Valentine's Day: ಪತ್ನಿಗೆ ರವೀಂದರ್​ ಬರೆದ ಲವ್​ ಲೆಟರ್ ವೈರಲ್​

ಮದುವೆಯಾದಾಗಿನಿಂದಲೂ ಟ್ರೋಲ್​ ಆಗುತ್ತಿರುವ ಜೋಡಿ ಮಹಾಲಕ್ಷ್ಮಿ ಮತ್ತು ರವೀಂದರ್​ ಅವರದ್ದು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರವೀಂದರ್​ ಅವರು,  ಪ್ರೇಮಿಗಳ ದಿನಕ್ಕೆ ಪತ್ನಿಗೆ ಲವ್​ ಲೆಟರ್​ ಬರೆದಿದ್ದಾರೆ. ಏನಿದೆ ಅದರಲ್ಲಿ?
 

Ravindar Chandrasekarans Love Letter To His Wife Mahalakshmi Goes Viral

ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ (Mahalakshmi) ಹಾಗೂ ನಿರ್ಮಾಪಕ ರವೀಂದರ್‌ (Raveender) ಕಳೆದ ಸೆಪ್ಟೆಂಬರ್​ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ದಿನದಿಂದಲೂ ಈ ಜೋಡಿ ಟ್ರೋಲ್​ ಆಗುತ್ತಲೇ ಇದೆ.  ಇವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ದಿನದಿನಕ್ಕೂ ಟ್ರೋಲ್​ಗಳು ಹೆಚ್ಚುತ್ತಲೇ ಇವೆ. ರವೀಂದರ್​ ಅವರು ತೀರಾ ದಪ್ಪಗಿದ್ದು, ಸುಂದರಿ ಮಹಾಲಕ್ಷ್ಮಿ ಹೂವಿನ ಹಾಗೆ ಇರುವುದರಿಂದಲೇ ಈ ಜೋಡಿ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಮುದ್ದಾದ ಜೋಡಿ ಮದುವೆಯಾಗಿ ಆರು ತಿಂಗಳುಗಳನ್ನು ಕಳೆದಿವೆ. ಟ್ರೋಲ್​ (Troll) ಆದಷ್ಟೂ ಹೆಚ್ಚೆಚ್ಚು ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುವ ಈ ದಂಪತಿ, ಟ್ರೋಲಿಗರನ್ನು ಸುಸ್ತು ಮಾಡಿಸುತ್ತಿದ್ದಾರೆ.

ರವೀಂದರ್​ ಅವರು ಆಗರ್ಭ ಶ್ರೀಮಂತರೆಂದು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹಲವರು ಅಂದುಕೊಳ್ಳುತ್ತಲೇ ಇದ್ದಾರೆ. ಅದಕ್ಕೆ ತಡೆ ಕೆಡಿಸಿಕೊಳ್ಳದ ಮಹಾಲಕ್ಷ್ಮಿ, ಪತಿ ರವೀಂದರ್​ ಅವರು ಕೊಡುವ ದುಬಾರಿ ಉಡುಗೊರೆಯಗಳ ಬಗ್ಗೆ ಸುದ್ದಿ ಮಾಡುತ್ತಲೇ ಇಲ್ಲ. ಚಿನ್ನದ ಮಂಚದಿಂದ (golden cot) ಹಿಡಿದು ಕೆಜಿಗಟ್ಟಲೆ ಚಿನ್ನ, ವಜ್ರ, ವೈಢೂರ್ಯಗಳ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದು, ತಮ್ಮನ್ನು ಕಂಡು ಹೊಟ್ಟೆ ಉರಿದುಕೊಳ್ಳುವವರ ಹೊಟ್ಟೆಗೆ ಇನ್ನಷ್ಟು ಕಿಚ್ಚು ಹೊತ್ತಿಸುತ್ತಿದ್ದಾರೆ. ಪ್ರೀತಿಗೆ ಅಂದ ಮುಖ್ಯವಲ್ಲ, ನಿಷ್ಕಲ್ಮಶ ಹೃದಯ ಮುಖ್ಯ ಎಂಬುದು ಮಹಾಲಕ್ಷ್ಮಿ ಅವರ ಮಾತು. 

Valentines Day: ಬೆಡ್​ರೂಮಲ್ಲಿ ತಬ್ಬಿ ಮುದ್ದಾಡಿದ ವೀಡಿಯೋ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ!

ಇಂದು ಪ್ರೇಮಿಗಳ ಹಬ್ಬದ (Valentine's Day) ದಿನದ ಪ್ರಯುಕ್ತ ಪುನಃ ಮಹಾಲಕ್ಷ್ಮಿ ವಿಶೇಷವಾದ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಪತಿಗೆ ಪ್ರೇಮಿಗಳ ದಿನಕ್ಕೆ ವಿಶ್​ ಮಾಡಿದ್ದಾರೆ. ರವೀಂದರ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಪತ್ನಿಯ ಜೊತೆ ರೆಡ್ ಔಟ್​ಫಿಟ್​ನಲ್ಲಿರುವ (putfit) ಫೋಟೋ ಶೇರ್​ ಮಾಡಿಕೊಂಡು ವೆಲೈಂಟೈನ್ಸ್​ ಡೇಗೆ ಶುಭ ಕೋರಿದ್ದಾರೆ. ನಿನ್ನ ನಗುವಿನಲ್ಲಿಯೇ ನಾನು ಸ್ವರ್ಗ ಕಾಣುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಹಾಲಕ್ಷ್ಮಿ ಅವರು ಪ್ರತಿಕ್ರಿಯೆ ನೀಡಿ,  ‘ಧನ್ಯವಾದ ನನ್ನ ಪ್ರೀತಿಯೇ, ನನ್ನನ್ನು ಜಗತ್ತಿನ ಹೆಮ್ಮೆಯ ಪತ್ನಿಯನ್ನಾಗಿ ಮಾಡಿದಿರಿ’ ಎಂದಿದ್ದಾರೆ.  ಅವರ ಈ ಮಾತನ್ನು ನೋಡಿದ ಅಭಿಮಾನಿಗಳು ಈ ಜೋಡಿಯನ್ನು ಟೀಕಿಸಿದವರಿಗೆ ಸರಿಯಾದ ಉತ್ತರ ಸಿಕ್ಕಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಕೆಲವರು  ‘ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಆಗುತ್ತಿದೆ’ ಎಂದು ಕಮೆಂಟ್​ ಹಾಕುತ್ತಿದ್ದಾರೆ.

