ರಾಜ್ಯಾದ್ಯಂತ ತೆರೆ ಕಂಡ ಕ್ರ್ಯಾಕ್ ಚಿತ್ರಕ್ಕೆ ಸೂಪರ್ ರೆಸ್ಪಾನ್ಸ್‌, ನಾಲ್ಕೇ ದಿನಗಳಲ್ಲಿ ಹಾಕಿದ ಬಂಡವಾಳ ಜೇಬಿಗೆ....

ಮಾಸ್‌ ಹೀರೋ ರವಿತೇಜ 'ಕ್ರ್ಯಾಕ್‌' ಚಿತ್ರದ ಮೂಲಕ ಬಿಗ್ ಕಮ್‌ ಬ್ಯಾಕ್ ಮಾಡಿದ್ದಾರೆ. ಓಟಿಟಿಯಲ್ಲಿ ರಿಲೀಸ್‌ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿತ್ತು. ಆದರೆ ರವಿತೇಜ ಒತ್ತಾಯದಿಂದ ರಿಸ್ಕ್‌ ತೆಗೆದುಕೊಂಡು, ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗಿತ್ತು. ಒಂದು ವೇಳೆ ಕ್ರ್ಯಾಕ್ ಹಿಟ್ ಆದರೆ ಸಂಭಾವನೆ ಹೆಚ್ಚಿಸಿಕೊಳ್ಳುವುದಾಗಿ ಹೇಳಿದ ರವಿತೇಜ ಅವರ ಗಳಿಕೆ ನೋಡಿದರೆ ಖಂಡಿವಾಗಿಯೂ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. 

ನಿರ್ಮಾಪಕರು ಹಾಗೂ ಫೈನ್ಯಾನ್ಷಿಯರ್‌ ನಡುವೆ ಹಣಕಾಸಿನ ವಿಷಯಕ್ಕೆ ಮನಸ್ತಾಪ ಉಂಟಾಗಿ ಚಿತ್ರದ ಬಿಡುಗಡೆ ದಿನವನ್ನು ಮುಂದೂಡಲಾಗಿತ್ತು. ಆದರೆ ರವಿತೇಜ ಕಾಂಪ್ರಮೈಸ್‌ ಮಾಡಿದ ನಂತರ ಬಿಡುಗಡೆಗೆ ದಾರಿ ಸಿಕ್ಕಿತು. ಸಿನಿಮಾ ತೆರೆ ಕಂಡ ಮೊದಲ ದಿನವೇ 6.54 ಕೋಟಿ ರೂ. ಗಳಿಸಿದೆ. ಎರಡನೇ ದಿನ 3.15 ರೂ. ಕೋಟಿ ಗಳಿಸಿತು, ಮೂರನೇ ದಿನ 2.86 ಕೋಟಿ ರೂ. ಗಳಿಸಿತು ಹಾಗೂ ನಾಲ್ಕನೇ ದಿನ 3 ಕೋಟಿ ಗಳಿಸಿತು. ಇದು ಕೇವಲ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಲೆಕ್ಕ ಎನ್ನುವುದು ವಿಶೇಷ.

ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟ ಆ ಒಂದು ಸಿನಿಮಾದಿಂದ ಮುಂದಿಟ್ಟ ದಿಮ್ಯಾಂಡ್ ಇಷ್ಟು? 

ಕೊರೋನಾ ಸಂಕಷ್ಟದ ನಡುವೆಯೂ ಕೋಟಿಯಲ್ಲಿ ಗಳಿಕೆ ಮಾಡುತ್ತಿದೆ ಅಂದರೆ, ಇದು ದೊಡ್ಡ ಸಾಧನೆಯೇ ಹೌದು. ಈಗಾಗಲೇ ಹಾಕಿರುವ ಶೇ.88 ಬಂಡವಾಳವನ್ನು ಚಿತ್ರತಂಡ ಗಳಿಸಿಕೊಂಡಿದೆ. ಕ್ರ್ಯಾಕ್ ಸಿನಿಮಾ ಸೂಪರ್ ಹಿಟ್ ಆದರೆ ಸಂಭಾವನೆಯನ್ನು ಸುಮಾರು 1 ಕೋಟಿಗೆ ಏರಿಸಿಕೊಳ್ಳುವುದಾಗಿ ರವಿತೇಜ ಈ ಹಿಂದೆ ನಡೆದ ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದರು.