ಕಿರಿಕ್ ಚೆಲುವೆ ಬಾಲಿವುಡ್ ಎಂಟ್ರಿ: ಸಿದ್ಧಾರ್ಥ್ ಮಲ್ಹೋತ್ರಾಗೆ ರಶ್ಮಿಕಾ ಜೋಡಿ
ಇತ್ತೀಚೆಗಷ್ಟೇ ಬಾಲಿವುಡ್ ಟಾಪ್ ರ್ಯಾಪರ್ ಜೊತೆ ಕಾಣಿಸ್ಕೊಂಡ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಬಾಗಿಲು ತೆರೆದಿದೆ. ಬಾಲಿವುಡ್ ಖ್ಯಾತ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಲಿದ್ದಾರೆ ಕಿರಿಕ್ ಚೆಲುವೆ
ಇತ್ತೀಚೆಗಷ್ಟೇ ಬಾಲಿವುಡ್ ಟಾಪ್ ರ್ಯಾಪರ್ ಜೊತೆ ಕಾಣಿಸ್ಕೊಂಡ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಬಾಗಿಲು ತೆರೆದಿದೆ. ಬಾಲಿವುಡ್ ಖ್ಯಾತ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಲಿದ್ದಾರೆ ಕಿರಿಕ್ ಚೆಲುವೆ
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸೌತ್ ಬೆಡಗಿ ರಶ್ಮಿಕಾ ಮಂದಣ್ಣ ಜೋಡಿಯಾಗಲಿದ್ದಾರೆ. ಮಿಷನ್ ಮಂಜು ಅನ್ನೋ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಾಗಿ ನಟಿಸಲಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಸಂಬಂಧವನ್ನು ಎಂದೆಂದಿಗೂ ಬದಲಿಸಿದ ಪಾಕಿಸ್ತಾನದ ನೆಲದಲ್ಲಿಯೇ 1970ರಲ್ಲಿ ನಡೆದ ರೋಮಾಂಚನಕಾರಿ ಮಿಷನ್‌ನ ನಿಜಘಟನೆ ಆಧಾರಿತ ಸಿನಿಮಾ ಆಗಿದೆ ಇದು.
ನೈಟ್ ಕರ್ಫ್ಯೂ ಹೇರಿದ ಸರ್ಕಾರ, ಜೇಟ್ಲಿ ಪ್ರತಿಮೆಗೆ BS ಬೇಡಿ ನಕಾರ; ಡಿ.23ರ ಟಾಪ್ 10 ಸುದ್ದಿ!
ಈ ಸಿನಿಮಾ ರಶ್ಮಿಕಾ ಮಂದಣ್ಣ ಅವರ ಬಾಲಿವುಡ್ ಎಂಟ್ರಿ ಸಿನಿಮಾ ಆಗುವುದು ಮಾತ್ರವಲ್ಲದೆ, ಆಡ್ ಫಿಲ್ಮ್ ಮೇಕರ್ ಶಾಂತನು ಬಗ್ಚಿ ಅವರ ಮೊದಲ ಫೀಚರ್ ಸಿನಿಮಾ ಆಗಿದೆ. ಸಿದ್ಧಾರ್ಥ್ ಸಿನಿಮಾದಲ್ಲಿ ರಾ ಏಜೆಂಟ್ ಪಾತ್ರ ಮಾಡಲಿದ್ದಾರೆ. ಪರ್ವೀಸ್ ಶೇಖ್, ಅಸೀಮ್ ಅರೋರಾ ಹಾಗೂ ಸುಮಿತ್ ಬಥೇಜಾ ಕಥೆ ಬರೆದಿದ್ದಾರೆ.
ರಾ ಏಜೆಂಟ್‌ಗಳ ಕಷ್ಟದ ಬದುಕನ್ನು ತೋರಿಸೋ ಸಿನಿಮಾದ ಭಾಗವಾಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ ನಟ. ನಿಜಘಟನೆಯಿಂದ ಪ್ರೇರೇಪಿತವಾದ ಮಿಷನ್ ಮಜ್ನು ರಾ ಏಜೆಂಟ್‌ಗಳ ಕಷ್ಟದ ಬದುಕನ್ನು ತೋರಿಸಿಕೊಡಲಿದೆ. ಧೀರ ಏಜೆಂಟ್‌ಗಳ ಕಥೆ ಹೇಳಲು ಹೆಮ್ಮೆ ಇದೆ ಎಂದಿದ್ದಾರೆ ನಟ.
ಸೈಫ್ ಆಲಿ ಖಾನ್‌ಗೆ ಸೋಹಾ ಬಿಟ್ಟು ಮತ್ತೊಬ್ಬ ತಂಗಿ ಇದ್ದಾಳೆ ಗೊತ್ತಾ?
ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಪ್ರೇಕ್ಷಕರಿಂದ ತುಂಬಾ ಪ್ರೀತಿಯನ್ನು ಪಡೆಯುವ ಅದೃಷ್ಟ ನನ್ನದು. ನಟಿಯಾಗಿ, ಇದು ಪ್ರೇಕ್ಷಕರನ್ನು ಸಂಪರ್ಕಿಸುವ ಚಿತ್ರದ ಕಥೆಯಾಗಿದೆ. ಸಿನಿಮಾದ ಭಾಷೆ ನನಗೆ ಎಂದಿಗೂ ತಡೆಗೋಡೆಯಾಗಿಲ್ಲ. ಸುಂದರವಾಗಿ ಬರೆಯಲ್ಪಟ್ಟ ಮಿಷನ್ ಮಜ್ನುವನ್ನು ನನಗೆ ನೀಡಿದ್ದಕ್ಕಾಗಿ ನಾನು ತಯಾರಕರಿಗೆ ಕೃತಜ್ಞಳಾಗಿದ್ದೇನೆ ಎಂದಿದ್ದಾರೆ.
ಉತ್ಸಾಹಿ ತಂಡದ ಭಾಗವಾಗಲು ನಾನು ಉತ್ಸುಕಳಾಗಿದ್ದೇನೆ. ಅದನ್ನು ಇನ್ನಷ್ಟು ಅದ್ಭುತಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಹಿಂದಿ ಚಿತ್ರರಂಗದಲ್ಲಿ ನನ್ನ ಪ್ರಯಾಣವನ್ನು ಪ್ರಾರಂಭಿಸಲು ಮತ್ತು ಹೊಸ ಪ್ರೇಕ್ಷಕರನ್ನು ತಲುಪಲು ನಾನು ತುಂಬಾ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ರಶ್ಮಿಕಾ.