ಆರ್ ಆರ್ ಆರ್ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ವ್ಯಾಪಕವಾಗಿ ನಡೆಯುತ್ತಿರುವ ಪ್ರಚಾರಕಾರ್ಯ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ.

ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ ರಾಜಮೌಳಿ(Rajamouli) ಸಾರಥ್ಯದಲ್ಲಿ ಮೂಡಿಬಂದಿರುವ ಆರ್ ಆರ್ ಆರ್(RRR) ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೇ ಸಿನಿಮಾತಂಡ ಅಬ್ಬರದ ಪ್ರಚಾರ ನಡೆಸುತ್ತಿದೆ. ದೊಡ್ಡ ಮಟ್ಟದಲ್ಲಿ ವಿಶ್ವದಾದ್ಯಂತ ತೆರೆಗೆ ಬರುತ್ತಿರುವ ಆರ್ ಆರ್ ಆರ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಟೀಸರ್ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿರುವ ಆರ್ ಆರ್ ಆರ್ ಸಿನಿಮಾ ಮಾರ್ಚ್ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಇನ್ನುಸಿನಿಮಾ ಬಿಡುಗಡೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಸಿನಿಮಾತಂಡ ದೇಶದಾದ್ಯಂತ ಪ್ರಚಾರ ಕಾರ್ಯ ಹಮ್ಮಿಕೊಂಡಿದೆ. ದೇಶದ ಪ್ರಮುಖ ನಗರಗಳಿಗೆ ಭೇಟಿ ನೀಡುತ್ತಿರುವ ಸಿನಿಮಾತಂಡ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಹೈದರಾಬಾದ್ ನಿಂದ ಹೊರಟ ಸಿನಿಮಾತಂಡ ಬೆಂಗಳೂರು, ಬರೋಡ, ಮುಂಬೈ, ದೆಹಲಿ, ಅಮೃತಸರ, ಜೈಪುರ್, ಕಲ್ಕತ್ತಾ, ವಾರಾಣಸಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.

ಇತ್ತೀಚಿಗಷ್ಟೆ ವಾರಾಣಸಿಯಲ್ಲಿ ಕಾಣಿಸಿಕೊಂಡ ಸಿನಿಮಾತಂಡದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟರಾದ ರಾಮ್ ಚರಣ್(Ram Charan), ಜೂ ಎನ್ ಟಿ ಆರ್(Jr NTR) ಮತ್ತು ರಾಜಮೌಳಿ ವಾರಾಣಸಿಯಲ್ಲಿ ಗಂಗಾ ಆರತಿ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡ ಸಿನಿಮಾತಂಡದ ಫೋಟೋಗಳು ಮೆಚ್ಚುಗೆ ಗಳಿಸಿದೆ. ಜೊತೆಗೆ ವ್ಯಾಪಕ ಪ್ರಚಾರ ನಡೆಸುತ್ತಿರುವ ಕಾರಣ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.

RRR: ಬಾಹುಬಲಿ​-2ಗಿಂತ ಡಬಲ್‌ ಬಜೆಟ್‌, ರೆಕಾರ್ಡ್ ಬುಕ್ ಸೇರಿದ 'ಆರ್‌ಆರ್‌ಆರ್‌’..!

ಸಿನಿಮಾತಂಡ ಕೋಟಿ ಕೋಟಿ ಸುರಿದು ಪ್ರಚಾರ ಮಾಡುತ್ತಿರುವುದು ನೆಟ್ಟಿಗರಿಂದ ಟ್ರೋಲ್ ಗೆ ಗುರಿಯಾಗಿದೆ. ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾ ಕಡಿಮೆ ಪ್ರಚಾರದ ಹೊರತಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ ಎಂದು ಹೇಳುತ್ತಿದ್ದಾರೆ. ಚಿತ್ರದ ಕಥೆ ಮತ್ತು ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯಿಂದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ, ಸೂಪರ್ ಹಿಟ್ ಆಗಿದೆ. ಸಿನಿಮಾ ಚೆನ್ನಾಗಿದ್ರೆ ಪ್ರಚಾರದ ಅವಶ್ಯಕತೆ ಇರಲ್ಲ ಎಂದು ಹೇಳುತ್ತಿದ್ದಾರೆ.

ಇನ್ನು ಕೆಲವರು ಕಾಮೆಂಟ್ ಮಾಡಿ ಸಿನಿಮಾ ಹೆಸರಿನಲ್ಲಿ ಕೆಟ್ಟದನ್ನು ಮಾಡಿದರೆ ದೇವರು ಸಹ ಸಹಾಯ ಮಾಡಲ್ಲ ಎಂದಿದ್ದಾರೆ. ಇನ್ನು ಕೆಲವರು ಕಾಮೆಂಟ್ ಮಾಡಿ ಕಶ್ಮೀರ್ ಫೈಲ್ಸ್ ಸಿನಿಮಾ ಭಯವನ್ನು ಹುಟ್ಟುಹಾಕಿದೆ, ಹಾಗಾಗಿ ಮತ್ತಷ್ಟು ಪ್ರಚಾರ ಮಾಡುವಂತೆ ಆಗಿದೆ ಎಂದಿದ್ದಾರೆ.

ಮುಂದಿನ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ ರಾಜಮೌಳಿ

ಆದರೆ ಸಿನಿಮಾತಂಡ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪ್ರಚಾರದಲ್ಲಿ ನಿರತವಾಗಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗಿದ್ದು, ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ಇನ್ನು ಬಾಲಿವುಡ್ ನಟಿ ಅಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಅಲಿಯಾ ದಕ್ಷಿಣದ ಸಿನಿಮಾದಲ್ಲಿ ನಟಿಸಿದ್ದು, ಮೊದಲ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ. ಇನ್ನು ನಟ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್ ಆರ್ ಆರ್ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿ ಸೇರಿದಂತೆ ಐದಕ್ಕೂ ಅಧಿಕ ಬಾಷೆಯಲ್ಲಿ ತೆರೆಗೆ ಬರುತ್ತಿದೆ. ಬಾಹುಬಲಿ ಸಿನಿಮಾಗಿಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆಯೊಂದಿಗೆ ಬಿಡುಗಡೆಯಾಗುತ್ತಿರುವ ಆರ್ ಆರ್ ಆರ್ ಹೇಗಿರಲಿದೆ ಎನ್ನುವುದು ಮಾರ್ಚ್ 25ಕ್ಕೆ ಗೊತ್ತಾಗಲಿದೆ.