Asianet Suvarna News Asianet Suvarna News

'ನಕಲಿ' ರೋಡ್ ರೇಜ್ ವಿಡಿಯೋ ಪೋಸ್ಟ್; 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ರವೀನಾ ಟಂಡನ್!

ಟ್ವಿಟರ್‌ನಲ್ಲಿ ತನ್ನನ್ನು ಅಪಹಾಸ್ಯ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ ವ್ಯಕ್ತಿಗೆ ನಟಿ ರವೀನಾ ಟಂಡನ್ ಮಾನನಷ್ಟ ನೋಟಿಸ್ ನೀಡಿದ್ದಾರೆ.

Raveena Tandon Files Rs 100 Crore Defamation Suit Over 'Fake' Road Rage Video skr
Author
First Published Jun 15, 2024, 2:32 PM IST

ಬಾಲಿವುಡ್ ನಟಿ ರವೀನಾ ಟಂಡನ್ ಕುಡಿದ ಮತ್ತಿನಲ್ಲಿ ಮೂವರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ನಟಿ ರವೀನಾರನ್ನು ಸುತ್ತುವರೆದು ಪ್ರತಿಹಲ್ಲೆ ಮಾಡಿದ್ದಾರೆ ಎಂಬ ಆರೋಪ ಜೂನ್ 1ರಂದು ಕೇಳಿ ಬಂದಿತ್ತು. ಈ ಸಂಬಂಧ ವಿಡಿಯೋವೊಂದು ಟ್ವಿಟ್ಟರ್‌ನಲ್ಲಿ ಹರಿದಾಡಿ ವೈರಲ್ ಆಗಿತ್ತು. 

ವೈರಲ್ ವೀಡಿಯೊ ರವೀನಾ ಟಂಡನ್ ಅವರ ಕಾರು ವ್ಯಕ್ತಿಯೊಬ್ಬರ ತಾಯಿಗೆ ಡಿಕ್ಕಿ ಹೊಡೆದಿದೆ ಮತ್ತು ನಟಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿತ್ತು. ಆದರೆ, ಮುಂಬೈ ಪೊಲೀಸರ ತನಿಖೆಯಿಂದ ನಟಿಯ ಕಾರು ಯಾರಿಗೂ ಡಿಕ್ಕಿಯಾಗಿಲ್ಲ ಎಂದು ದೃಢಪಟ್ಟಿದೆ.

ಇದೀಗ ನಟಿ ತನಗೆ ಸಂಬಂಧಿಸಿದ ಈ ಅಪಘಾತ ಘಟನೆಯನ್ನು 'ತಪ್ಪಾಗಿ ನಿರೂಪಿಸಿದೆ' ವೀಡಿಯೊ ಎಂದಿದ್ದು, ಕೇಳಿದರೂ ಅದನ್ನು ತೆಗೆದುಹಾಕಲು ನಿರಾಕರಿಸಿದ ವ್ಯಕ್ತಿಯ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 

ರಾಶ್ ಡ್ರೈವಿಂಗ್ ಅಪಘಾತ, ಕುಡಿದ ಮತ್ತಿನಲ್ಲಿ ನಿಂದನೆ: ನಟಿ ರವೀನಾ ಟಂಡನ್ ಮೇಲೆ ಹಲ್ಲೆಗೆ ಮುಂದಾದ ಜನ
 

ಪೊಲೀಸರು ಬಹಿರಂಗಪಡಿಸಿದ ಸರಿಯಾದ ಸಂಗತಿಗಳನ್ನು ವಿಡಿಯೋ ಪೋಸ್ಟ್ ಮಾಡಿದ ವ್ಯಕ್ತಿಗೆ ತಿಳಿಸಲಾಗಿದೆ. ಇದರ ಹೊರತಾಗಿಯೂ, ತನ್ನ X (ಹಿಂದಿನ ಟ್ವಿಟರ್) ಖಾತೆಯಿಂದ ವೀಡಿಯೊವನ್ನು ತೆಗೆದುಹಾಕಲು ರವೀನಾ ಟಂಡನ್ ವಿನಂತಿಯ ಪತ್ರವನ್ನು ಕಳುಹಿಸುವಂತೆ ಆ ವ್ಯಕ್ತಿ ಒತ್ತಾಯಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ರವೀನಾ, ತಮ್ಮ ವಕೀಲರಾದ ಸನಾ ರಯೀಸ್ ಖಾನ್ ಅವರ ಮೂಲಕ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. 

