ಹುಲಿ ಫೋಟೋ ಕ್ಲಿಕ್ಕಿಸಿ ಸಂಕಷ್ಟಕ್ಕೆ ಸಿಲುಕಿದ 'ಕೆಜಿಎಫ್-2' ನಟಿ ರವೀನಾ; ತನಿಖೆಗೆ ಆದೇಶ
ಕೆಜಿಎಫ್-2 ನಟಿ ರವೀನಾ ಟಂಡನ್ ಹುಲಿಯ ಫೋಟೋ ಕ್ಲಿಕ್ಕಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರವೀನಾ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಕೆಜಿಎಫ್-2 ನಟಿ ರವೀನಾ ಟಂಡನ್ ಹುಲಿಯ ಫೋಟೋ ಕ್ಲಿಕ್ಕಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಣಿಗಳ ಬಗ್ಗೆ ಆಪಾಕ ಪ್ರೀತಿ ಹೊಂದಿರುವ ನಟಿ ರವೀನಾ ಇತ್ತೀಚಿಗಷ್ಟೆ ಸಫಾರಿಗೆ ತೆರಳಿದ್ದರು. ಸತ್ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ರವೀನಾ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ನಟಿ ರವೀನಾ ಹುಲಿ ಸಮೀಪ ಹೋಗಿ ವಿಡಿಯೋ ಮಾಡಿದ್ದಾರೆ, ತೊಂದರೆ ನೀಡಿದ್ದಾರೆ ಎಂದು ಮೀಸಲು ಅಧಿಕಾರಿಗಳು ತನಿಖೆ ಆದೇಶಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ವಾಹನ ಚಾಲಕ ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳು ಹಾಗೂ ರವೀನಾ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅರಣ್ಯ ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ನಟಿ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದ ಜೀಪ್‌ನಲ್ಲಿಯೇ ತಾನು ಪ್ರಯಾಣಿಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಇಲಾಖೆ ಗೊತ್ತುಪಡಿಸಿದ ಪ್ರವಾಸೋದ್ಯಮ ಮಾರ್ಗದಿಂದ ಹೊರಹೋಗಿಲ್ಲ ಎಂದು ಹೇಳಿದ್ದಾರೆ.
ಇಲಾಖೆಯಿಂದ ಒದಗಿಸಲಾದ ತರಬೇತಿ ಪಡೆದ ಮಾರ್ಗದರ್ಶಿಗಳು ಮತ್ತು ಚಾಲಕರು ಸಫಾರಿಯಲ್ಲಿ ಜೊತೆಗಿದ್ದರು ಎಂದು ಹೇಳಿದ್ದಾರೆ. ರವೀನಾ ನವೆಂಬರ್ 22ರಂದು ಸತ್ಪುರ ಮೀಸಲು ಪ್ರದೇಶಕ್ಕೆ ಭೇಟಿ ನೀಡಿದ್ದರು.
ಪಾಪರಾಜಿಗಳ ಮುಂದೆ ಮುಖ ಮುಚ್ಚಿಕೊಂಡಿದ್ದೇಕೆ 'ಕೆಜಿಎಫ್ 2' ನಟಿ ರವೀನಾ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ರವೀನಾ ಇದ್ದ ಸಫಾರಿ ವಾಹನವು ಹುಲಿಯ ಸಮೀಪ ತಲುಪುತ್ತಿರುವುದನ್ನು ಗಮನಿಸಬಹುದು. ಹುಲಿ ಘರ್ಜಿಸುತ್ತಿರುವುದನ್ನು ಕೇಳಬಹುದು. ಹುಲಿ ಕಾಣಿಸುವುದೇ ಅಪರೂಪ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ರವೀನಾ ಟಂಡನ್ ಅವರು ಕ್ಯಾಮೆರಾ ಹಿಡಿದು ಫೋಟೋ ಮತ್ತು ವಿಡಿಯೋ ಚಿತ್ರಿಸಿಕೊಂಡಿದ್ದಾರೆ. ಈ ವೇಳೆ ಹುಲಿಯ ಅತೀ ಸಮೀಪಕ್ಕೆ ಅವರ ಜೀಪ್ ಹೋಗಿರುವುದು ತಿಳಿದುಬಂದಿದೆ. ಅವರ ವರ್ತನೆಯಿಂದ ಹುಲಿಗೂ ಕಿರಿಕಿರಿ ಆಗಿದ್ದು, ಅದು ಘರ್ಜಿಸಿ ಮುಂದೆ ಸಾಗಿದೆ. ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೋ ವೈರಲ್ ಆದ ಬಳಿಕ ಅರಣ್ಯದ ಉಪ ವಿಭಾಗಾಧಿಕಾರಿ ಧೀರಜ್ ಸಿಂಗ್ ಚೌಹಾಣ್ ಹಿರಿಯ ಅಧಿಕಾರಿಗಳ ನಿರ್ದೇಶನದ ನಂತರ, ಈ ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿ ಎಂದು ಹೇಳಿದರು.
KGF 2; ಚಿತ್ರೀಕರಣ ವೇಳೆ ಪ್ರಶಾಂತ್ ನೀಲ್ ಕಾಲೆಳೆದ ರವೀನಾ ಟಂಡನ್; ಮೇಕಿಂಗ್ ವಿಡಿಯೋ ವೈರಲ್
ನಟಿ ರವೀನಾ ಟಂಡನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೆಜಿಎಫ್-2 ಮೂಲಕ ದೊಡ್ಡ ಮಟ್ಟದ ಗೆಲವು ದಾಖಲಿಸಿದರು. ಅನೇಕ ವರ್ಷಗಳ ಬಳಿಕ ರವೀನಾ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟ ಸಿನಿಮಾವಾಗಿದೆ. ಕೆಜಿಎಫ್-2ನಲ್ಲಿ ರವೀನಾ ಟಂಡನ್, ರಮಿಕಾ ಸೇನ್ ಪಾತ್ರದಲ್ಲಿ ನಟಿಸಿದ್ದರು. ರಮಿಕಾ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ಬಳಿಕ ರವೀನಾ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ಸೀರಿಸ್ ಮತ್ತು ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.