ಸೆಲ್ಫಿಗಾಗಿ ಬಂದ ಫ್ಯಾನ್‌ ಕೆನ್ನೆಗೆ ಹೊಡೆದ ನಟಿ ರೇಖಾ: ಆತ ಇನ್ಮುಂದೆ ಸ್ನಾನ ಮಾಡಲ್ಲ ಎಂದ ನೆಟ್ಟಿಗರು!

ಸೆಲ್ಫಿಗಾಗಿ ಬಂದ ಫ್ಯಾನ್‌ ಕೆನ್ನೆಗೆ ಹೊಡೆದಿದ್ದಾರೆ ಬಾಲಿವುಡ್‌ ನಟಿ ರೇಖಾ: ಆತ ಇನ್ಮುಂದೆ ಸ್ನಾನ ಮಾಡಲ್ಲ ಎಂದ ನೆಟ್ಟಿಗರು, ಅಷ್ಟಕ್ಕೂ ಆಗಿದ್ದೇನು?
 

Rekha slaps a man after clicking photos with him  fans say  not take a bath now suc

80-90ರ ದಶಕದಲ್ಲಿ ಬಾಲಿವುಡ್​ ಆಳಿದ ನಟಿ ರೇಖಾ. ಹಲವಾರು ಹಿಟ್​ ಚಿತ್ರಗಳನ್ನು, ಬ್ಲಾಕ್​ಬಸ್ಟರ್​ (Blockbuster) ಚಿತ್ರ ಕೊಟ್ಟವರು. ಎಷ್ಟೋ ಫ್ಯಾನ್ಸ್​ ನಿದ್ದೆ ಕದ್ದವರು. ವಯಸ್ಸಾದರೂ ಚಿರ ಯೌವನ ಇವರದ್ದು, ನಟಿ ರೇಖಾಗೆ ಈಗ  ವಯಸ್ಸು 68. ಆದರೂ ಇಂದಿಗೂ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರ ಮೊಗದಲ್ಲಿ ಅದೇ ವರ್ಚಸ್ಸು ಕಾಣಿಸುತ್ತದೆ. ಇವರ ಮತ್ತು ಅಮಿತಾಭ್​ ಬಚ್ಚನ್​ ಅವರ ಲವ್​ ಸ್ಟೋರಿ ಎಲ್ಲರಿಗೂ ತಿಳಿದದ್ದೇ. ಆದರೆ ಕೊನೆಗೂ ಅಮಿತಾಭ್​ ರೇಖಾ ಅವರಿಗೆ ಸಿಗಲೇ ಇಲ್ಲ. ಇದೇ ನೋವಿನಲ್ಲಿದ್ದ ನಟಿ, ದೆಹಲಿಯ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಗರ್​ವಾಲ್​ ಅವರನ್ನು 1990ರಲ್ಲಿ ವಿವಾಹವಾದರು. ಆಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.  ರೇಖಾಳ (Rekha) ಜೀವನದಲ್ಲಿ ಇದ್ದಕ್ಕಿದ್ದಂತೆ ಮುಖೇಶ್ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಕತ್​ ಸದ್ದು ಮಾಡಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು.