ಇದೇ ವೇಳೆ ರವೀಂದರ್​ ಅವರು ಮಹಾಲಕ್ಷ್ಮಿ ಅವರಿಗೆ ಲವ್​ ಲೆಟರ್​ (Love letter) ಬರೆದಿದ್ದಾರೆ. ಅದರಲ್ಲಿ ಅವರು, ನನ್ನ ಪ್ರೀತಿ ಆ ನಿಜವಾದ ಪ್ರೀತಿಯಾಗಿರಲಿಲ್ಲ. ಮಹಾಲಕ್ಷ್ಮಿಯನ್ನು ಪ್ರೀತಿಸಿದಾಗ ಇದ್ದ ಪ್ರೀತಿ ಅಷ್ಟು ನಿಜವಾಗಿರಲಿಲ್ಲ. ನಾನು ಶ್ರೀಮತಿ ಮಹಾಲಕ್ಷ್ಮಿ ರವೀಂದ್ರನನ್ನು ಪ್ರೀತಿಸಲು ಪ್ರಾರಂಭಿಸಿದಾಗ ಅದರಲ್ಲಿ 1% ಸುಳ್ಳಾಗಿರಲಿಲ್ಲ. ಸುಂದರವಾದ ಜೀವನ ತಿಳಿದಿದೆ ಮತ್ತು ನಾವು ಇತರರ ಬಗ್ಗೆ ಹೊಂದಿರುವ ಗೌರವ ಮತ್ತು ಪ್ರೀತಿಯಿಂದಾಗಿ ಸುಂದರವಾದ ಜೀವನವನ್ನು ನಡೆಸುತ್ತೇವೆ' ಎಂದಿದ್ದಾರೆ.  'ನಾವು ಇತರರ ಬಗ್ಗೆ ಹೊಂದಿರುವ ಗೌರವ ಮತ್ತು ಪ್ರೀತಿಯಿಂದಾಗಿ ಸುಂದರವಾದ ಜೀವನವು ಏನೆಂಬುದು ತಿಳಿದಿದೆ. ಸುಂದರವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಆ ಮೂಲಕ ನಮ್ಮಿಬ್ಬರ ಬಗ್ಗೆ ಗೌರವ, ಪ್ರೀತಿ ಹೆಚ್ಚುತ್ತದೆ' ಎಂದಿದ್ದಾರೆ ರವೀಂದರ್​. ನಾವು ಪ್ರೀತಿಸುವ ಜನರಿಗಿಂತ ನಾವು ಪ್ರೀತಿಸುವ ಜನರು ನಮ್ಮನ್ನು ಹೆಚ್ಚು ಪ್ರೀತಿಸುವುದು ಜೀವನ. ಆ ಜೀವ ನನ್ನ ಹೆಂಡತಿ. Happy valentine's day dear mahalakshmi ಎಂದಿದ್ದಾರೆ ರವೀಂದರ್​. 

No Kiss Please: ಕಿಸ್​ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್​ ನಟ-ನಟಿಯರು!

ನೋಡಲು ಸುಂದರವಾಗಿರಬೇಕು ಎಂದುಕೊಂಡು ಸುಂದರನನ್ನೋ, ಸುಂದರಿಯನ್ನೋ ಮದುವೆಯಾಗಿ ಪಡಬಾರದ ಕಷ್ಟಪಟ್ಟು ಆತ್ಮಹತ್ಯೆ (suicide) ಮಾಡಿಕೊಳ್ಳುವುದು ಹೆಚ್ಚುತ್ತಿರುವ ಈ ದಿನಗಳಲ್ಲಿ ಕೇವಲ ಸೌಂದರ್ಯವನ್ನೇ ಆಧಾರವಾಗಿಟ್ಟುಕೊಂಡು ರವೀಂದರ್​, ಮಹಾಲಕ್ಷ್ಮಿ ಜೋಡಿಯನ್ನು ಟೀಕಿಸಿರುವವರಿಗೆ ಈ ಪ್ರೇಮಿಗಳ ದಿನವಾದರೂ ಇವರ ಪ್ರೀತಿ ನೋಡಿ ಬುದ್ಧಿ ಬರಲಿ ಎಂದು ಕೆಲ ಈ ಜೋಡಿಯ ಅಭಿಮಾನಿಗಳು ಹಾರೈಸುತ್ತಿದ್ದಾರೆ. 

 

Latest Videos
Follow Us:
Download App:
  • android
  • ios