ನಾನು ಸಿಂಗಲ್​ ಎಂದ ಸುಷ್ಮಿತಾ: ನಿನ್​ ಜೊತೆ ಆರು ವರ್ಷ ಇದ್ದೋನು ನಾನೇ ಕಣೆ ಅಂದ ಈ ತರುಣ!

ನಾನು ಸಿಂಗಲ್​ ಎಂದ ಮಿಸ್ ಯೂನಿವರ್ಸ್‌ ಸುಷ್ಮಿತಾ ಸೇನ್​. ನಿನ್​ ಜೊತೆ ಆರು ವರ್ಷ ಇದ್ದೋನು ನಾನೇ ಕಣೆ ಅನ್ನೋದಾ ಈಕೆಗಿಂತ 15 ವರ್ಷ ಚಿಕ್ಕ ಈ ತರುಣ!
 

Rohman Shawl says him and Sushmita Sen have been together for 6 years now suc

ಮಾಜಿ ಮಿಸ್ ಯೂನಿವರ್ಸ್‌, ಬಾಲಿವುಡ್ ನಟಿ ಸುಶ್ಮಿತಾ ಸೇನ್‌ (Sushmita Sen) ರಿಲೆಷನ್‌ಶಿಪ್‌ಗಳ ಕಾರಣದಿಂದ ಸುದ್ದಿಯಾಗುವುದು ಹೊಸದೇನಲ್ಲ. ಕೆಲ ದಿನಗಳ ಹಿಂದೆ ನಟಿ ಸಕತ್​  ಸದ್ದು ಮಾಡಿದ್ದರು. ಅವರ ಮತ್ತು ಅವರ ಮಾಜಿ ಪ್ರೇಮಿ  ರೋಹ್ಮನ್ ಶಾಲ್ (Rohman Shawl) ಅವರ ವೀಡಿಯೋ ಒಂದು ವೈರಲ್‌ ಆಗಿತ್ತು. ಮತ್ತೆ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು.  ಸುದೀರ್ಘ ಸಂಬಂಧದ ನಂತರ,  ಡಿಸೆಂಬರ್ 2021 ರಲ್ಲಿ ಸುಶ್ಮಿತಾ ಸೇನ್‌ ರೋಹ್ಮನ್ ಶಾಲ್‌ ಅವರೊಂದಿಗೆ ಬ್ರೇಕಪ್‌ ಆಗಿರವ ವಿಷಯ ಘೋಷಿಸಿದ್ದರು. ಅವರ ಬ್ರೇಕಪ್‌ ನಂತರವೂ ಇಬ್ಬರು ಸ್ನೇಹಿತರಾಗಿ ಮುಂದುವರೆದರು. ರೋಹ್ಮನ್ ಅವರು ಹೆಚ್ಚಾಗಿ ಸೇನ್ ಕುಟುಂಬದೊಂದಿಗೆ ಕಾಣಿಸಿಕೊಂಡರು. ನಂತರ ಮತ್ತೆ  ಇಬ್ಬರು ಮತ್ತೆ ಒಂದಾಗಿರುವಂತೆ ವಿಡಿಯೋ ವೈರಲ್​ ಆಗಿತ್ತು.   


ಆದರೆ ಇದರ ನಡುವೆಯೇ, ಐಪಿಎಲ್ ಸಂಸ್ಥಾಪಕ,  ಉದ್ಯಮಿ ಲಲಿತ್ ಮೋದಿ   59 ವಯಸ್ಸಿನಲ್ಲಿ ಮತ್ತೆ ಸುಷ್ಮಿತಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸದ್ದು ಮಾಡಿತ್ತು.   ಲಲಿತ್ ಮೋದಿ ಕಳೆದ ವರ್ಷ  ಸುಷ್ಮಿತಾ ಸೇನ್ ಅವರೊಂದಿಗಿನ ಕೆಲವು ಸಕತ್​ ಕ್ಲೋಸ್​ ಎನಿಸುವ  ಚಿತ್ರಗಳನ್ನು ಪೋಸ್ಟ್ ಮಾಡಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. ಜೊತೆಗೆ  ಸುಷ್ಮಿತಾ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು. ಇನ್ನೇನು ಇವರಿಬ್ಬರ ಮದುವೆಯೇ ಆಗಿ ಹೋಗಿದೆ ಎಂದು ಸುದ್ದಿಯಾಗಿತ್ತು. ಈ ವಿಷಯದ ಬಗ್ಗೆ ನಟಿ ಮೌನ ವಹಿಸಿದ್ದರೂ, ಲಲಿತ್ ಮೋದಿ ಆ ಪೋಸ್ಟ್​ ಅನ್ನು ಕೆಲ ದಿನ ಡಿಲೀಟ್​ ಮಾಡದೇ ಇಟ್ಟುಕೊಂಡಿದ್ದರು. ಇದಾದ ಬಳಿಕ ನಟಿ ಸುಷ್ಮಿತಾ ಸೇನ್​ ನಾನು ಸಿಂಗಲ್‌, ಒಂಟಿಯಾಗಿದ್ದೇನೆ ಎನ್ನುವ ಹೇಳಿಕೆ ಕೊಟ್ಟು ಸಕತ್​ ಟ್ರೋಲ್​ಗೂ ಒಳಗಾಗಿದ್ದರು. 

ಯಾರೂ ಬದಲಾಗಲ್ಲ... ದುಡ್ಡು ಬಂದಾಗ ಒಳಗಿರೋದು ಹೊರಬರುತ್ತೆ- ನಿತ್ಯಾ ಮೆನನ್​ ಓಪನ್​ ಮಾತು..

