಷ್ಠಿಯಲ್ಲಿ ಚಿತ್ರತಂಡ ಹೇಳುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಹಿಟ್ ಆದರೆ ರವಿತೇಜ ತಮ್ಮ ಸಂಭಾವನೆಯನ್ನು ಏರಿಸಿಕೊಳ್ಳಬೇಕು ಎಂದು ಕೊಂಡಿದ್ದಾರೆ.

ಟಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ರವಿತೇಜ ಅತಿ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟರಲ್ಲಿ ಒಬ್ಬರಾಗಿದ್ದರು. ಆದರೀಗ ಏನಾಯ್ತೋ ಏನೋ, ಮುಂದಿನ ಪ್ರಾಜೆಕ್ಟ್‌ಗಳಿಗೆ ಡಿಮ್ಯಾಂಡ್‌ ಇಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ನಿರ್ದೇಶಕ ಮಾರುತಿ ಹಾಗೂ ನಕ್ಕಿನಿ ತ್ರಿನಾಥ್ ಕಥೆ ಹೇಳಿದ್ದಾರೆ. ಸಿನಿಮಾ ಕಥೆಗೆ ಓಕೆ ಎಂದ ರವಿತೇಜ, ಸಂಭಾವನೆ ವಿಚಾರವಾಗಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಸಂಭಾವನೆ ಏರಿಸಿಕೊಳ್ಳು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ರವಿತೇಜ ಈಗ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಚಿತ್ರರಂಗದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಫ್ಯಾಂಟಮ್ ಸಿನಿಮಾ ಸೆಟ್‌ನಲ್ಲಿ ಹೊಸ ಗೆಸ್ಟ್: ದಿನವೊಂದರ ಸಂಭಾವನೆ ಲಕ್ಷಕ್ಕೂ ಹೆಚ್ಚು 

ಮಾಸ್‌ ಹೀರೋ ಅವಶ್ಯಕತೆ  ಇದ್ದರೆ ಮಾತ್ರ ಹೀಗೆ ಮಾಡುವುದು. ಇಲ್ಲದಿದ್ದರೆ ಅವರಿಗೂ ಪರಿಸ್ಥಿತಿ ಅರ್ಥವಾಗುತ್ತದೆ. ಸಿನಿಮಾ ಹಿಟ್ ಆದ ಮೇಲೆ ಯಾವ ನಟನಾದರೂ ಡಿಮ್ಯಾಂಡ್ ಮಾಡುತ್ತಾರೆ, ನಮ್ಮ ರವಿತೇಜ ಕೂಡ ಹಾಗೆ ಮಾಡಿರುವುದು ಎಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪರ ಧ್ವನಿ ಎತ್ತಿದ್ದಾರೆ.