ಈ ವಯಸ್ಸಿನಲ್ಲಿಯೂ ತಮ್ಮ ಸೊಬಗು, ಶೈಲಿ ಮತ್ತು ಸೌಂದರ್ಯದಿಂದ ಆಗಾಗ್ಗೆ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಾರೆ  ಹಿರಿಯ ನಟಿ ರೇಖಾ. ಅವರು ಕಾರ್ಯಕ್ರಮವೊಂದರಲ್ಲಿ ಸುಂದರವಾದ ಉಡುಪಿನಲ್ಲಿ ನಿನ್ನೆ ಕಾಣಿಸಿಕೊಂಡರು. ಅವರು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರೊಂದಿಗೆ ಪೋಸ್ ನೀಡುತ್ತಿದ್ದರು. ಈ ಸಂದರ್ಭದಲ್ಲಿ  ಸೆಲ್ಫಿ (Selfie) ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಅಭಿಮಾನಿಯೊಬ್ಬರ ಕೆನ್ನೆಗೆ ರೇಖಾ ಹೊಡೆದಿದ್ದು, ಸೋ ಸ್ವೀಟ್‌ ಎನ್ನುತ್ತಿದ್ದಾರೆ ನೆಟ್ಟಿಗರು! ಕೆನ್ನೆಗೆ ಹೊಡೆದರೆ ಅದನ್ನು ಮೆಚ್ಚುವುದೇ ಎಂದು ಅಚ್ಚರಿಯಾಗಬಹುದು. ಆದರೆ ಅಸಲಿಗೆ ನಟಿ ರೇಖಾ, ಆ ಅಭಿಮಾನಿಯ ಕೆನ್ನೆಗೆ ಪ್ರೀತಿಯಿಂದ ಹೊಡೆದಿದ್ದು, ಇದರಿಂದ ನೆಟ್ಟಿಗರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ನಟಿಯ ಕೈ ಆತನ ಕೆನ್ನೆ ಮುಟ್ಟಿರುವ ಕಾರಣ, ಇನ್ನು ಮುಂದೆ ಆತ ಸ್ನಾನನೇ ಮಾಡಲ್ಲ, ಆ ಸ್ಪರ್ಶ ತೊಳೆದುಹೋಗಿಬಿಡತ್ತೆ ಎಂದು ಮುಖಕ್ಕೆ ನೀರು ಹಾಕಲ್ಲ ಎಂದು ತಮಾಷೆ ಮಾಡಿದ್ದಾರೆ. ಈ ವಿಡಿಯೋ ಸಕತ್‌ ವೈರಲ್‌ ಆಗಿದ್ದು,  ಸೋಶಿಯಲ್ ಮೀಡಿಯಾ ಬಳಕೆದಾರರು ನೀನೇ ಅದೃಷ್ಟವಂತ ಬಿಡೋ ಎಂದು ಅಭಿಮಾನಿಗೆ ಹೇಳುತ್ತಿದ್ದಾರೆ.  

68 ವಯಸ್ಸಾದ್ರೂ ಬತ್ತದ ರೇಖಾ ಬ್ಯೂಟಿ: ಗಂಡ- ಅತ್ತೆ ಕಾಟ ಇಲ್ದಿದ್ರೆ ಹೀಗೆ ಕಾಣೋದು ಅಂದ್ರು ಫ್ಯಾನ್ಸ್​!
 
ಅಂದಹಾಗೆ ರೇಖಾ ಅವರ  ಜೀವನ ಸಾಕಷ್ಟು ನಿಗೂಢತೆಯಿಂದ  ಕೂಡಿದೆ. ತಮಿಳಿನ ಸೂಪರ್‌ಸ್ಟಾರ್ ಜೆಮಿನಿ ಗಣೇಶನ್ ಹಾಗೂ ನಟಿ ಕೆ ಪುಷ್ಪವಲ್ಲಿ ಅವರ ಮಗಳಾಗಿ ಜನಿಸಿದ್ದ ರೇಖಾ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಸ್ಟಾರ್​ ಕಿಡ್​ ಎಂಬ ಹೆಸರಿನಿಂದ ಬಂದವರಲ್ಲ. 

70ರ ದಶಕದ ವರೆಗೂ ತಮ್ಮ ಕುಟುಂಬದ ಹಿನ್ನೆಲೆಯನ್ನೇ ರೇಖಾ ಹೇಳಿಕೊಂಡಿರಲಿಲ್ಲ. ನಂತರ ಇವರ ಜೀವನ ನೋವಿನ ಸರಮಾಲೆಯಾಗಿಯೇ ಉಳಿತು. ಸೂಪರ್‌ಸ್ಟಾರ್ ಅಮಿತಾಭ್​ ಬಚ್ಚನ್ (Amithabh Bhacchan) ಮತ್ತು  ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ.  ಇದು ಜಗಜ್ಜಾಹೀರವಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಬರೆದಿರುವ ತಮ್ಮ ಆತ್ಮಚರಿತ್ರೆ ‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲಿ (Rekha The Untold Story) ಇವರ ಜೀವನದ ಹಲವಾರು ಅಂಶಗಳು ಇವೆ.

ಪಾಕ್ ಸೆಲೆಬ್ರಿಟಿಗಳೊಂದಿಗೆ ಡೇಟ್ ಮಾಡಿದ ರೇಖಾ, ಸುಶ್ಮಿತಾ ಸೇನ್, ಸಲ್ಮಾನ್ ಖಾನ್‌!

 

Latest Videos
Follow Us:
Download App:
  • android
  • ios