28 ದಿನಗಳ ಕಾಲ ಮುಂಬೈನ ಬೈಕುಲಾ ಜೈಲಿನಲ್ಲಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ನಟಿಯ ವಿರುದ್ಧ ಬರೆದು ಮಾನನಷ್ಟ ಮಾಡಿದ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿರುವುದಾಗಿ ರಿಯಾ ಪರ ವಕೀಲ ಸತೀಶ್ ಮಾನ್‌ಶಿಂಧೆ ಹೇಳಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ಜೈಲು ಸೇರಿದ್ದ ರಿಯಾ ಚಕ್ರವರ್ತಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಇದೀಗ ಮಾಧ್ಯಮಗಳ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸೋಕೆ ಸಿದ್ಧರಾಗಿದ್ದಾರೆ ನಟಿ

ಡ್ರಗ್ಸ್ ಕೇಸ್: ನಟಿ ರಿಯಾ ಚಕ್ರವರ್ತಿಗೆ ಜಾಮೀನು..! ತಮ್ಮ ಶೋವಿಕ್‌ ಜೈಲಲ್ಲಿ

ಅಕ್ರಮವಾಗಿರುವುದರ ವಿರುದ್ಧ ಹೋರಾಡಲು ಏನು ಬೇಕಾದರೂ ಮಾಡಲಿದ್ದೇವೆ. ನಟಿಯ ವಿರುದ್ಧ ತಪ್ಪಾಗಿ ಬರೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ರಿಯಾಳ ನಿಲುವು ನನಗಿಂತ ಸ್ಟ್ರಾಂಗ್ ಆಗಿದೆ. ಅವಳೊಬ್ಬ ಫೈಟರ್. ಅವಳೊಬ್ಬಳು ಹೆಣ್ಣು ಹುಲಿ, ಅವಳು ಬೆಂಗಾಲಿ ಹೆಣ್ಣುಹುಲಿ, ಅವಳು ಹೋರಾಡುತ್ತಾಳೆ ಎಂದಿದ್ದಾರೆ.

ಆಕೆಯ ಭವಿಷ್ಯ ಮತ್ತು ಪ್ರಸಿದ್ಧಿಯನ್ನು ಹಾಳು ಮಾಡಿದವರ ವಿರುದ್ಧ ಆಕೆ ಹೋರಾಡಲಿದ್ದಾಳೆ ಎಂದು ಅವರು ಹೇಳಿದ್ದಾರೆ. ಮಂಬೈ ಹೈಕೋರ್ಟ್ ಅ.07ರಂದು ರಿಯಾಗೆ ಜಾಮೀನು ನೀಡಿತ್ತು. ಈ ಪ್ರಕರಣದಲ್ಲಿ ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್ 27ಎ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಡ್ರಗ್ಸ್‌ ತನಿಖೆ: ದೀಪಿಕಾ ಪಡುಕೋಣೆ ಫ್ಯಾಮಿಲಿ ರಿಯಾಕ್ಷನ್‌ ಹೇಗಿತ್ತು?

ನಟಿಯ ಪಾಸ್‌ಪೋರ್ಟ್ ತನಿಖಾ ತಂಡಕ್ಕೆ ನೀಡುವಂತೆ ಕೋರ್ಟ್ ರಿಯಾಗೆ ಸೂಚಿಸಿದೆ. ಹಾಗೆಯೇ ಮುಂದಿನ 10 ದಿನ ಸಮೀಪದ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ 11ರಿಂದ ಸಂಜೆ 5ರ ಒಳಗೆ ಬಂದು ರಿಪೋರ್ಟ್ ಮಾಡಬೇಕಿದೆ.