ಟೀಂ ಕ್ರಿಕೆಟಿಗ ರಿಷಬ್ ಪಂಥ್ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಿ- ಟೌನ್‌ನಲ್ಲಿ ಕೇಳಿ ಬರುತ್ತಿದೆ.  ಇದು ಇನ್ನಷ್ಟು ನಿಜ ಎನ್ನುವುದಕ್ಕೆ ಇವರಿಬ್ಬರೂ ಒಟ್ಟಿಗೆ ಡಿನ್ನರ್‌ಗೆ ಹೋಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಇಂಡಿಯಾ- ವೆಸ್ಟ್ ಇಂಡೀಸ್ ಮ್ಯಾಚ್‌ಗೂ ಮುನ್ನ ಗರ್ಲ್‌ಫ್ರೆಂಡ್ ಊರ್ವಶಿ ಜೊತೆ ಡಿನ್ನರ್ ಮಾಡಿರುವ ಫೋಟೋ ವೈರಲ್ ಆಗಿದೆ.  ಊರ್ವಶಿ ಜೋಶ್‌ನಿಂದಾಗಿ ರಿಷಬ್ ಮ್ಯಾಚ್‌ನಲ್ಲಿ ಫುಲ್ ಫಾರ್ಮ್‌ನಲ್ಲಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ. 

ಸಾರ್ವಕಾಲಿಕ ನೆಚ್ಚಿನ ಕ್ರಿಕೆಟಿಗನ ಹೆಸರು ಬಹಿರಂಗ ಪಡಿಸಿದ ದೀಪಿಕಾ ಪಡುಕೋಣೆ!

ಇದಕ್ಕೂ ಮೊದಲು ಊರ್ವಶಿ  ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಕೇಳಿ ಬಂದಿತ್ತು.  ಕೆಲ ದಿನಗಳ ಹಿಂದೆ ಮುದ್ದಾದ ನಾಯಿಮರಿಯೊಂದನ್ನು ಗಿಫ್ಟ್ ಕೊಟ್ಟಿದ್ದಾರೆ.  ಆ ನಂತರ ಅದೇನಾಯ್ತೋ ಏನೋ ಇಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನುವಂತಾಯಿತು. 

ಹಾರ್ದಿಕ್ ಪಾಂಡ್ಯಾ ಹೆಸರು ಆಗಾಗ ಬೇರೆ ಬೇರೆ ನಟಿಯರ ಜೊತೆ ಕೇಳಿ ಬರುತ್ತಿತ್ತು.  ಕಪಿಲ್ ಶರ್ಮಾ ಶೋನಲ್ಲಿ ಹಾರ್ದಿಕ್ ಪಾಂಡ್ಯಾ 'ಸೆಕ್ಸ್' ಬಗ್ಗೆ ಹೇಳಿರುವ ಹೇಳಿಕೆ ವಿವಾದವನ್ನು ಹುಟ್ಟು ಹಾಕಿದ ನಂತರ ಒಬ್ಬಬ್ಬೊರೇ ಕಳಚಿಕೊಳ್ಳುತ್ತಾ ಬಂದಿದ್ದಾರೆ. ಅದೇ ರೀತಿ ಊರ್ವಶಿ ಕೂಡಾ ಗುಡ್ ಬೈ ಹೇಳಿರಬಹುದಾ ಎಂದು ಊಹಿಸಲಾಗಿದೆ. 

ಪತ್ನಿಗೆ 'ದುಬಾರಿ' ಇಯರ್ ರಿಂಗ್ ಗಿಫ್ಟ್‌ ಕೊಟ್ಟ ಅಕ್ಷಯ್ ಕುಮಾರ್!

ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಪ್ರತಿ ಪಂದ್ಯದಲ್ಲಿ ಟೀಕೆ ಎದುರಿಸುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಪಂತ್ ಬ್ಯಾಟಿಂಗ್ ಕಳಪೆಯಾಗುತ್ತಿದೆ. ಇದರ ಜೊತೆಗೆ  ಟೀಂ ಇಂಡಿಯಾ ನಾಯಕ, ಕೋಚ್, ಆಯ್ಕೆ ಸಮಿತಿ, ಮ್ಯಾನೇಜ್ಮೆಂಟ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಪಂತ್‌ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಒಂದಂಕಿಯಲ್ಲಿದ್ದ ಪಂತ್ ಸ್ಕೋರ್ ಇದೀಗ ಸೊನ್ನೆಗೆ ಇಳಿದಿದೆ.