ನನ್ನ ಜೀವನದಲ್ಲಿ ಯಾರೂ ಇಲ್ಲ. ನಾನು ಸ್ವಲ್ಪ ಸಮಯದಿಂದ ಒಂಟಿಯಾಗಿದ್ದೇನೆ. ನಿಖರವಾಗಿ ಹೇಳಬೇಕೆಂದರೆ, 2021 ರಿಂದ ನಾನು ಒಂಟಿಯಾಗಿ ಸುಮಾರು ಎರಡು ವರ್ಷಗಳಾಗಿವೆ. ನಾನು ಸಂಬಂಧದಲ್ಲಿಲ್ಲ. ಅದ್ಭುತ ಜನರು ನನ್ನ ಸ್ನೇಹಿತರಾಗಿದ್ದಾರೆ ಎಂದಿದ್ದರು ನಟಿ. ಸುಷ್ಮಿತಾ ಸೇನ್​ ಅತ್ತ ತಾವು ಸಿಂಗಲ್​ ಎಂದು ಘೋಷಿಸುತ್ತಿದ್ದಂತೆಯೇ, ಇತ್ತ  ಸುಮ್ಮನಿರದ ರೋಹ್ಮನ್​ ಶಾಲ್​  ಇನ್‌ಸ್ಟಾಂಟ್‌ ಬಾಲಿವುಡ್‌ ತಾಣಕ್ಕೆ ಸಂದರ್ಶನ ನೀಡಿದ್ದು, ನಾನು ಮತ್ತು ಸುಷ್ಮಿತಾ ಆರು ವರ್ಷಗಳಿಂದ ಸಂಬಂಧದಲ್ಲಿ ಇದ್ದೇವೆ ಎಂದಿದ್ದಾರೆ! ಹಾಗಿದ್ದರೆ ಸುಷ್ಮಿತಾ ಹೇಳಿದ್ದು ನಿಜನೋ, ರೋಹ್ಮನ್​ ಅವರು ಹೇಳ್ತಿರೋದು ನಿಜನೊ ಎನ್ನುವ ಗೊಂದಲದಲ್ಲಿದ್ದಾರೆ ಅಭಿಮಾನಿಗಳು.
     ಲಲಿತ್ ಮೋದಿ ಜೊತೆ ಡೇಟ್ ಮಾಡುವಾಗ ಅನೇಕರು ಸುಷ್ಮಿತಾ ಸೇನ್ ಅವರು ಟೀಕೆ ಮಾಡಿದ್ದರು. ಹಣಕ್ಕಾಗಿಯೇ ಅವರು ಲಲಿತ್ ಮೋದಿ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎಂದು ಗೋಲ್ಡ್​ ಡಿಗ್ಗರ್​ (Gold Digger) ಎಂದು ಅನೇಕರು ಟೀಕಿಸಿದ್ದರು.  ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದರು. ಲಲಿತ್ ಮೋದಿಯವರನ್ನು ಮದುವೆ ಆಗುವ ಆಲೋಚನೆ ನನಗೆ ಇಲ್ಲ.  ನಾನು ಇನ್​ಸ್ಟಾಗ್ರಾಮ್​ನಲ್ಲಿ  ಇಬ್ಬರ ಫೋಟೋ  ಹಾಕಲು ಒಂದು ಕಾರಣ ಇದೆ. ಕೆಲವೊಮ್ಮೆ ಜನರು ಮೌನವಾಗಿದ್ದಾಗ ಅವರ ಮೌನವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸುತ್ತೇನೆ. ನಾನು ನಗುತ್ತಿದ್ದೇನೆ ಎಂದು ಜನರಿಗೆ ತಿಳಿಸಲು ಒಂದು ಪೋಸ್ಟ್ ಹಾಕಿದೆ. ಅದು ಅಲ್ಲಿಗೆ ಮುಗಿದಿದೆ ಎಂದು ಅವರು ಹೇಳಿದ್ದರು.  ಅಲ್ಲಿಗೆ ತಾವು ಲಲಿತ್​ ಮೋದಿ ಜೊತೆ ರಿಲೇಷನ್​ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. 

ಅಂದಹಾಗೆ, ಸುಷ್ಮಿತಾ ಸೇನ್​ಗೆ 47 ವರ್ಷ ವಯಸ್ಸು. ಅವರು ಇದೀಗ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನಲಾದ ರೋಹ್ಮನ್​ ಶಾಲ್​ಗೆ 32ರ ಪ್ರಾಯ. ಸುಷ್ಮಿತಾಗಿಂತಲೂ ರೋಹ್ಮನ್​ 15 ವರ್ಷ ಕಿರಿಯರು.  ಅದೇ ಇನ್ನೊಂದೆಡೆ ಲಲಿತ್​ ಮೋದಿಯವರು,  90 ರ ದಶಕದ ಮತ್ತೊಂದು ಭಾರತದ ಪ್ರಸಿದ್ದ ರೂಪದರ್ಶಿ  ಉಜ್ವಲಾ ರಾವುತ್‌ ಜೊತೆ  ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಲಲಿತ್​ ಮೋದಿಯವರಿಗೆ ಈಗ 59 ವರ್ಷ ವಯಸ್ಸು!

ನಾನೇನಾದ್ರೂ ನಿನ್ನ ಮದ್ವೆಯಾಗಿದ್ರೆ... ನಿವೇದಿತಾ ಹೊಸ ರೀಲ್ಸ್​ ನೋಡಿ ಫ್ಯಾನ್ಸ್​ ಹೇಳಿದ್ದೇನು?
 

Latest Videos
Follow Us:
Download App:
  • android
  • ios