ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿದ್ದೆ ತಪ್ಪಾಯ್ತು; ಜಾನ್ ಅಬ್ರಾಹಂ ನಿಶ್ಚಿತಾರ್ಥ ಸಂಭ್ರಮದ ಲುಕ್ ಟ್ರೋಲ್
ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ಜಾನ್ ಅಬ್ರಾಹಂ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
ಬಾಲಿವುಡ್ ಸ್ಟಾರ್ ಜಾನ್ ಅಬ್ರಹಾಂ ಸದ್ಯ ಬಹುನಿರೀಕ್ಷೆಯ ಪಠಾಣ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಪಠಾಣ್ ಟ್ರೈಲರ್ ಮತ್ತು ಹಾಡುಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದಲ್ಲಿ ಜಾನ್ ಅಬ್ರಾಹಂ ವಿಲನ್ ಆಗಿ ಅಬ್ಬರಿಸಿದ್ದಾರೆ. ಈ ನಡುವೆ ಜಾನ್ ಅಬ್ರಾಹಂ ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. ಜಾನ್ ಅಬ್ರಾಹಂ ಅವರು ಬಟ್ಟೆ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಹಾಜರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದೆ. ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಜಾನ್ ಕಾಲೆಳೆಯುತ್ತಿದ್ದಾರೆ.
ಜಾನ್ ಅಬ್ರಾಹಂ ನಿಶ್ಚಿತಾರ್ಥ ಸಮಾರಂಭಕ್ಕೆ ಡೆನಿಮ್ ಪ್ಯಾಂಟ್ ಟೀ ಶರ್ಟ್ ಮತ್ತು ಬ್ಲ್ಯಾಕ್ ಜೆರ್ಸಿ ಧರಿಸಿ ಹಾಜರಾಗಿದ್ದರು. ಜಾನ್ ಅಬ್ರಹಾಂ ಧರಿಸಿದ್ದ ಬಟ್ಟೆ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಹಾಗಾಗಿ ಟ್ರೋಲ್ ಮಾಡುತ್ತಿದ್ದಾರೆ. ಅಂಬಾನಿ ಮನೆ ಕಾರ್ಯಕ್ರಮಕ್ಕೆ ಎಲ್ಲರೂ ಅದ್ದೂರಿಯಾಗಿ ರೆಡಿಯಾಗಿ ಬಂದಿದ್ದಾರೆ ಆದರೆ ನೀವು ಯಾಕೆ ಹೀಗೆ ಬಂದಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಇದು ಒತ್ತಾಯವೂರ್ವಕವಾಗಿ ಕಾರ್ಯಕ್ರಮಕ್ಕೆ ಬಂದ ಹಾಗೆ ಇದೆ' ಎಂದು ಹೇಳಿದರು. 'ಧಮ್ಕಿ ಹಾಕಿ ಕರೆಸಿದ ಹಾಗಿದೆ, ಇದೇನು ನಿಶ್ಚಿತಾರ್ಥಕ್ಕೆ ಹಾಕುವ ಬಟ್ಟೆನಾ?' ಎಂದು ಮತ್ತೋರ್ವ ಕೇಳಿದ್ದಾನೆ.
'ಪಠಾಣ್' ವಿವಾದ: ಅನಗತ್ಯ ಟೀಕೆ ಮಾಡ್ಬೇಡಿ.. ಬಿಜೆಪಿ ಮುಖಂಡರಿಗೆ ಮೋದಿ ಸಲಹೆ!
ಆದರೆ ಜಾನ್ ಅಬ್ರಾಹಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದ್ದೂರಿ ನಿಶ್ಚಿತಾರ್ಥಗೆ ಎಂಟ್ರಿ ಕೊಟ್ಟು, ಪಾಪಾರಾಜಿಗಳ ಕಡೆ ಕೈ ಬೀಸಿ ಸಮಾರಂಭ ಎಂಜಾಯ್ ಮಾಡಿದ್ದಾರೆ. ಟ್ರೋಲ್‌ಗಳು ಯಾರನ್ನು ಬಿಟ್ಟಿಲ್ಲ ಇದೀಗ ಜಾನ್ ಅಬ್ರಾಹಂ ಕೂಡ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಪಠಾಣ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದ ಜಾನ್ ಇದೀಗ ಬಟ್ಟೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಪಠಾಣ್ ಸಿನಿಮಾ ಮುಂಗಡ ಬುಕ್ಕಿಂಗ್ ಓಪನ್ ಆಗಿದ್ದು ಅಭಿಮಾನಿಗಳು ಮುಗಿಬಿದ್ದು ಟೆಕೆಟ್ ಬುಕ್ ಮಾಡುತ್ತಿದ್ದಾರೆ.
Pathaan ದೆಹಲಿಯಲ್ಲಿ ಟಿಕೆಟ್ ಬೆಲೆ 2100 ರೂ.; ಮುಂಬೈ - ಬೆಂಗಳೂರು ಬೆಲೆ ಕೇಳಿ ಶಾಕ್ ಆಗ್ಬೇಡಿ
ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿಬಂದ ಪಠಾಣ್ ಸಿನಿಮಾ ಹಾಡುಗಳ ಮೂಲಕವೇ ದೊಡ್ಡ ವಿವಾದ ಸೃಷ್ಟಿಸಿತ್ತು. ಹಾಡನ್ನು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಚಿತ್ರೀಕರಿಸಿಲಾಗಿದೆ ಬೇಷರಂ ರಂಗ್ ಹಾಡನ್ನು ಬ್ಯಾನ್ ಮಾಡಬೇಕು, ಅಶ್ಲೀಲತೆ ಪ್ರಚಾರ ಮಾಡಲಾಗುತ್ತಿದೆ, ಕೇಸರಿ ಬಣ್ಣದ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಪಠಾಣ್ ಬೈಕಾಟ್ ಟ್ರೆಂಡ್ ಆಗುತ್ತಿದೆ. ಆದರೆ ಶಾರುಖ್ ಮತ್ತು ತಂಡ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 25ರಂದು ಸಿನಿಮಾ ನೋಡಿ ಎಂದು ಅಭಿಮಾನಿಗಳಿಗೆ ಹೇಳುತ್ತಿದ್ದಾರೆ.