ರವೀನಾ ಪರ ವಕೀಲ ಸನಾ ರಯೀಸ್ ಖಾನ್, 'ಇತ್ತೀಚೆಗೆ, ರವೀನಾ ಅವರನ್ನು ಸುಳ್ಳು ಮತ್ತು ಕ್ಷುಲ್ಲಕ ದೂರಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದ್ದು, ಅದನ್ನು ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟಪಡಿಸಲಾಗಿದೆ ಮತ್ತು ಯಾವುದೇ ದೂರು ದಾಖಲಾಗಿಲ್ಲ. ಆದರೆ, ಈ ಘಟನೆಯ ಬಗ್ಗೆ ಎಕ್ಸ್‌ನಲ್ಲಿ ಪತ್ರಕರ್ತ ಎಂದು ಹೇಳಿಕೊಳ್ಳುವ ವ್ಯಕ್ತಿ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ. ಇದು ವಾಸ್ತವಿಕವಾಗಿ ತಪ್ಪಾಗಿದೆ ಮತ್ತು ತಪ್ಪುದಾರಿಗೆಳೆಯುತ್ತಿದೆ' ಎಂದಿದ್ದಾರೆ. 

ಜೂಹಿಯಿಂದ ರವೀನಾವರೆಗೆ.. ಬಾಲಿವುಡ್ ಬೆಡಗಿಯರೂ ಅವರ ಸಿಕ್ಕಾಪಟ್ಟೆ ಸಿರಿವಂತ ಗಂಡಂದಿರೂ..!
 

ರವೀನಾ ಟಂಡನ್ ತನ್ನ ನೋಟಿಸ್‌ನಲ್ಲಿ, ಆ ವ್ಯಕ್ತಿ ತನಗೆ ಸಾಮಾಜಿಕ ಮಾಧ್ಯಮ ಮತ್ತು ನ್ಯೂಸ್ ಪೋರ್ಟಲ್‌ಗಳಲ್ಲಿ ಸಾರ್ವಜನಿಕವಾಗಿ ಅವಮಾನ ಮತ್ತು ಮಾನಸಿಕ ಯಾತನೆ ಉಂಟುಮಾಡುವ ಉದ್ದೇಶದಿಂದ ನಕಲಿ ಸುದ್ದಿಗಳೊಂದಿಗೆ ಮಾನನಷ್ಟಗೊಳಿಸಿದ್ದಾನೆ ಎಂದು ಆರೋಪಿಸಿದ್ದಾರೆ.

'ಈ ಸುಳ್ಳು ಸುದ್ದಿಯ ಪ್ರಸಾರವು ರವೀನಾ ಅವರ ಹೆಸರಿಗೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನದಂತೆ ತೋರುತ್ತಿದೆ. ಈ ಸುಳ್ಳುಗಳನ್ನು ನಿರಂತರವಾಗಿ ಹರಡುವ ಉದ್ದೇಶವು ಸುಲಿಗೆ ಮತ್ತು ರವೀನಾ ಅವರ ಘನತೆಯ ವೆಚ್ಚದಲ್ಲಿ ಅಗ್ಗದ ಪ್ರಚಾರವನ್ನು ಪಡೆಯುವ ಉದ್ದೇಶದಿಂದ ಬೇರೂರಿದೆ. ಈ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ನ್ಯಾಯವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಮಾನಹಾನಿಕರ ಅಭಿಯಾನವನ್ನು ಮುಂದುವರೆಸಿದ್ದಕ್ಕಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ವಕೀಲೆ ಸನಾ ಖಾನ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios