Asianet Suvarna News

ಇಲ್ಲಿ ಸಂಜನಾ, ಅಲ್ಲಿ ರಿಯಾ, ಕೊನೆಗೂ NCBಯಿಂದ ಸುಶಾಂತ್ ಮಾಜಿ ಗೆಳತಿ ಅರೆಸ್ಟ್!

ಕೊನೆಗೂ ನಟಿ ರಿಯಾ ಚಕ್ರವರ್ತಿ ಬಂಧನ/ ನಟಿಯನ್ನು ಬಂಧಿಸಿದ ಎನ್‌ಸಿಬಿ ಅಧಿಕಾರಿಗಳು/ ಬಾಲಿವುಡ್ ನಲ್ಲಿ ಡ್ರಗ್ಸ್ ಘಾಟು/ ಸುಶಾಂತ್ ಸಿಂಗ್ ಸಾವಿನ ನಂತರ ತೆರೆದುಕೊಂಡ ಪ್ರಕರಣಗಳು

Rhea Chakraborty Arrested by NCB, To be Taken for Medical Test
Author
Bengaluru, First Published Sep 8, 2020, 4:09 PM IST
  • Facebook
  • Twitter
  • Whatsapp

ಮುಂಬೈ(ಸೆ. 08) ಮಾದಕ ವಸ್ತು ನಿಗ್ರಹ ದಳ(ಎನ್‌ಸಿಬಿ)  ಕೊನೆಗೂ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ.  ಎನ್ ಡಿ ಪಿಎಸ್ ನ ಹಲವಾರು ಸೆಕ್ಷನ್ ಗಳ ಅಡಿ ರಿಯಾ ಬಂಧನವಾಗಿದೆ.

ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ನಂತರ ಆರಂಭವಾಗಿದ್ದ ಡ್ರಗ್ಸ್ ಘಾಟು ಸ್ಯಾಂಡಲ್ ವುಡ್ ತನಕ ಬಂದಿದೆ. ಕರ್ನಾಟಕದಲ್ಲಿಯೂ ನಟಿ ರಾಗಿಣಿ ಮತ್ತು ಸಂಜನಾ ಬಂಧನವಾಗಿದೆ. ಮೂರು ದಿನಗಳ ವಿಚಾರಣೆ ನಂತರ ರಿಯಾ ಅವರನ್ನು ಬಂಧಿಸಲಾಗಿದೆ. 

ರಿಯಾ ಚಕ್ರವರ್ತಿ ಯಾರು? ಏನು ಮಾಡುತ್ತಿದ್ದರು?

ಪ್ರಿಯಾಂಕಾ ಸಿಂಗ್ (ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ), ಡಾ.ತರುಣ್ ಕುಮಾರ್ (ದೆಹಲಿಯ ಆರ್‌ಎಂಎಲ್ ಆಸ್ಪತ್ರೆ ವೈದ್ಯ)ರ ಮೇಲೆ ಎಫ್‌ಐಆರ್ ದಾಖಲಿಸಬೇಕೆಂದು ಕೋರಿ ರಿಯಾ ಚಕ್ರವರ್ತಿ ಮುಂಬೈ ಪೊಲೀಸರಿಗೆ  ಸೋಮವಾರ ದೂರು ನೀಡಿದ್ದರು. ಆದರೆ ಈಗ ಅವರನ್ನೇ ಬಂಧಿಸಲಾಗಿದೆ.

ನಾಲ್ಕು ದಿನದ ಹಿಂದೆ  ನಟಿ ರಿಯಾ ಚಕ್ರವರ್ತಿ ಸಹೋದರ ಶೊವಿಕ್‌ ಚಕ್ರವರ್ತಿ ಮತ್ತು ಸಾಮ್ಯುಯೆಲ್‌ ಮಿರಂಡಾ ಅವರನ್ನು ನ್ಯಾಷನಲ್‌ ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೊ (ಎನ್‌ಸಿಬಿ)  ಬಂಧಿಸಿತ್ತು. ಈಗ ರಿಯಾ ಬಂಧನವಾಗಿದ್ದು ಅವರನ್ನು ವೈದ್ಯ ಪರೀಕ್ಷೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಬಾಲಿವುಡ್ ನ 25  ಮಂದಿ ಸೆಲೆಬ್ರಿಟಿಗಳಿಗೆ ಸಮನ್ಸ್ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. 

Follow Us:
Download App:
  • android
  • ios