RRR: ಇನ್ನೂ ನಿಂತಿಲ್ಲ ಪ್ರಶಸ್ತಿಗಳ ಬೇಟೆ; ಆಸ್ಕರ್‌ಗೂ ಮೊದಲೇ ರಾಜಮೌಳಿ ಚಿತ್ರಕ್ಕೆ ಮತ್ತೊಂದು ಅವಾರ್ಡ್

ರೌಜಮೌಳಿ ಆರ್ ಆರ್ ಆರ್ ಸಿನಿಮಾ ಆಸ್ಕರ್‌ಗೂ ಮೊದಲೇ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 

SS Rajamouli's RRR wins Best International Film award at HCA sgk

ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಆರ್ ಆರ್ ಆರ್ ಇದೀಗ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಆಸ್ಕರ್‌ನ ಅಂತಿಮ ರೇಸ್‌ನಲ್ಲಿರುವ ಆರ್ ಆರ್ ಆರ್ ಅಕಾಡೆಮಿ ಅವಾರ್ಡ್‌ಗೂ ಮೊದಲೇ ಮತ್ತೊಂದು ಪ್ರಶಸ್ತಿ ಗೆದ್ದು ಬೀಗಿದೆ. ಹೌದು, RRR ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಫಿಲ್ಮ್ ಅವಾರ್ಡ್ಸ್‌ನಲ್ಲಿ (HCA) ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ’ಪ್ರಶಸ್ತಿಯನ್ನು ಪಡೆದುಕೊಂಡಿದೆ. 

ಅಮೆರಿಕಾ ಪ್ರತಿಷ್ಠಿತ ಪ್ರಶಸ್ತಿಯನ್ನು ರಾಜಮೌಳಿ ಮತ್ತು ರಾಮ್ ಚರಣ್ ಇಬ್ಬರೂ  ಸ್ವೀಕರಿಸಿದ್ದಾರೆ. ಖುಷಿಯಿಂದ ಇಬ್ಬರೂ ಪ್ರಶಸ್ತಿ ಸ್ವೀಕರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಆರ್ ಆರ್ ಆರ್ ತಂಡಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ HCA ಸಮಾರಂಭದಲ್ಲಿ ಆರ್ ಆರ್ ಆರ್ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 

ಪ್ರಶಸ್ತಿ ಸ್ವೀಕರಿಸಿದ ನಂತರ ಸಂತಸ ವ್ಯಕ್ತಪಡಿಸಿದ ರಾಮ್ ಚರಣ್, 'ನಾನು ವೇದಿಕೆಗೆ ಬರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ನಿರ್ದೇಶಕರು ಅವರ ಜೊತೆಯಲ್ಲಿ ಬರಲು ನನಗೆ ಹೇಳಿದರು, ಆದ್ದರಿಂದ ಬಂದೆ. ನಮಗೆಲ್ಲರಿಗೂ ಇಷ್ಟು ಪ್ರೀತಿ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಇದು ಉತ್ತಮ ಪ್ರತಿಕ್ರಿಯೆಯಾಗಿದೆ, ಆದ್ದರಿಂದ ನಾವು ಉತ್ತಮ ಚಲನಚಿತ್ರಗಳೊಂದಿಗೆ ಮರಳಿ ಬರಲಿದ್ದೇವೆ ಮತ್ತು ನಿಮ್ಮೆಲ್ಲರನ್ನೂ ರಂಜಿಸಲಿದ್ದೇವೆ. ತುಂಬಾ ಧನ್ಯವಾದಗಳು, ಧನ್ಯವಾದಗಳು HCA' ಎಂದು ಹೇಳಿದರು. 

Naatu Naatu...ಕ್ರೆಡಿಟ್ ಎಲ್ಲಾ ನೀವೆ ತಗೊಂಡ್ರಾ; ನೆಟ್ಟಿಗರ ಆಕ್ರೋಶಕ್ಕೆ ರಾಜಮೌಳಿ ರಿಯಾಕ್ಷನ್ ಹೀಗಿತ್ತು

ರಾಜಮೌಳಿ ಮಾತನಾಡಿ, ಪ್ರಶಸ್ತಿಯನ್ನು ಭಾರತೀಯ ಸಿನಿಮಾ ನಿರ್ದೇಶಕರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸಿದರು. ' ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ. ಇದು ನಿಜವಾಗಿಯೂ ನಮ್ಮೆಲ್ಲ ನಿರ್ದೇಶಕರಿಗೆ ಅಂತರರಾಷ್ಟ್ರೀಯ ಚಲನಚಿತ್ರಗಳನ್ನು ಮಾಡಬಲ್ಲೆವು ಎಂಬ ಧೈರ್ಯ ಬಂದಿದೆ.  ಅದಕ್ಕಾಗಿ HCA ಧನ್ಯವಾದಗಳು' ಎಂದು ಹೇಳಿದರು. 

'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ' ಪ್ರಶಸ್ತಿ ಜೊತೆಗೆ 'RRR' ಸಿನಿಮಾ HCA ಯಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 'ಅತ್ಯುತ್ತಮ ಆಕ್ಷನ್ ಚಿತ್ರ', 'ಅತ್ಯುತ್ತಮ ಸಾಹಸ' ಮತ್ತು 'ಅತ್ಯುತ್ತಮ ಮೂಲ ಹಾಡು' ಪ್ರಶಸ್ತಿಯನ್ನು ಗೆದ್ದು ಬೀಗಿದೆ.

ಅಮೆರಿಕಾದಲ್ಲೇ ಮಗುವಿಗೆ ಜನ್ಮ ನೀಡ್ತಾರಾ ಉಪಾಸನಾ? ಡೆಲಿವರಿ ಮಾಡಿಸುವ ವೈದ್ಯೆಯನ್ನು ಪರಿಚಯಿಸಿದ ರಾಮ್ ಚರಣ್

ಬ್ಲಾಕ್‌ಬಸ್ಟರ್‌ ಆರ್‌ಆರ್‌ಆರ್‌ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ನಾಟು ನಾಟು..' ಹಾಡು ಆಸ್ಕರ್​ಗೆ ನಾಮಿನೇಷನ್ ಆಗಿದೆ. 95ನೇ ಅಕಾಡೆಮಿ ಅವಾರ್ಡ್​ ಕಾರ್ಯಕ್ರಮ ಮಾರ್ಚ್​ 12ರಂದು ಲಾಸ್ ಏಂಜಲೀಸ್​ನಲ್ಲಿ ನಡೆಯಲಿದೆ.  ಗೋಲ್ಡನ್ ಗ್ಲೋಬ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದು ಬೀಗಿರುವ ಆರ್ ಆರ್ ಆರ್ ಆಸ್ಕರ್ ಮುಡಿಗೇರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

Latest Videos
Follow Us:
Download App:
  • android
  • ios