ರಣಬೀರ್ ಆಲಿಯಾ ಮದುವೆಗೆ ದಿನಗಣನೆ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುವ ಆರ್‌ಕೆ ಸ್ಟುಡಿಯೋ

ಮುಂಬೈ(ಏ.10): ಬಾಲಿವುಡ್ ಜೋಡಿ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಮದುವೆಗೆ ದಿನಗಣನೆ ಆರಂಭವಾಗಿದ್ದು, ಅವರ ಮದುವೆಯ ಸಿದ್ಧತೆ, ಅತಿಥಿಗಳ ಪಟ್ಟಿ, ಭೋಜನದ ಮೆನು ಲಿಸ್ಟ್ ಸೇರಿದಂತೆ ಪ್ರತಿಯೊಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಈ ಮಧ್ಯೆ ಮದುವೆ ಹಿನ್ನೆಲೆಯಲ್ಲಿ ರಣಬೀರ್‌ ಕುಟುಂಬದ ಒಡೆತನದ ಆರ್‌ ಕೆ ಸ್ಟುಡಿಯೋಸ್‌ನ್ನು (RK Studios) ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಜಗಮಗಿಸುತ್ತಿದೆ.

ಸೆಲೆಬ್ರಿಟಿ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಇತ್ತೀಚೆಗೆ ಟಾಕ್ ಅಪ್ ದ ಟೌನ್ ಆಗಿದೆ. ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ ಕೆ ಸ್ಟೂಡಿಯೋ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಜಗಮಗಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆರ್‌ಕೆ ಸ್ಟುಡಿಯೋಸ್ ಅನ್ನು ದೀಪಗಳಿಂದ ಅಲಂಕರಿಸಲಾಗಿದೆ. ಈ ವಿಡಿಯೋ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಗೆ ಕೆಲವು ದಿನಗಳಷ್ಟೇ ಇದ್ದು, ಏಪ್ರಿಲ್ 14, 2022 ರಂದು ಅವರ ಮದುವೆ ನಡೆಯಲಿದೆ ಎಂದು ಆಲಿಯಾ ಸೋದರ ಸಂಬಂಧಿ ಮತ್ತು ಚಿಕ್ಕಪ್ಪ ದೃಢಪಡಿಸಿದ ಒಂದು ದಿನದ ನಂತರ ಈ ವಿಡಿಯೋ ಕಾಣಿಸಿಕೊಂಡಿದೆ. ಆರ್‌ಕೆ ಸ್ಟುಡಿಯೋಸ್ ವಿದ್ಯುತ್‌ ದೀಪಗಳಿಂದ ಜಗಮಗಿಸುತ್ತಿದ್ದು, ಮದುವೆ ಮನೆಯ ಕಳೆ ಕಟ್ಟಿದೆ. 

ಈ ಸ್ಥಳಕ್ಕೆ ಹನಿಮೂನ್ ಹೋಗುತ್ತಿದ್ದಾರೆ ರಣಬೀರ್-ಅಲಿಯಾ

ನಿನ್ನೆ ಮುಂಜಾನೆಯಷ್ಟೇ ಪಾಪರಾಜಿಗಳು ( paparazzi ), ಕಪೂರ್ ಅವರ ನಿರ್ಮಾಣ ಹಂತದಲ್ಲಿರುವ ಬಂಗಲೆ ಅಕಾ ಕೃಷ್ಣ ರಾಜ್ ಕೂಡ ವಿದ್ಯುತ್ ದೀಪಗಳಿಂದ ಅಲಂಕರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದರು. ಆಲಿಯಾ ಭಟ್ ತನ್ನ ಬದುಕಿನ ಅತ್ಯಂತ ಮಹತ್ವದ ದಿನ ಹತ್ತಿರವೇ ಇದ್ದರೂ ತನ್ನ ಕೆಲಸದ ಬದ್ಧತೆಯ ಪೂರೈಸುತ್ತಿರುವುದನ್ನು ಕೂಡ ಪಾಪಾರಾಜಿಗಳು ಸೆರೆ ಹಿಡಿದಿದ್ದಾರೆ. ಆಕೆಯ ಕಾರು ನಿನ್ನೆ ಮುಂಜಾನೆ ಜುಹುದಲ್ಲಿರುವ ತನ್ನ ಮನೆಯಿಂದ ವಾಶಿ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಅವರು ಚಿತ್ರೀಕರಣಕ್ಕಾಗಿ ಕಜ್ರತ್ ಕಡೆಗೆ ಹೋಗುತ್ತಿದ್ದರು ಎಂದು ವರದಿಯಾಗಿತ್ತು.

