ಕನ್ನಡ ಚಿತ್ರರಂಗದ ಓನ್ ಆ್ಯಂಡ್ ಓನ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಅಂದ್ರೆ ದರ್ಶನ್, ಇನ್ನು ಅವರೊಂದಿಗೆ ನಟಿಸುವುದೇ ಒಂದು ಅವಕಾಶ ಎಂದು ಭಾವಿಸುವ ನಟಿಯರಲ್ಲಿ ಈ ಬಾಲಿವುಡ್ ಬ್ಯೂಟಿಯೂ ಒಬ್ರು. 

ಹಾರ್ದಿಕ್‌ಗೆ ಕೈ ಕೊಟ್ಟು ರಿಷಬ್ ಜೊತೆ ಡೇಟಿಂಗ್ ನಡೆಸ್ತಾ ಇದಾರಾ ಊರ್ವಶಿ?

ಹೌದು ಇವ್ರೆ 'ಮಿಸ್ಟರ್ ಐರಾವತ' ಚಿತ್ರದಲ್ಲಿ ದರ್ಶನ್‌ ಜೊತೆ ಡುಯೇಟ್ ಆಡಿದ ಊರ್ವಶಿ ರೌಟೇಲಾ. ಹೊಸ ವರ್ಷ ಸಂಭ್ರಮದಲ್ಲಿ ಪಾಲ್ಗೊಳ್ಳುವ ಬಾಲಿವುಡ್‌ ತಾರೆಯರು ಅಭಿಮಾನಿಗಳನ್ನು ಮನೋರಂಜಿಸಲು ಕಾರ್ಯಕ್ರಮಗಳಲ್ಲಿ ಭಾಗಿಯಾಗಿತ್ತಾರೆ. ಜನವರಿ 1ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 'ಬಾಲಿವುಡ್ ಕಾರ್ನಿವಲ್ 2020'ಯಲ್ಲಿ ಒಂದು ಗಂಟೆ ಡ್ಯಾನ್ಸ್‌ ಮಾಡಲು ಊರ್ವಶಿ ಸುಮಾರು 3 ಕೋಟಿ ರು. ಸಂಭಾವನೆ ಪಡೆದುಕೊಂಡಿದ್ದಾರಂತೆ.  ಹಾಗೆಂದು ಖಾಸಗಿ ವೆಬ್‌ಸೈಟ್‌ಗಳಲ್ಲಿ ವಿಚಾರ ಹರಿದಾಡುತ್ತಿದೆ. 

ಡ್ಯಾನ್ಸ್ ಮಾಡ್ತಾ ಮಾಡ್ತಾ ಟಾಪ್ ಲೆಸ್ ಆದ ದರ್ಶನ್ ಐರಾವತ ನಟಿ

'ಸಿಂಗ್ ಸಾಬ್ ದಿ ಗ್ರೇಟ್' ಚಿತ್ರದ ಮೂಲಕ 2013ರಲ್ಲಿ ಸಿನಿ ಜರ್ನಿ ಶುರು ಮಾಡಿದ್ದ ಊರ್ವಶಿ ರೌಟೇಲಾ, 2015ರಲ್ಲಿ ದರ್ಶನ್ ಜೊತೆ 'ಮಿಸ್ಟರ್ ಐರಾವತ' ಚಿತ್ರದಲ್ಲಿ ನಟಿಸಿದ್ದರು.