ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯನ್ನು ಫ್ಯಾನ್ಸ್ ಇಷ್ಟಪಡ್ತಾರೆ. ಮದುವೆಯಾಗಿ ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿರುವ ಜೋಡಿಯ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಫ್ಯಾನ್ಸ್ ಆಸಕ್ತರಾಗಿದ್ದಾರೆ. ಪಾಡ್ ಕಾಸ್ಟ್ ಒಂದರಲ್ಲಿ ಕಾಣಿಸಿಕೊಂಡ ಈ ಕ್ಯೂಟ್ ಜೋಡಿ ದಾಂಪತ್ಯದ ಕೆಲ ಗುಟ್ಟುಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು 8 ತಿಂಗಳಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಹೊಸ ಬಾಳಿಗೆ ಕಾಲಿಟ್ಟ ಜೋಡಿ ಈಗ ಆನ್ ಸ್ಕ್ರೀನ್ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಶೀಘ್ರವೇ ಅವರು ಅಭಿನಯದ ರಣಬಲಿ ಸಿನಿಮಾ ತೆರೆಗೆ ಬರ್ತಿದೆ. ಸಿನಿಮಾ ಪ್ರಚಾರದಲ್ಲಿ ದಂಪತಿ ಬ್ಯುಸಿಯಿದ್ದು, ಸಂದರ್ಶನದಲ್ಲಿ ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ.

ಇಬ್ಬರ ಮಧ್ಯೆ ಜಗಳ ಆಗೋದು ಯಾವಾಗ?

ಶುಭಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ರಶ್ಮಿಕಾ, ವಿಜಯ್ ಜೊತೆ ಯಾವ ವಿಚಾರಕ್ಕೆ ಜಗಳವಾಗುತ್ತದೆ ಅಂತ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ರಶ್ಮಿಕಾ, ನಮ್ಮ ನಡುವೆ ಜಗಳವೇ ಆಗುವುದಿಲ್ಲ. ಏಕೆಂದರೆ ನಾವು ಎಲ್ಲವನ್ನೂ ಒಟ್ಟಿಗೆ ಎಂಜಾಯ್ ಮಾಡುತ್ತೇವೆ ಎಂದಿದ್ದಾರೆ. ಆದರೆ ವಿಜಯ್ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವಾಗ ನನಗೆ ಅವರ ಗಮನ ಬೇಕಾದಾಗ ಸ್ವಲ್ಪ ಕೋಪ ಬರುತ್ತೆ ಎಂದಿದ್ದಾರೆ. ನನಗೆ ಸ್ವಲ್ಪ ಅಟೆನ್ಶನ್ ಬೇಕು ಎಂದಾಗ ವಿಜಯ್ ಫೋನ್ನಲ್ಲಿ ಕೆಲಸ ಮಾಡುತ್ತಿದ್ದರೆ, ನಾನು ಪ್ರೀತಿಯಿಂದ ಒಂದು, ಎರಡು ಬಾರಿ ವಿಜು,ವಿಜ ಎಂದು ಕರೆಯುತ್ತೇನೆ. ಆದರೆ ಅವರು ಕೇಳಿಸಿಕೊಳ್ಳದಿದ್ದರೆ ನಂತರ ನನಗೆ ಕೋಪ ಬರುತ್ತದೆ. ಆಗ ಅವರು ತಕ್ಷಣ ಪ್ರತಿಕ್ರಿಯಿಸುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.

ಇಬ್ಬರಲ್ಲಿ ಹೆಚ್ಚು ರೋಮ್ಯಾಂಟಿಕ್‌ ಯಾರು?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ಇಬ್ಬರಲ್ಲಿ ಯಾರು ಹೆಚ್ಚು ರೋಮ್ಯಾಂಟಿಕ್‌ ಎನ್ನುವ ಪ್ರಶ್ನೆಗೆ ರಶ್ಮಿಕಾ ತಾವು ಎಂದು ಉತ್ತರ ನೀಡಿದ್ದಾರೆ. ಕಮ್ಯೂನಿಕೇಷನ್‌ ಗೆ ಹೆಚ್ಚು ಮಹತ್ವ ನೀಡುವ ರಶ್ಮಿಕಾ ಮಂದಣ್ಣ, ಆಗಾಗ ವಿಜಯ್‌ ದೇವರಕೊಂಡ ಅವರಿಗೆ ಮೆಸ್ಸೇಜ್‌ ಮಾಡ್ತಿರುತ್ತಾರಂತೆ. ಅಲ್ದೆ ದಿನದಲ್ಲಿ ನೂರಾರು ಬಾರಿ ಐ ಲವ್‌ ಯೂ ಹೇಳುತ್ತಾರಂತೆ. ನನಗೆ ಸಮಯ ಸಿಕ್ಕಾಗೆಲ್ಲ ನಾನು ವಿಜಯ್‌ ನೋಡಲು ಬರ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ರಶ್ಮಿಕಾ ಹೊಗಳಿದ ದೇವರಕೊಂಡ

ವಿಜಯ್ ದೇವರಕೊಂಡ ಅವರು ರಶ್ಮಿಕಾ ತುಂಬಾ ಅರ್ಥಮಾಡಿಕೊಳ್ಳುವ ಪತ್ನಿ ಎಂದಿದ್ದಾರೆ. ತಾವು ಕೆಲಸದಲ್ಲಿ ಬ್ಯುಸಿಯಾಗಿರುವ ಬಗ್ಗೆ ರಶ್ಮಿಕಾಗೆ ತಿಳಿಸಿದಾಗ, ಅವರು ಯಾವುದೇ ಪ್ರಶ್ನೆ ಕೇಳದೆ ತಕ್ಷಣ ಅರ್ಥಮಾಡಿಕೊಳ್ಳುತ್ತಾರೆ ಎಂದು ವಿಜಯ್ ಹೇಳಿದ್ದಾರೆ. ಇದಕ್ಕೆ ರಶ್ಮಿಕಾ ಕೂಡ ಸಮ್ಮತಿಸಿದ್ದಾರೆ. ನಾವಿಬ್ಬರೂ ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಶೂಟಿಂಗ್, ಪ್ರಮೋಷನ್ ಮತ್ತು ಸಿನಿಮಾ ರಿಲೀಸ್ ಸಮಯದಲ್ಲಿ ಎಷ್ಟು ಒತ್ತಡ ಇರುತ್ತದೆ ಎಂಬುದು ನಮಗೆ ಗೊತ್ತು ಎಂದಿದ್ದಾರೆ.