ನಟ ಯಶ್ ಅವರು ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಿದ್ಧತೆ ನಡೆಸಿದ್ದು, ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೀತೂ ಮೋಹನ್‌ದಾಸ್ ನಿರ್ದಶನದ ಟಾಕ್ಸಿಕ್ ಸಿನಿಮಾ, 2026ರ ಮಾರ್ಚ್ 19 ರಂದು ತೆರೆಗೆ ಬರಲಿದೆ. ಈ ಸ್ಟೋರಿ ನೋಡಿ..

ಭಾಷೆ ಉಳಿವಿಗೆ ಕೆಲಸ ಮಾಡಬೇಕು ಎಂದ ಯಶ್..!

ಕನ್ನಡ ಮೂಲದ ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್​ಯಶ್ (Rocking Star Yash) ಅವರು ಖಾಸಗಿ ಕಾರ್ಯಕ್ರಮಗಳಿಗೆ ಹೆಚ್ಚು ಹಾಜರಾಗಲ್ಲ. ಟಾಕ್ಸಿಕ್​​ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ರಾಕಿ ಭಾಯ್, ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ನಿ ರಾಧಿಕಾ ಪಂಡಿತ್ ಸಮೇತ ಯಶ್ ಪಾಲ್ಗೊಂಡಿದ್ದರು. ಅಲ್ಲಿ ಕನ್ನಡ, ಕರ್ನಾಟಕ, ಕನ್ನಡ ಭಾಷೆಯ ಉಳಿವಿಗೆ ಏನು ಮಾಡಬೇಕು ಎನ್ನುವ ನಗ್ಗೆ ಕಿವಿಮಾತು ಹೇಳಿದ್ದಾರೆ.

ಕನ್ನಡ ಭಾಷಾಭಿಮಾನ ಕುರಿತು ಮಾತನ್ನಾಡಿದ ಯಶ್ 'ಭಾಷೆಯ ವಿಚಾರಕ್ಕೆ ಬಂದರೆ ಕನ್ನಡ ಬರದವರಿಗೆ ಕೂಡ ಇಲ್ಲಿ ಸ್ಪರ್ಧೆ ಇಟ್ಟು ಕನ್ನಡ ಕಲಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಬಹಳ ಜನಕ್ಕೆ ಕನ್ನಡ ಗೊತ್ತಿಲ್ಲ ಅನ್ಸತ್ತೆ. ಎಲ್ಲಿಗೆ ಹೋದ್ರು, ಅಲ್ಲಿನ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟರೆ ಅದರ ಹತ್ತು ಪಟ್ಟು ತಿರುಗಿ ಬರುತ್ತದೆ. ಅದೇ ಕರ್ನಾಟಕ, ಕನ್ನಡ ನನಗೆ ಕಲಿಸಿದೆ. ನೀವೆಲ್ಲಾ ಕನ್ನಡ ಕಲಿಯಲು ಯತ್ನಿಸಿದ್ದು ಖುಷಿಯಿದೆ" ಎಂದಿದ್ದಾರೆ. ನಟಿ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ಕೂಡ ಅಲ್ಲಿ ಹಾಜರಿದ್ದು ಆ ಕಾರ್ಯಕ್ರಮಕ್ಕೆ ಹೆಚ್ಚಿನ ವಿಶೇಷ ಕಳೆ ತಂದುಕೊಟ್ಟರು.

ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್'

ನಟ ಯಶ್ ಅವರು ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಿದ್ಧತೆ ನಡೆಸಿದ್ದು, ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೀತೂ ಮೋಹನ್‌ದಾಸ್ ನಿರ್ದಶನದ ಟಾಕ್ಸಿಕ್ ಸಿನಿಮಾ, 2026ರ ಮಾರ್ಚ್ 19 ರಂದು ತೆರೆಗೆ ಬರಲಿದೆ. ಈ ಸಿನಿಮಾ ಬಗ್ಗೆ ಈಗಾಗಲೇ ಜಗತ್ತಿನಾದ್ಯಂತ ಭಾರೀ ಹೈಪ್ ಹಾಗು ನಿರೀಕ್ಷೆ ಮನೆಮಾಡಿದೆ. ಈ ಚಿತ್ರವು ಬಿಗ್ ಬಜೆಟ್ ಹಾಗು ರಿಚ್ ಮೇಕಿಂಗ್ ಹೊಂದಿದೆ. ಯಶ್ ಈ ಚಿತ್ರದಲ್ಲಿ ಮಾಡಿರುವ ಪಾತ್ರವು ಇನ್ನೂ ಮಾಡಿರದ, ಊಹೆಗೂ ನಿಲುಕದ ಪಾತ್ರ ಎನ್ನಲಾಗಿದೆ.

ಬಾಲಿವುಡ್‌ ಮೇಕಿಂಗ್‌ನ 'ರಾಮಾಯಣ ಪಾರ್ಟ್-1' ಸಿನಿಮಾ

ಅಷ್ಟೇ ಅಲ್ಲ, ನಟ ಯಶ್ ಅವರು ಬಾಲಿವುಡ್‌ ಮೇಕಿಂಗ್‌ನ 'ರಾಮಾಯಣ ಪಾರ್ಟ್-1' ಸಿನಿಮಾದಲ್ಲಿ ಮುಖ್ಯ ವಿಲನ್ ರಾವಣನ ಪಾತ್ರವನ್ನು ಕೂಡ ಮಾಡುತ್ತಿದ್ದಾರೆ. ರಾಮಾಯಣ ಚಿತ್ರದ ಇಬ್ಬರು ನಿರ್ಮಾಪಕರಲ್ಲಿ ಯಶ್ ಕೂಡ ಒಬ್ಬರು ಎಂಬುದು ಗಮನಿಸಬೇಕಾದ ಸಂಗತಿ. ಈ ಎರಡೂ ಚಿತ್ರಗಳ ಮೇಲೆ ಅಪಾರ ನಿರೀಕ್ಷೆ ಸೃಷ್ಟಿಯಾಗಿದ್ದು, ಈ ಚಿತ್ರಗಳು ತೆರೆಗೆ ಬರುವುದನ್ನೇ ಜಗತ್ತು ಕಾಯುತ್ತಿದೆ. ಕನ್ನಡದ ನಟ ಯಶ್ ಇಂದು ಜಗತ್ತೇ ಗುರುತಿಸಿರುವ ನಟ. ಜೊತೆಗೆ, ಯಶ್ ಅವರ ಪ್ರತಿಯೊಂದು ನಡೆ-ನುಡಿ ಇಂದು ಸಾಕಷ್ಟುಇ ಸದ್ದು-ಸುದ್ದಿ ಮಾಡುತ್ತದೆ.