ಅಲಿ ಫಜಲ್ ಎಂಬುವವರನ್ನು ಮದುವೆಯಾಗಿರೋ ನಟಿ ರಿಚಾ ಚಡ್ಡಾಗೆ ಈಗ ಗನ್​ ಬೇಕಂತೆ. ಅದಕ್ಕೆ ಕಾರಣ ಮಗು ಭಾರತದಲ್ಲಿ ಹುಟ್ಟಿರೋದಕ್ಕಂತೆ. ಅದಕ್ಕೇ ಪಾಕಿಸ್ತಾನಕ್ಕೆ ಕಳಿಸಲು ರೆಡಿಯಾಗಿದ್ದಾರೆ ಫ್ಯಾನ್ಸ್​. 

ಕೆಲವರು ಹಾಗೆನೇ. ಸ್ವಲ್ಪ ತಮ್ಮನ್ನು ಜನರು ಕಡೆಗಣಿಸುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಕಾಂಟ್ರವರ್ಸಿ ಹೇಳಿಕೆ ನೀಡಿ ಫೇಮಸ್​ ಆಗ್ತಾರೆ. ಇದು ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ ಕೆಲವು ಜನರಿಗೂ ಚಟವಾಗಿ ಬಿಟ್ಟಿದೆ. ಅದು ದೇಶದ್ರೋಹದ ಹೇಳಿಕೆಯಾಗಲೀ ಅಥವಾ ಯಾರದ್ದೋ ಮಾನ ತೆಗೆಯುವ ಕೆಲಸ ಮಾಡುವುದಾಗಲಿ, ನಕಲಿ ವಿಡಿಯೋಗಳನ್ನು ಹಾಕುವುದಾಗಲೀ... ಒಟ್ಟಿನಲ್ಲಿ ನೆಗೆಟಿವ್​ ಮೂಲಕವಾದರೂ ಪ್ರಚಾರದಲ್ಲಿ ಇರಬೇಕು. ಇಲ್ಲದಿದ್ದರೆ ತಿನ್ನುವ ಅನ್ನ ಜೀರ್ಣವಾಗುವುದೇ ಇಲ್ಲ. ಜನಸಾಮಾನ್ಯರ ಮಾತೇ ಹೀಗಾದರೆ ಇನ್ನು ಸೆಲೆಬ್ರಿಟಿಗಳ ಕಥೆ ಏನು? ಯಾವುದೋ ಒಂದಿಷ್ಟು ಚಿತ್ರ ಮಾಡಿ ಆ ಸಮಯದಲ್ಲಿ ಫೇಮಸ್​ ಆಗಿ ಬಳಿಕ ಕಣ್ಣೆತ್ತಿ ನೋಡುವವರೂ ಇಲ್ಲ ಎಂದಾದ ಮೇಲೆ ಹೇಗಾಗಬೇಡ ಅವರಿಗೆ, ಇದೇ ಕಾರಣಕ್ಕೆ ತಾವು ಬದುಕಿದ್ದೇವೆ ಎಂದು ತೋರಿಸಲು ಅವರಿಗೆ ತೋರುವ ದಾರಿ ವಿವಾದಾತ್ಮಕ ಹೇಳಿಕೆ.

ಅಷ್ಟಕ್ಕೂ ದೇಶದ ವಿರುದ್ಧ ಮಾತನಾಡಿದರೆ, ಅದನ್ನು ಪ್ರೋತ್ಸಾಹಿಸುವ ದೇಶದ ಒಳಗಿನ ದ್ರೋಹಿಗಳೂ ಇದ್ದಾರೆ ಎನ್ನುವುದು ಅವರಿಗೂ ಗೊತ್ತಿರುವ ವಿಷಯವೇ. ಅದೇ ಕಾರಣಕ್ಕೆ ಅಂತ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ದೇಶದ ನೆಲದಲ್ಲಿ ಬೆಳೆದು, ಇಲ್ಲಿಯ ಅನ್ನ ಉಂಡು ದೇಶದ ವಿರುದ್ಧ ಪರದೇಶಗಳಲ್ಲಿ ದೇಶದ ಮರ್ಯಾದೆ ಹೋಗುವ ಇಲ್ಲಸಲ್ಲದ ಹೇಳಿಕೆ ನೀಡುವ ಜನರಂತೆಯೇ ಇವರು ಕೂಡ. ಈಗ ಅದೇ ರೀತಿ ಹೇಳಿಕೆ ನೀಡಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ ನಟಿ ರಿಚಾ ಚಡ್ಡಾ. ಅಲಿ ಫಜಲ್​ ಎನ್ನುವವರು ಮದುವೆಯಾಗಿರುವ ಈಕೆ ಹೇಳಿಕೊಳ್ಳುವಂಥ ಚಿತ್ರಗಳೇನೂ ಮಾಡಿಲ್ಲ. ಅದಕ್ಕೇ ಸೈಡ್​ಲೈನ್​ ಆಗಿದ್ದಾರೆ. ಇದೀಗ ಮಗು ಹುಟ್ಟಿದ್ದರಿಂದ ದಿಢೀರನೆ ಫೇಮಸ್​ ಆಗುವ ನಿಟ್ಟಿನಲ್ಲಿ ಚಿತ್ರ-ವಿಚಿತ್ರ ಹೇಳಿಕೆ ಕೊಡುತ್ತಿದ್ದಾರೆ.

