Asianet Suvarna News Asianet Suvarna News

ಡ್ರಗ್ಸ್ ಮಾಫಿಯಾ: ಇಂದ್ರಾಣಿ ಮುಖರ್ಜಿ ಇರೋ ಮುಂಬೈ ಮಹಿಳಾ ಜೈಲಿಗೆ ನಟಿ ರಿಯಾ ಶಿಫ್ಟ್..!

ನಿನ್ನೆ ಎನ್‌ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ಮುಂಬೈ ಮಹಿಳಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

Rhea Chakraborty Moved To Womens Jail In Mumbai
Author
Bangalore, First Published Sep 9, 2020, 12:45 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಎನ್‌ಸಿಬಿಯಿಂದ ವಿಚಾರಣೆಗೊಳಪಟ್ಟಿದ್ದ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಲಾಗಿತ್ತು. ಒಂದು ದಿನದ ವಿಚಾರಣೆ ನಂತರ ಬುಧವಾರ ನಟಿಯನ್ನು ಮುಂಬೈಯ ಬೈಕುಲಾ ಜೈಲಿಗೆ ಕರೆದೊಯ್ಯಲಾಗಿದೆ.

ಕಳೆದ ರಾತ್ರಿ ನಟಿಯ ಜಾಮೀನು ಅರ್ಜಿ ತಿರಸ್ಕರಿಸಲ್ಪಟ್ಟಿದ್ದು, 14 ದಿನ ಜೈಲಿನಲ್ಲಿರಲಿದ್ದಾರೆ. ವಿಡಿಯೋ ಮೂಲಕ ವಿಚಾರಣೆ ನಡೆಯಲಿದೆ. 28 ವರ್ಷದ ನಟಿ ರಿಯಾ ಚಕ್ರವರ್ತಿ ಇಂದು ಜಾಮೀನಿಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲಿದ್ದಾರೆ. ನಟಿ ಮಂಗಳವಾರ ರಾತ್ರಿ ನಟಿ ಎನ್‌ಸಿಬಿ ಕಚೇರಿಯಲ್ಲಿ ಕಳೆದಿದ್ದಾರೆ.

ಇಲ್ಲಿ ಸಂಜನಾ, ಅಲ್ಲಿ ರಿಯಾ, ಕೊನೆಗೂ NCBಯಿಂದ ಸುಶಾಂತ್ ಮಾಜಿ ಗೆಳತಿ ಅರೆಸ್ಟ್!

ಮುಂಬೈನಲ್ಲಿ ಮಹಿಳಾ ಅಪರಾಧಿಗಳಿಗಾಗಿ ಇರುವ ಏಕೈಕ ಜೈಲಾಗಿದೆ ಬೈಕುಲಾ ಜೈಲ್. ಶೀನಾ ಬೋರಾ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಹಾಗೂ ಕೊರೆಗಾಂವ್ ಭೀಮಾ ಪ್ರಕರಣದ ಆರೋಪಿ ಸುಧಾ ಭಾರದ್ವಾಜ್ ಕೂಡಾ ಇದೇ ಜೈಲಿನಲ್ಲಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಡ್ರಗ್ಸ್ ನೀಡಿದ ಆರೊಪದಲ್ಲಿ ನಟಿಯನ್ನು ಬಂಧಿಸಲಾಗಿದೆ. ನಟಿ ಸ್ವತಃ ಡ್ರಗ್ಸ್ ತೆಗೆದುಕೊಂಡ ಬಗ್ಗೆ ಕೋರ್ಟ್ ದಾಖಲೆಗಳಲ್ಲಿ ನಮೂದಿಸಿಲ್ಲ. ಸುಮಾರು 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುವಷ್ಟು ಆರೋಪ ರಿಯಾ ಮೇಲಿದೆ. ಮೂರು ದಿನ ನಟಿಯನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ. ಆಕೆಯ ಸಹೋದರ ಶೋವಿಕ್‌ನ್ನೂ ವಿಚಾರಣೆಗೊಳಪಡಿಸಲಾಗಿದೆ.

Follow Us:
Download App:
  • android
  • ios