View post on Instagram

Ranbir Kapoor ಜೊತೆ ಮದುವೆಗೆ ಮೊದಲೇ ಮದುಮಗಳ ಗೆಟಪ್‌ನಲ್ಲಿ Alia Bhatt

ರಣಬೀರ್ ಮತ್ತು ಆಲಿಯಾ ಅವರ ಮದುವೆಗೆ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದ್ದು, ನೀತು ಕಪೂರ್ ಈ ಸಂಬಂಧವನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಬಾಂಬೆ ಟೈಮ್ಸ್‌ ಮದುವೆಯ ಬಗ್ಗೆ ಪ್ರಶ್ನಿಸಿದಾಗ ರಣಬೀರ್‌ ತಾಯಿ ನೀತೂ ಕಪೂರ್‌ ನನಗೇನೂ ಗೊತ್ತಿಲ್ಲ ಎಂದಿದ್ದರು. ನಾನು ಕೂಡ ಈ ಮದುವೆಯನ್ನು ಜೋರಾಗಿ ಆಚರಿಸಲು ಹಾಗೂ ಆ ಬಗ್ಗೆ ಜೋರಾಗಿ ಕೂಗಿ ಹೇಳಲು ಬಯಸುತ್ತೇನೆ. ಆದರೆ ಇಂದಿನ ಮಕ್ಕಳು ವಿಭಿನ್ನರಾಗಿದ್ದಾರೆ. ಇಬ್ಬರೂ ಖಾಸಗಿ ವ್ಯಕ್ತಿಗಳು. ಯಾವಗಾ ವಿವಾಹ ಆಗುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಆದಷ್ಟು ಬೇಗ ಆಗಲಿ ಎಂದು ನಾನು ಬಯಸುತ್ತೇನೆ ಏಕೆಂದರೆ ನಾನು ಅವರಿಬ್ಬರನ್ನೂ ಪ್ರೀತಿಸುತ್ತೇನೆ. ಆಲಿಯಾ ತುಂಬಾ ಮುದ್ದಾದ ಹುಡುಗಿ. ನಾನು ಅವಳನ್ನು ಮುದ್ದಾಡುತ್ತೇನೆ. ಅವಳು ಸುಂದರ ವ್ಯಕ್ತಿ ಎಂದು ನೀತು ಕಪೂರ್ ಹೇಳಿದ್ದರು.

View post on Instagram

ರಣಬೀರ್ (Ranbir Kapoor) ಮತ್ತು ಆಲಿಯಾ (Alia Bhatt) ಒಬ್ಬರಿಗೊಬ್ಬರಿಗಾಗಿ ಸಿದ್ಧರಾಗಿದ್ದಾರೆ ಮತ್ತು ಇಬ್ಬರೂ ಒಂದೇ ರೀತಿ ಇದ್ದಾರೆ. ಅವರು ಪರಸ್ಪರ ಪೂರಕವಾಗಿರುತ್ತಾರೆ ಎಂದು ನೀತು ಕಪೂರ್ ಹೇಳಿದ್ದರು. ಈ ಮಧ್ಯೆ, ಇಂದು ಮುಂಜಾನೆ, ರಣಬೀರ್ ಮತ್ತು ಆಲಿಯಾ ಅವರ ಮುಂಬರುವ ಚಿತ್ರ ಬ್ರಹ್ಮಾಸ್ತ್ರದ ತಯಾರಕರು ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಪೋಸ್ಟರ್‌ನಲ್ಲಿ ಈ ಲವ್ ಬರ್ಡ್ಸ್‌ಗಳಿದ್ದು, ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದೆ. ಏತನ್ಮಧ್ಯೆ, ನೀತು ಕಪೂರ್ ತನ್ನ ಮಗನ ದೊಡ್ಡ ದಿನವನ್ನು ಸ್ಮರಣೀಯವಾಗಿಸಲು ಎಲ್ಲಾ ಯೋಜನೆಗಳನ್ನು ರೂಪಿಸಿದ್ದಾರೆ. ರಣಬೀರ್ ಮತ್ತು ಆಲಿಯಾ ಅವರ ಮದುವೆಗೆ ಆಹಾರ ತಯಾರಿಸಲು ಅವರು ವಿವಿಧ ನಗರಗಳಿಂದ ಬಾಣಸಿಗರನ್ನು ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ.