ಆಲಿಯಾ ಭಟ್ ಅವರನ್ನು 'ಭವಿಷ್ಯದ ಲೆಜೆಂಡ್' ಎಂದು ಹಾಡಿಹೊಗಳಿ ತನ್ನ ಪ್ರಶಸ್ತಿಯನ್ನು ಆಲಿಯಾಗೆ ಅರ್ಪಿಸಿದ್ದಾರೆ ಹಿರಿಯ ನಟಿ ರೇಖಾ.

ನಟಿ ಅಲಿಯಾ ಭಟ್ ಉತ್ತಮ ನಟಿ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ಅಲಿಯಾ ಮದುವೆಯಾಗಿ, ಮಗು ಜನಿಸಿದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ತನ್ನ ಅದ್ಭುತ ನಟನೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇತ್ತೀಚಿಗಷ್ಟೆ ಆಲಿಯಾ ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿಯವಾಡಿ ಸಿನಿಮಾದಲ್ಲಿನ ಉತ್ತಮ ಅಭಿನಯಕ್ಕೆ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪ್ರಶಸ್ತಿಯನ್ನು ಬಾಲಿವುಡ್ ಹಿರಿಯ ನಟಿ ರೇಖಾ ನೀಡಿದರು. 

ಅಲಿಯಾಗೆ ಪ್ರಶಸ್ತಿ ನೀಡಿ ಮಾತನಾಡಿದ ರೇಖಾ ಹಾಡಿಹೊಗಳಿದರು. ಭವಿಷ್ಯದ ಲೆಜೆಂಡ್ ಎಂದು ಕರೆದರು. ಅದೇ ಅವಾರ್ಡ್ ಸಮಾರಂಭದಲ್ಲಿ ರೇಖಾ ಅವರಿಗೆ ಚಿತ್ರೋದ್ಯಮದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ನಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲಿಯಾಗೆ ಪ್ರಶಸ್ತಿ ನೀಡಿದ ಹಿರಿಯ ನಟಿ ರೇಖಾ, ನನ್ನ ಪ್ರಶಸ್ತಿಯನ್ನು ಭವಿಷ್ಯದ ಲೆಜಂಡ್‌ಗೆ ಅರ್ಪಿಸುತ್ತಿದ್ದೀನಿ ಎಂದು ಹೇಳಿದರು. ರೇಖಾ ಮಾತು ಕೇಳಿ ಆಲಿಯಾ ಪ್ರತಿಕ್ರಿಯೆ ಹೇಗಿತ್ತು ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋನಿ ಹಂಚಿಕೊಂಡ ಪ್ರಶಸ್ತಿ ಸಮಾರಂಭದ ವೀಡಿಯೊ ಕ್ಲಿಪ್ ನಲ್ಲಿ ಆಲಿಯಾ ಮತ್ತು ರೇಖಾ ಇಬ್ಬರೂ ಬಿಳಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ವೇದಿಕೆಯ ಮೇಲೆ ಮಾತನಾಡಿದ ರೇಖಾ, 'ನಾನು ಇಂದು ನನ್ನ ಪ್ರಶಸ್ತಿಯನ್ನು ನಮ್ಮ ದೇಶದ ಭವಿಷ್ಯದ ದಂತಕಥೆಗೆ ಅರ್ಪಿಸುತ್ತೇನೆ ಮತ್ತು ಅವಳು ಅದಕ್ಕೆ ನಾಂದಿಯಾಗಿದ್ದಾಳೆ' ಎಂದರು. ರೇಖಾ ಮಾತನಿಂದ ಆಲಿಯಾ ನೆಲದ ಮೇಲೆ ಕುಸಿದು ಬೀಳುವ ಹಾಗೆ ತಮಾಷೆ ಮಾಡಿದರು. 

ಆಲಿಯಾ, ರೇಖಾ ಅವರ ಮುಂದೆ ಕೈ ಜೋಡಿಸಿ ನಮಸ್ಕರಿಸಿದರು ಮತ್ತು ರೇಖಾ ಅವರಿಂದ ಟ್ರೋಫಿಯನ್ನು ಸ್ವೀಕರಿಸುವ ಮೊದಲು ಅಪ್ಪಿಕೊಂಡರು. ಇನ್ನೂ ಅದೇ ದಿನ ಅಲಿಯಾ ಪತಿ ರಣಬೀರ್ ಕಪೂರ್ ಪರವಾಗಿಯೂ ಪ್ರಶಸ್ತಿ ಸ್ವೀಕರಿಸಿದರು. ರಣಬೀರ್ ಬ್ರಹ್ಮಾಸ್ತ್ರ ಚಿತ್ರದ ಉತ್ತಮ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

Alia Bhatt: ಪತ್ನಿಯಿಂದ ದೂರವಿರಿ ಎಂದು ರಣಬೀರ್​ಗೆ ನೆಟ್ಟಿಗರ ಸಲಹೆ! ಯಾಕೆ ಗೊತ್ತಾ?

ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಆಲಿಯಾ 

ಆಲಿಯಾ ಭಟ್ ಇತ್ತೀಚಿಗಷ್ಟೆ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಪತಿ ಮತ್ತು ಮಗಳ ಜೊತೆ ಆಲಿಯಾ ಲಂಡನ್‌ನಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿದರು. ಆಲಿಯಾ ಭಟ್ ಹುಟ್ಟುಹಬ್ಬ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವರ್ಷ ಆಲಿಯಾಗೆ ವಿಶೇಷವಾದ ಹುಟ್ಟುಹಬ್ಬವಾಗಿತ್ತು. ಮೊದಲ ಬಾರಿಗೆ ಮಗಳ ಜೊತೆ ಜನ್ಮದಿನ ಸಂಭ್ರಮಿಸಿದ್ದರು.

View post on Instagram

Alia Bhatt : ನಟನೆ ಮಾತ್ರವಲ್ಲ ಬ್ಯುಸಿನೆಸ್ ವಿಷ್ಯದಲ್ಲೂ ನಟಿ ಸೂಪರ್ ಹಿಟ್

ಆಲಿಯಾ ಬಳಿ ಇರುವ ಸಿನಿಮಾಗಳು 

 ಅಲಿಯಾ ಸದ್ಯ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಗುವಿಗೆ ಜನ್ಮ ನೀಡುವ ಮೊದಲೇ ಆಲಿಯಾ ಈ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದರು. ಗರ್ಭಿಣಿಯಾದ ಕಾರಣ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಶೂಟಿಂಗ್ ಆರಂಭಿಸಿದ್ದಾರೆ. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್ ಜೊತೆಗೆ ಹಾಲಿವುಡ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇನ್ನೂ ಫರ್ಹಾನ್ ಅಖ್ತರ್ ಜೀ ಲೇ ಝರಾ ಸಿನಿಮಾದಲ್ಲೂ ಆಲಿಯಾ ನಟಿಸುತ್ತಿದ್ದಾರೆ.