ರಿಹಾನ್ನಾ, ಲೇಡಿ ಗಾಗಾ ಸೇರಿ 4 ಹಾಡುಗಳ ಜೊತೆ ನಾಟು..ನಾಟು..ಸ್ಪರ್ಧೆ; ಆಸ್ಕರ್ ರೇಸ್‌ನಲ್ಲಿವೆ 2 ಸಾಕ್ಷ್ಯಚಿತ್ರ
ರಿಹಾನ್ನಾ, ಲೇಡಿ ಗಾಗಾ ಸೇರಿ 4 ಹಾಡುಗಳ ಜೊತೆ ನಾಟು..ನಾಟು..ಸ್ಪರ್ಧೆ; ಆಸ್ಕರ್ ರೇಸ್‌ನಲ್ಲಿವೆ 2 ಸಾಕ್ಷ್ಯಚಿತ್ರ
95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಂತಿಮ ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಭಾರತದ RRR ಚಿತ್ರದ ನಾಟು-ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಈ ಹಾಡನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಇತ್ತೀಚೆಗೆ, ನಾಟು-ನಾಟು ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಜೊತೆಗೆ RRR ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಮತ್ತು ನಾಟು-ನಾಟು ಅತ್ಯುತ್ತಮ ಗೀತೆಯನ್ನು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗಳಲ್ಲಿ ಗೆದ್ದುಕೊಂಡಿದೆ. ಆಸ್ಕರ್ ಅಂತಿಮ ನಾಮನಿರ್ದೇಶನಗಳನ್ನು 20 ವಿಭಾಗಗಳಲ್ಲಿ ಪ್ರಕಟಿಸಲಾಗಿದೆ, ಅವತಾರ್: ದಿ ವೇ ಆಫ್ ವಾಟರ್ ಮತ್ತು ದಿ ಟಾಪ್‌ಗನ್ ಮೇವರಿಕ್ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗಳನ್ನು ಪಡೆಯುತ್ತಿವೆ.
ನಾಲ್ಕು ಹಾಡುಗಳ ಜೊತೆ ನಾಟು..ನಾಟು..ಸ್ಪರ್ಧೆ
ಆರ್ ಆರ್ ಆರ್ ಸಿನಿಮಾದ ನಾಟು ನಾಟು...ಹಾಡು ಇತರ 4 ನಾಮನಿರ್ದೇಶಿತ ಹಾಡುಗಳ ವಿರುದ್ಧ ಸ್ಪರ್ಧಿಸುತ್ತಿದೆ. ಟೆಲ್ ಇಟ್ ಲೈಕ್ ಎ ವುಮನ್ ಸಿನಿಮಾ ಹಾಡು, ಲೇಡಿ ಗಾಗಾ ಅವರ ಹೋಲ್ಡ್ ಮೈ ಹ್ಯಾಂಡ್, ರಿಹಾನಾ ಅವರ ಲಿಫ್ಟ್ ಮಿ ಅಪ್ ಮತ್ತು ದಿಸ್ ಈಸ್ ಎ ಲೈಫ್ ಹಾಡುಗಳ ಜೊತೆ ಪೈಪೋಟಿ ಮಾಡಬೇಕಿದೆ.
ಆಸ್ಕರ್ ರೇಸ್‌ನಲ್ಲಿ ಎರಡು ಸಾಕ್ಷ್ಯಚಿತ್ರ
ಆರ್ ಆರ್ ಆರ್ ಜೊತೆಗೆ ಎರಡು ಭಾರತೀಯ ನಿರ್ಮಿತ ಸಾಕ್ಷ್ಯಚಿತ್ರಗಳು ಸಹ ಆಸ್ಕರ್ ನಲ್ಲಿರುವುದು ವಿಶೇಷ. ಆಲ್ ದಟ್ ಬ್ರೀಥ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ ಫಿಲ್ಮ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ. ಭಾರತದ ಅಧಿಕೃತ ಆಸ್ಕರ್ ಪ್ರವೇಶ ಆಗಿದ್ದ ಚೆಲೋ ಶೋ (ದಿ ಲಾಸ್ಟ್ ಫಿಲ್ಮ್ ಶೋ) ಅತ್ಯುತ್ತಮ ವಿದೇಶಿ ಚಲನಚಿತ್ರ ಕಿರುಪಟ್ಟಿಗೆ ಸೇರಿತ್ತು. ಆದರೆ, ಅಂತಿಮ ನಾಮನಿರ್ದೇಶನಕ್ಕೇರಲು ವಿಫಲವಾಯಿತು. 'ಅರ್ಜೆಂಟೀನಾ, 1985' ಚಿತ್ರದ ಎದುರು ಸೋಲು ಕಂಡಿತ್ತು. ಇದೇ ಚಿತ್ರ ಈ ತಿಂಗಳ ಆರಂಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ (ಇಂಗ್ಲಿಷ್ ಅಲ್ಲದ ಭಾಷೆ) ವಿಭಾಗದಲ್ಲಿ ಭಾರತದ ಆರ್‌ಆರ್‌ಆರ್ ಚಿತ್ರವನ್ನು ಸೋಲಿಸಿತ್ತು.
Oscars 2023: ಕಾಂತಾರಗೆ ನಿರಾಸೆ, ಆಸ್ಕರ್ ಪ್ರಶಸ್ತಿಗೆ RRR ಚಿತ್ರದ ನಾಟು-ನಾಟು ಗೀತೆ ಫೈಟ್!
ಆಸ್ಕರ್‌ಗೆ ಭಾರತದಿಂದ ನಾಮನಿರ್ದೇಶಗೊಂಡಿದ್ದ ಸಿನಿಮಾಗಳು
ಆಸ್ಕರ್‌ಗೆ ಭಾರತಿಂದ ನಾಮನಿರ್ದೇಶನಕೊಂಡಿರುವುದು RRR ಸಿನಿಮಾ ಮಾತ್ರವಲ್ಲ. ಈ ಮೊದಲು ಮದರ್ ಇಂಡಿಯಾ, ಸಲಾಮ್ ಬಾಂಬೆ, ಲಗಾನ್ ಸಿನಿಮಾಗಳು ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದ್ದವು.
ಆಸ್ಕರ್ ತಂದಾಗ ದಯವಿಟ್ಟು ನನಗೂ ಸ್ವಲ್ಪ ಮುಟ್ಟಲು ಕೊಡಿ; RRR ಸ್ಟಾರ್ ರಾಮ್ ಚರಣ್‌ಗೆ ಶಾರುಖ್ ವಿಶೇಷ ಮನವಿ
ಮಾರ್ಚ್ 12ಕ್ಕೆ ಪ್ರಶಸ್ತಿ ಸಮಾರಂಭ
ಆಸ್ಕರ್‌ಗೆ ನಾಮನಿರ್ದೇಶನಗಳನ್ನು ನಟರಾದ ರಿಜ್ ಅಹ್ಮದ್ ಮತ್ತು ಅಲಿಸನ್ ವಿಲಿಯಮ್ಸ್ ಪ್ರಕಟಿಸಿದ್ದಾರೆ. 95 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಚಾಟ್ ಶೋ ಹೋಸ್ಟ್ ಜಿಮ್ಮಿ ಕಿಮ್ಮೆಲ್ ಮೂರನೇ ಬಾರಿಗೆ ಹೋಸ್ಟ್ ಮಾಡಲಿದ್ದಾರೆ.