ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಲಿದ್ದಾರೆ. ಸ್ಯಾಂಡಲ್‌ವುಡ್ ಕಿರಿಕ್ ಚೆಲುವೆ ಬಾಲಿವುಡ್ ಬಿಗ್‌ ಬಿ ಜೊತೆ ಮಿಂಚಲಿದ್ದಾರೆ.

ವಿಕಾಸ್ ಬಹ್ಲ್ ಅವರ ಮುಂದಿನ ಚಿತ್ರದಲ್ಲಿ ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ತಾತ್ಕಾಲಿಕವಾಗಿ ಸಿನಿಮಾಗೆ 'ಡೆಡ್ಲಿ' ಎಂದು ಹೆಸರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಚಿತ್ರವು ತಂದೆ-ಮಗಳ ಕಥೆಯಾಗಿದೆ.

ಕಿರಿಕ್ ಚೆಲುವೆ ಬಾಲಿವುಡ್ ಎಂಟ್ರಿ: ಸಿದ್ಧಾರ್ಥ್ ಮಲ್ಹೋತ್ರಾಗೆ ರಶ್ಮಿಕಾ ಜೋಡಿ

ಇದರಲ್ಲಿ ನೀನಾ ಗುಪ್ತಾ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಲಿದ್ದು, ಮಾರ್ಚ್ 2021 ರಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ.

ಇತ್ತೀಚೆಗಷ್ಟೇ ನಟಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸುತ್ತಿರುವುದು ಸುದ್ದಿಯಾಗಿತ್ತು. ಬಾದ್‌ಶಾ ಜೊತೆ ವಿಡಿಯೋ ಸಾಂಗ್ ಮೂಲಕ ನಟಿ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ರಶ್ಮಿಕಾ.