ಇದೀಗ ನಟಿ ಹೇಳಿದ್ದೇನೆಂದರೆ, ಈಚೆಗೆ ವರ್ಷದ ಹಿಂದೆ ಹೆಣ್ಣುಮಗುವಾಗಿದೆ. ಭಾರತದಲ್ಲಿ ತನಗೆ ಹೆಣ್ಣುಮಗು ಆಗಿರುವ ಕಾರಣ ಅದರ ರಕ್ಷಣೆಗೆ ನನಗೆ ಗನ್​ ಬೇಕಾಗಿದೆ ಎಂದಿದ್ದಾರೆ! ಭಾರತದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎನ್ನುವ ಅರ್ಥದಲ್ಲಿ ಈಕೆ ಮಾತನಾಡಿದ್ದಾರೆ. ಇದು ವಿವಾದ ಸೃಷ್ಟಿಸಿ ಫೇಮಸ್​ ಆಗಲು ನೀಡಿರುವ ಹೇಳಿಕೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ಈಕೆಯ ಮಾತು ಕೇಳಿ ನೆಟ್ಟಿಗರು ಸುಮ್ಮನೇ ಇರ್ತಾರಾ? ಹಾಗಿದ್ದರೆ ನಿನ್ನ ಅಪ್ಪ-ಅಮ್ಮ ಎಷ್ಟು ಗನ್​ ಖರೀದಿ ಮಾಡಿದ್ದರು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ, ಬಟ್ಟೆ ಬಿಚ್ಚಿ ಕುಣಿಯುವ ನಿನ್ನಂಥವಳಿಗೆ ಭಾರತದಲ್ಲಿಯೇ ರಕ್ಷಣೆ ಸಿಕ್ಕಿಲ್ವಾ ಎಂದು ಕೆಲವರು ಗರಂ ಆಗಿ ಪ್ರಶ್ನಿಸಿದ್ದರೆ, ಹಾಗಿದ್ದರೆ ನೀನು ಪಾಕಿಸ್ತಾನಕ್ಕೆ ಹೋಗುವುದು ಒಳ್ಳೆಯದು, ಅಲ್ಲಿ ಹೆಣ್ಣುಮಕ್ಕಳಿಗೆ ತುಂಬಾ ರಕ್ಷಣೆ ಇದೆ ಎಂದು ಹೇಳುತ್ತಿದ್ದಾರೆ ಮತ್ತೆ ಕೆಲವರು.

ಕೆಲ ದಿನಗಳ ಹಿಂದೆ ಮಗುವಿನ ಜನನದ ಬಗ್ಗೆ ಬರೆದು ಈಕೆ ಟ್ರೋಲ್​ಗೆ ಒಳಗಾಗಿದ್ದರು. ನಮ್ಮ ಜೀವನಕ್ಕೆ ತುಂಬಾ ಬಣ್ಣವನ್ನು ಸೇರಿಸಿದ್ದಕ್ಕಾಗಿ ಜುನ್ನಿ ಧನ್ಯವಾದಗಳು! ಒಂದು ವರ್ಷದ ಹಿಂದೆ ನಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಹೆರಿಗೆ ನೋವು ಕೆಲವು ಗಂಟೆಗಳ ಕಾಲ ನಡೆಯಿತು, ಹೆರಿಗೆ ಕೇವಲ 20 ನಿಮಿಷಗಳಲ್ಲಿ ಸಂಭವಿಸಿತು. ನ್ಯಾಚುರಲ್ ಡೆಲಿವರಿ (Natural delivery)! ಅಂದಿನಿಂದ ಜೀವನವು ಒಂದೇ ಆಗಿಲ್ಲ, ವಿಶೇಷವಾಗಿ ನನ್ನದು... ನಾನು ಒಳಗಿನಿಂದ ಹೊರಗಿನಿಂದ ಸಂಪೂರ್ಣವಾಗಿ ಬದಲಾಗಿದ್ದೇನೆ ಎಂದು ಭಾವಿಸುತ್ತೇನೆ ಎಂದು ಬರೆದಿದ್ದರು. ಅದಕ್ಕೆ ಬಹುತೇಕ ಮಂದಿ ದಿನನಿತ್ಯವೂ ಕೋಟ್ಯಂತರ ಮಂದಿ ಅಮ್ಮ ಆಗ್ತಾ ಇರ್ತಾರೆ, ನೀನೊಬ್ಬಳೇ ಅಲ್ಲ. ನಿನಗೆ ಇನ್ನೂ ಬಹಳ ಹೆರುವುದು ಬಾಕಿ ಇದೆ ಎಂದಿದ್ದರು.